OMG..! ‘ಕನ್ಯೆ’ತ್ವ ಮರಳಿ ಪಡೆಯಲು ಶಸ್ತ್ರಚಿಕಿತ್ಸೆಗೆ ಮೊರೆ ಹೋಗುತ್ತಿರುವ ಮಹಿಳೆಯರು..!
ಹೈದ್ರಾಬಾದ್. ಜ.11 : ಯಾವುದೇ ಕಾರಣದಿಂದ ತಾವು ಕಳೆದುಕೊಂಡ ಕನ್ಯತ್ವವನ್ನು ಮರಳಿ ಪಡೆದು ವರ್ಜಿನ್ಗಳಾಗಲು ಇದೀಗ ಅನೇಕ ಮಹಿಳೆಯರು ಯೋನಿ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಇತ್ತೀಚೆಗೆ ಒಂದು ಟ್ರೆಂಡೇ ಆಗುತ್ತಿದೆ. ಇತ್ತೀಚೆಗೆ ಹೈದ್ರಾಬಾದ್ನ ಬಂಜಾರಾ ಹಿಲ್ಸ್ನ ಮಹಿಳೆಯೊಬ್ಬರು ತಮ್ಮ ಬ್ಯಾಡ್ಮಿಂಟನ್ ಆಟಗಾರ್ತಿ ಮಗಳನ್ನು ಕರೆದುಕೊಂಡು ಬಂದಿದ್ದರು. ಇನ್ನು ಕೆಲವು ದಿನಗಳಲ್ಲಿ ತನ್ನ ಮಗಳಿಗೆ ಮದುವೆ ಇದೆಯೆಂದೂ, ಅದಕ್ಕಾಗಿ ಅವಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಮತ್ತೆ ಕನ್ಯೆಯಾಗುವಂತೆ ಮಾಡಬೇಕೆಂದೂ ಹೇಳಿದರು. ನಾವು ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿ ಮತ್ತೆ ಕನ್ಯಾಪೊರೆಯನ್ನು ಅಳವಡಿಸಿದೆವು ಎನ್ನುತ್ತಾರೆ ಬಂಜಾರಾ ಹಿಲ್ಸ್ನ ಡಾ.ಭವಾನಿ ಪ್ರಸಾದ್.
ಇಲ್ಲಿನ ಸನ್ಷೈನ್ ಹಾಸ್ಪಿಟಲ್ನ ಪ್ಲಾಸ್ಟಿಕ್ ಸರ್ಜನ್ ಆಗಿರುವ ಭವಾನಿ ಪ್ರಸಾದ್, ಇತ್ತೀಚೆಗೆ ಇಂಥದ್ದೊಂದು ಟ್ರೆಂಡ್ ಬೆಳೆಯುತ್ತಿದೆ. ಈ ವರ್ಷದಲ್ಲಿ ನಾವೇ ಇಂತಹ 50 ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಸಮಾಜದಲ್ಲಿ ಪ್ರತಿಯೊಬ್ಬ ಹೆಣ್ಣೂ ವಿವಾಹಕ್ಕೆ ಮುನ್ನ ತಾನು ವರ್ಜಿನ್ (ಕನ್ಯೆ) ಆಗಿರಬೇಕು. ಇಲ್ಲದಿದ್ದರೆ ಮದುವೆಯಾದ ಪತಿಗೆ ತನ್ನ ಮೇಲೆ ಅನುಮಾನ ಉಂಟಾಗಿ ಸಂಸಾರ ಹಾಳಾಗುತ್ತದೆ ಎಂಬ ಭಾವನೆ ಬಲವಾಗಿ ಬೇರೂರಿದೆ. ವಿವಾಹಾನಂತರ ಪತಿಯೊಂದಿಗೆ ಮೊದಲ ರಾತ್ರಿ ವೇಳೆ ಕನ್ಯಾಪೊರೆ ಇಲ್ಲವೆಂದರೆ ಅವನಿಗೆ ತನ್ನ ಹೆಂಡತಿ ಕನ್ಯೆಯಲ್ಲ. ವಿವಾಹ ಪೂರ್ವ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಅನುಮಾನ ಮೂಡುತ್ತದೆ. ಆಗ ಭವಿಷ್ಯದಲ್ಲಿ ಸಂಸಾರದ ವ್ಯವಸ್ಥೆಯೇ ಮುರಿದು ಬೀಳುತ್ತದೆ. ಏಕೆಂದರೆ, ಎಲ್ಲ ಗಂಡಂದಿರೂ ವಿಶಾಲ ಹೃದಯದವರಿರುವುದಿಲ್ಲ. ತಮ್ಮ ಸಂಗಾತಿ ವರ್ಜಿನ್ ಆಗಿರಬೇಕೆಂದು ಬಯಸುತ್ತಾರೆ. ಅವರು (ಗಂಡಸರು) ಹೇಗಿದ್ದರೂ ಚಿಂತೆಯಿಲ್ಲ.
