ಕೊಹ್ಲಿ- ಪಂತ್‌ಗೆ ಬ್ರೇಕ್ ನೀಡಿದ ಬಿಸಿಸಿಐ

Social Share

ಹೊಸದಿಲ್ಲಿ,ಫೆ.19- ಭಾನುವಾರ ಕೋಲ್ಕತ್ತಾದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ತವರಿಗೆ ತೆರಳಿರುವ ಹಿರಿಯ ಬ್ಯಾಟ್ಸ್‍ಮನ್ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಬಿಸಿಸಿಐ 10 ದಿನಗಳ ವಿರಾಮ ನೀಡಿದೆ.
ಫೆ.24 ರಂದು ಲಕ್ನೋದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕೊಹ್ಲಿ ಆಡುವುದಿಲ್ಲ, ನಂತರ ಫೆ.26 ಮತ್ತು 27 ರಂದು ಧರ್ಮಶಾಲಾದಲ್ಲಿ ಇನ್ನೂ ಎರಡು ಪಂದ್ಯಗಳು ನಡೆಯಲಿವೆ. ಕೊರೊನ ಸಾಂಕ್ರಾಮಿಕ ಕಾರಣದಿಂದ ಎಲ್ಲಾ ಆಟಗಾರರಿಗೂ ಮುಂಜಾಗೃತಾ ಕ್ರಮವಾಗಿ ಬಯೋ-ಬಬಲ್ ಕಡ್ಡಾಯ ಗೊಳಿಸಲಾಗಿದೆ.
ಕೊಹ್ಲಿ ಬಯೋ-ಬಬಲ್ ನಿಂದ ಹೊರನಡೆದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದ್ದು, ಎಲ್ಲಾ ನಿಯಮಿತ ಆಲï-ಫಾಮ್ರ್ಯಾಟ್ ಆಟಗಾರರಿಗೆ ಅವರ ಕೆಲಸದ ಹೊರೆ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯವನ್ನು ಕಾಳಜಿ ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಬಬಲ್‍ನಿಂದ ಆವರ್ತಕ ವಿರಾಮಗಳನ್ನು ನೀಡುವುದು ನೀತಿಯಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಪಿಟಿಐಗೆ ತಿಳಿಸಿದ್ದಾರೆ.

Articles You Might Like

Share This Article