ವೀಸಾ ಕೊಡಿಸುವ ನೆಪದಲ್ಲಿ ವಂಚನೆ : ಕೇರಳದ ವ್ಯಕ್ತಿ ಸೆರೆ

Social Share

ಮಡಿಕೇರಿ, ನ.9- ವೀಸಾ ಕೊಡಿಸುವುದಾಗಿ ಅಮಾಯಕರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ವ್ಯಕ್ತಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಶ್ರೀನಾಥ್ ಬಂಧಿತ ವಂಚಕ. ಈತ ಅಮಾಯಕರನ್ನೇ ಗುರಿಯಾಗಿಸಿಕೊಂಡು ಅವರಿಗೆ ನಂಬಿಕೆ ಬರುವಂತೆ ಯಾಮಾರಿಸಿ ವೀಸಾ ನೆಪದಲ್ಲಿ ಪ್ರತಿಯೊಬ್ಬರಿಂದ ಲಕ್ಷಾಂತರ ರೂ. ಸಂಗ್ರಹಿಸಿದ್ದನು.

ಸುಪ್ರೀಂಕೋರ್ಟ್‍ನ 50ನೇ ಸಿಜೆ ಆಗಿ ಚಂದ್ರಚೂಡ್ ಪ್ರಮಾಣ ವಚನ

ವಂಚಕನ ಮಾತನ್ನು ನಂಬಿ ಸುಮಾರು 60ಕ್ಕೂ ಹೆಚ್ಚು ಜನರು ಹಣ ಕೊಟ್ಟು, ಇತ್ತ ವೀಸಾ ಸಿಗದೆ ಹಣ ಕಳೆದುಕೊಂಡ ಜನರು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಪತ್ತೆಹಚ್ಚಿ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸತೀಶ್ ಜಾರಕಿಹೊಳಿ ತಕ್ಷಣ ಕ್ಷಮೆ ಕೇಳಬೇಕು : ಬಿಎಸ್‌ವೈ

ವಂಚಕನು ಕೋಟ್ಯಂತರ ರೂ. ವಂಚಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಕೊಡಗು, ದಕ್ಷಿಣ ಕನ್ನಡದಲ್ಲೂ ವೀಸಾ ಕೊಡಿಸುವ ನೆಪದಲ್ಲಿ ಆರೋಪಿಯು ಅಮಾಯಕರಿಂದ ಹಣ ಪಡೆದಿರುವುದು ತನಿಖೆಯಿಂದ ಕಂಡುಬಂದಿದೆ.

Articles You Might Like

Share This Article