ಕನ್ಯತ್ವದ ಪೊರೆ ಜೋಡಿಸುವ ಶಸ್ತ್ರ ಚಿಕಿತ್ಸೆ ಬಹಳ ಸರಳ. ಹೆಚ್ಚು ನೋವಾಗದು. ಹಾಗೇ ಬೇಗ ಮಾಯುತ್ತದೆ. ಆದರೆ, ಕೆಲವು ದಿನಗಳ ಕಾಲ ಶಸ್ತ್ರ ಚಿಕಿತ್ಸೆಗೊಳಗಾದವರು ಯಾವುದೇ ಶ್ರಮದ ಕೆಲಸ ಮಾಡಬಾರದು ಎಂಬುದು ವೈದ್ಯರ ಸಲಹೆ. ಹೆಣ್ಣು ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದಾಗ ಈ ಕನ್ಯಾಪೊರೆ ಹರಿಯಬಹುದು ಅಥವಾ ಆಟಗಾರ್ತಿಯರು, ಸೈಕಲ್ ಸವಾರಿ ಮಾಡುವವರು ಅಥವಾ ಕಷ್ಟದ ಕೆಲಸ ಮಾಡುವವರಿಗೆ ಸ್ವಾಭಾವಿಕವಾಗಿಯೇ ಹರಿದು ಹೋಗಬಹುದು. ಆದರೆ, ಜನರ ಭಾವನೆ, ಲೈಂಗಿಕ ಕ್ರಿಯೆಯಿಂದಲೇ ಈ ಪೊರೆ ಹರಿದಿದೆ ಎಂತಲೇ ಇರುತ್ತದೆ. ಕನ್ಯಾ ಪೊರೆಯಿದ್ದರೆ ಮಾತ್ರ ಹೆಣ್ಣು ವರ್ಜಿನ್ ಎಂದು ತಿಳಿಯುತ್ತಾರೆ.
ಇತ್ತೀಚೆಗೆ ಇಂತಹ ಪ್ರಕರಣ ಹೆಚ್ಚುತ್ತಿವೆ. ಆದರೆ ಸರಿಯಾದ ಪ್ಲಾಸ್ಟಿಕ್ ಸರ್ಜರಿ ನಿಪುಣರ ಬಳಿಯೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಟ್ರೆಂಡ್ ಹೆಚ್ಚಿದಂತೆಲ್ಲ ಯಾರು ಯಾರೋ ತಾವೂ ಕನ್ಯಾಪೊರೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಅಂತ ಮಾಡುತ್ತಾರೆ. ಅದು ಸಾಧುವಲ್ಲ ಎನ್ನುತ್ತಾರೆ ಆಂಧ್ರ ಮತ್ತು ತೆಲಂಗಾಣ ಪ್ಲಾಸ್ಟಿಕ್ ಸರ್ಜನ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಸುಧಕಾರ ಪ್ರಸಾದ್. ಇದು ಅವಿವಾಹಿತ 20-25 ವರ್ಷದ ಯುವತಿಯರ ಟ್ರೆಂಡ್ ಆದರೆ, ಇನ್ನು ಮಕ್ಕಳನ್ನು ಹೆತ್ತ 35 ವರ್ಷ ಮೇಲ್ಪಟ್ಟ ಮಧ್ಯ ವಯಸ್ಕ ಮಹಿಳೆಯರು, ಹೆರಿಗೆ ನಂತರ ಯೋನಿಯ ಮಾಂಸ ಖಂಡಗಳು ಬಿಗಿಯಾಗಲು ಯೋನಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಇಂಥವರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಡಾ.ಭವಾನಿ ಪ್ರಸಾದ್. ಇತ್ತೀಚೆಗೆ ಎಸ್.ಸುಚರಿತ್ರಾ ಎಂಬ 40 ವರ್ಷದ ಮಹಿಳೆ ತನ್ನ ಗಂಡ ಹೇಳಿದನೆಂದು ನನ್ನ ಬಳಿ ಯೋನಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಳು ಎಂದು ವೈದ್ಯೆ ಹೇಳಿದ್ದಾರೆ. ಈ ಮಹಿಳೆ ಕಾರ್ಪೊರೇಟ್ ಉದ್ಯೋಗಿ.
Eesanje News 24/7 ನ್ಯೂಸ್ ಆ್ಯಪ್ – Click Here to Download
Comments are closed.