ವಿಶ್ವಶ್ರೇಷ್ಠ ತಂಡದಲ್ಲಿ ಕೊಹ್ಲಿ, ಸೂರ್ಯಕುಮಾರ್ ಯಾದವ್‍ಗೆ ಸ್ಥಾನ

Social Share

ನವದೆಹಲಿ, ನ. 14- ಆಸ್ಟ್ರೇಲಿಯಾ ಟಿ 20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆದ ನಂತರ ಕ್ರಿಕೆಟ್ ವಿಶ್ಲೇಷರು ಬಲಿಷ್ಠ 11 ಆಟಗಾರರ ತಂಡವನ್ನು ಪ್ರಕಟಿಸಿದೆ. ಮಾಜಿ ಕ್ರಿಕೆಟಿಗರಾದ ಇಯಾನ್ ಬಿಸಪ್, ಶಿವನಾರಾಯಣ್ ಚಂದ್ರಪಾಲ್, ವಿಶ್ಲೇಷಕ ಮೇಲ್ ಜೋನ್ಸ್, ಪತ್ರಕರ್ತ ಪಾರ್ಥ ಬಾದೂರಿ ಹಾಗೂ ಐಸಿಸಿ ಕಮಿಟಿಯ ಮುಖ್ಯ ಕಾರ್ಯದರ್ಶಿ ವಾಸಿಮ್ ಕಾನ್ ಅವರು ಈ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದಾರೆ.

ಟಿ 20 ವಿಶ್ವಕಪ್ ಟೂರ್ನಿಯಲ್ಲಿ 4 ಅರ್ಧಶತಕ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಸ್ಟಾರ್ ಬ್ಯಾಟ್ಸ್‍ಮನ್ ವಿರಾಟ್ ಕೊಹ್ಲಿ (296 ರನ್) ಹಾಗೂ 4 ಅರ್ಧಶತಕಗಳೊಂದಿಗೆ 239 ಗಳಿಸಿ ಟೂರ್ನಿಯ ಅತ್ಯಂತ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಅವರು ವಿಶ್ವ ಶ್ರೇಷ್ಠ 11ರ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ.

ವಿಶ್ವಕಪ್ ಆಡಿದ ಪ್ರಮುಖ 6 ತಂಡಗಳಿಂದ 11 ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ವಿಶ್ವಕಪ್ ವಿಜೇತ ನಾಯಕ ಜೋಸ್ ಬಟ್ಲರ್ ಅವರೇ ವಿಶ್ವ ಶ್ರೇಷ್ಠ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಮತ್ತೆ ಹೆಚ್ಚಾದ ಕೇಸರಿ ಕಿಚ್ಚು

ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡ ಪಾಕಿಸ್ತಾನದ ವೇಗಿಗಳಾದ ಶಬಾದ್ ಖಾನ್ ಹಾಗೂ ಶೇಹಾನ್ ಶಾ ಆಫ್ರಿದಿ ಅವರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬೆನ್ ಸ್ಟೋಕ್ಸ್ ಅವರು ವಿಶ್ವ ಬಲಿಷ್ಠ 11ರ ತಂಡದಲ್ಲಿ ಸ್ಥಾನ ಪಡೆಯದಿರುವುದು ಆಶ್ಚರ್ಯ ಮೂಡಿಸಿದೆ.

ಸಿಗರೇಟ್ ವಿಚಾರಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ

ವಿಶ್ವ ಶ್ರೇಷ್ಠ ತಂಡ ಕೆಳಕಂಡಂತಿದೆ:
ಅಲೆ ಹೇಲ್ಸ್ (ಇಂಗ್ಲೆಂಡ್) ಜೋಸ್ ಬಟ್ಲರ್ ( ವಿಕೆಟ್ ಕೀಪರ್, ನಾಯಕ) (ಇಂಗ್ಲೆಂಡ್), ವಿರಾಟ್ ಕೊಹ್ಲಿ (ಭಾರತ), ಸೂರ್ಯಕುರ್ಮಾ ಯಾದವ್ (ಭಾರತ), ಗ್ಲೆನ್ ಫಿಲಿ (ನ್ಯೂಜಿಲೆಂಡ್), ಸಿಕಂದರ್ ರಜಾ(ಜಿಂಬಾಬ್ವೆ), ಶಾದಾಬ್ ಖಾನ್ (ಪಾಕಿಸ್ತಾನ) ಸ್ಯಾಮ್ ಕರ್ರಾನ್ (ಇಂಗ್ಲೆಂಡ್), ಅನ್ರಿಚ್ ನೊರ್ಟಿಜ್ (ದಕ್ಷಿಣ ಆಫ್ರಿಕಾ), ಮಾರ್ಕ್ ವುಡ್ (ಇಂಗ್ಲೆಂಡ್), ಶಾಹೀನ್ ಶಾ ಆಫ್ರಿದಿ (ಪಾಕಿಸ್ತಾನ)

Articles You Might Like

Share This Article