ನವದೆಹಲಿ,ಮೇ 30- ಐಪಿಎಲ್ ಫೈನಲ್‍ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್‌ಕಿಂಗ್ಸ್ ತಂಡ ವಿರೋಚಿತ ಗೆಲುವು ಪಡೆದು ಬೀಗಲು ಕಾರಣರಾದ ರವೀಂದ್ರ ಜಡೇಜಾ ಹಾಗೂ ತಂಡದ ನಾಯಕ ಎಂ.ಎಸ್.ಧೋನಿ ಅವರನ್ನು ವಿರಾಟ್ ಕೋಹ್ಲಿ ಹಾಡಿ ಹೊಗಳಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಜಡೇಜಾ ಅವರು ಕೊನೆ ಎರಡು ಎಸೆತಗಳಲ್ಲಿ ಒಂದು ಸಿಕ್ಸ್ ಮತ್ತು ಬೌಂಡರಿ ಬಾರಿಸುವ ಮೂಲಕ ಸಿಎಸ್‍ಕೆ ಪಂದ್ಯದ ಗೆಲುವಿಗೆ ಪ್ರಮುಖ ಕಾರಣಕರ್ತರಾಗ್ದಿದ್ದರು.
ಈ ವಿರೋಚಿತ ಗೆಲುವನ್ನು ಸಿಎಸ್‍ಕೆ ತಂಡದವರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ನಡೆಸಿರುವ ಬೆನ್ನಲ್ಲೆ ವಿಶ್ವ ಟೆಸ್ಟ್ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳಲು ಯುಕೆಯಲ್ಲಿರುವ ವಿರಾಟ್ ಕೋಹ್ಲಿ ಅವರು ಜಡೇಜಾ ಅವರ ಆಟವನ್ನು ಕೊಂಡಾಡಿರುವುದೇ ಅಲ್ಲದೆ ಧೋನಿ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಕಂದಕಕ್ಕೆ ಉರುಳಿದ ಬಸ್: 10 ಮಂದಿ ವೈಷ್ಣೋ ದೇವಿ ಯಾತ್ರಿಕರ ದುರ್ಮರಣ
ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಜಡೇಜಾ ಅವರ ಸಿಕ್ಸರ್ ಮತ್ತು ಫೋರ್‍ಗಳನ್ನು ವಿರಾಟ್ ಇನ್ಸ್‍ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ನಿಮ್ಮ ಹೊಡೆತ ಅದ್ಭುತವಾಗಿತ್ತು ವೆಲಡನ್ ಚಾಂಪಿಯನ್ ರವೀಂದ್ರ ಜಡೇಜಾ ಎಂದು ಉಲ್ಲೇಖಿಸಿದ್ದಾರೆ.ಮಾತ್ರವಲ್ಲ, ತಂಡವನ್ನು ಮುನ್ನಡೆಸಿದ ಧೋನಿ ಅವರನ್ನು ಕೋಹ್ಲಿ ಸ್ಮರಿಸಿಕೊಂಡಿದ್ದಾರೆ.
25ಕ್ಕೂ ಹೆಚ್ಚು ಬಾರಿ ಇರಿದು, ಕಲ್ಲಿನಿಂದ ಜಜ್ಜಿ ಬಾಲಕಿಯ ಭೀಕರ ಕೊಲೆ
ಈ ಮಧ್ಯೆ, ಸೂಪರ್ ಕಿಂಗ್ಸ್ ತಂಡ ಯಾವುದೇ ಮೈದಾನದಲ್ಲಿ ಆಡಲು ಹೋದರೂ ದೇಶಾದ್ಯಂತ ಭವ್ಯವಾದ ಸ್ವಾಗತವನ್ನು ಪಡೆಯುವ ನಮ್ಮ ತಂಡದ ನಾಯಕ ಧೋನಿಗೆ ಈ ಗೆಲುವನ್ನು ಅರ್ಪಿಸುವುದಾಗಿ ಜಡೇಜಾ ಹೇಳಿದ್ದಾರೆ.
ViratKohli, #SpecialMessage, #RavindraJadeja, #MSDhoni, #CSK, #Win, #IPL2023,