ಇನ್ನು ಮುಂದೆ ಜಿಲ್ಲಾ ಕೇಂದ್ರಗಳಲ್ಲೂ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ : ಸಿಎಂ

Social Share

ಬೆಂಗಳೂರು,ಸೆ.15- ವಿಶ್ವವಿಖ್ಯಾತ ಎಂಜಿನಿಯರ್ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಇನ್ನು ಮುಂದೆ ರಾಜ್ಯ ಜಿಲ್ಲಾ ಕೇಂದ್ರಗಳಲ್ಲೂ ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನದ ಪ್ರಯುಕ್ತ ಕೆ.ಆರ್.ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಸರ್ಕಾರವೇ ಇಂಜಿನಿಯರಿಂಗ್ ದಿನಾಚರಣೆ ಆಚರಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಮುಂದಿನ ವರ್ಷದಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂಜಿನಿಯರ್ಸ್ ದಿನ ಆಚರಿಸುತ್ತೇವೆ ಎಂದರು. ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯನ್ನು ಈವರೆಗೂ ಬೆಂಗಳೂರಿನಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಮುಂದಿನ ಪೀಳಿಗೆಗೂ ಅವರ ಕೊಡುಗೆಯನ್ನು ತಿಳಿಸುವ ಸದುದ್ದೇಶದಿಂದ ಜಿಲ್ಲಾ ಕೇಂದ್ರಗಳಲ್ಲೂ ಆಚರಣೆ ಮಾಡುತ್ತೇವೆ ಎಂದರು.

ಇದನ್ನೂ ಓದಿ : BIG NEWS : ಉಕ್ರೇನ್‍ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ

ಸರ್ ಎಂ.ವಿ ಜೀವನಪೂರ್ತಿ ಜನರಿಗಾಗಿ ಬದುಕಿದ್ದಾರೆ. ನಿಜವಾಗಿ ನಾಡು ಕಟ್ಟಿದವರು ಅವರು. ಅಣೆಕಟ್ಟು ಕಟ್ಟಿದ್ದು ಮಾತ್ರವಲ್ಲದೇ ಅನೇಕ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದರು ಎಂದು ಸ್ಮರಿಸಿದರು.

ಮೈಸೂರು ರಾಜರ ಆಶ್ರಯದಲ್ಲಿ ಅನೇಕ ಕೆಲಸ ಮಾಡುತ್ತಿದ್ದ ಸರ್.ಎಂ.ವಿ ಕೆ.ಆರ್‍ಎಸ್ ಡ್ಯಾಂ ನಿರ್ಮಾಣ ಮಾಡಿ ಅನೇಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲೇ ಅನೇಕ ಸೇವೆ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

Articles You Might Like

Share This Article