ಸೆಹ್ವಾಗ್ ಸಿಕ್ಕ ಬೆಂಬಲ ನನಗೆ ಸಿಗಲಿಲ್ಲ: ಮುರುಳಿ ವಿಜಯ್ ಅಸಮಾಧಾನ

Social Share

ನವದೆಹಲಿ,ಜ.17- ವಿರೇಂದ್ರ ಸೆಹ್ವಾಗ್ ಅವರಿಗೆ ದೊರೆತ ಬೆಂಬಲ ನನಗೆ ದೊರೆಯಲಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಮುರುಳಿ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮವೊಂದರ ಡಬ್ಲ್ಯು ವಿ ರಾಮನ್ ಜೊತೆಗಿನ ಚಿಟ್‍ಚಾಟ್‍ನಲ್ಲಿ ಮುರುಳಿ ವಿಜಯ್ ಈ ಅಸಮಾಧಾನ ಹೊರ ಹಾಕಿದ್ದು, ಇದಕ್ಕೆ ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‍ಮೆಂಟ್ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಕಿಡಿ ಕಾರಿದ್ದಾರೆ.

2018ರಲ್ಲಿ ಭಾರತ ತಂಡದ ಪರ ಕೊನೆಯ ಪಂದ್ಯವಾಡಿದ ಮುರುಳಿ ವಿಜಯ್ ಅವರು ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಸಾಕಷ್ಟು ಪಂದ್ಯವನ್ನಾಡಿ ಗಮನ ಸೆಳೆದಿದ್ದರು. ಸೇಹ್ವಾಗ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದಾಗ ಮ್ಯಾನೇಜ್‍ಮೆಂಟ್‍ನವರು ಅವರಿಗೆ ನೀಡಿದ ರೀತಿಯ ಬೆಂಬಲ ನನಗೆ ನೀಡಲಿಲ್ಲ. ಒಂದು ವೇಳೆ ಅವರ ರೀತಿಯ ಬೆಂಬಲ ನನಗೆ ಸಿಕ್ಕಿದ್ದರೆ ನನ್ನಿಂದ ಮತ್ತಷ್ಟು ಉತ್ತಮ ಆಟ ನಿರೀಕ್ಷಿಸಬಹುದಾಗಿತ್ತು ಎಂದು ಅಲವತ್ತುಕೊಂಡಿದ್ದಾರೆ.

ಕಳೆದೊಂದು ವರ್ಷದಿಂದ ಚೀನಾದಲ್ಲಿ ಕ್ಷೀಣಿಸುತ್ತಿದೆ ಜನಸಂಖ್ಯೆ ..!

ಆದರೆ, ಹೊಡಿ ಬಡಿ ಆಟಗಾರರಾಗಿದ್ದ ಸೆಹ್ವಾಗ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಸೆಹ್ವಾಗ್ ಬ್ಯಾಟಿಂಗ್‍ನಿಂದ ನಾನು ಸಾಕಷ್ಟು ಸ್ಪೂರ್ತಿ ಪಡೆದಿದ್ದೇನೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಸೆಹ್ವಾಗ್ ಅವರಂತೆ ಬೇರೆ ಯಾರೂ ಆಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯ ಕ್ರಿಕೆಟ್‍ಗೆ ಏನು ಮಾಡಿದ್ದಾರೆ ಎಂಬುದು ಅದ್ಭುತ ಎಂದು ಅವರು ಹೇಳಿಕೊಂಡಿದ್ದಾರೆ.

Virender Sehwag, Murali Vijay, BCCI,

Articles You Might Like

Share This Article