ವಿವೇಕಾನಂದರ ಆಶಯದಂತೆ ರಾಷ್ಟ್ರೀಯ ಶಿಕ್ಷಣ ನೀತಿ: ಸಚಿವ ಅಶ್ವತ್ಥನಾರಾಯಣ

Social Share

ಬೆಂಗಳೂರು,ಜ.12- ಯುವಜನರು ವಿವೇಕಾನಂದರಂತೆ ಬದ್ಧತೆಯಿಂದ ಕೆಲಸ ಮಾಡುವ ಸಂಸ್ಕøತಿಯನ್ನು ರೂಢಿಸಿಕೊಳ್ಳಬೇಕು. ಈ ಆಶಯದೊಂದಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೆಳಿದರು.

ಸ್ವಾಮಿ ವಿವೇಕಾನಂದರ 160ನೇ ಜಯಂತಿ ಪ್ರಯುಕ್ತ ಯುವ ದಿನಾಚರಣೆ ನೆರವೇರಿತು. ಇದರ ಅಂಗವಾಗಿ ಸಚಿವರು ಯಶವಂತಪುರದ ಮೆಟ್ರೊ ಬಳಿ ಮತ್ತು 18ನೇ ಅಡ್ಡರಸ್ತೆಯ ಉದ್ಯಾನದಲ್ಲಿರುವ ವಿವೇಕಾನಂದರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಜತೆಗೆ 18ನೇ ಅಡ್ಡರಸ್ತೆಯಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯುವ ದಿನಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

ಎನ್‍ಇಪಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ನೈತಿಕ ದೃಷ್ಟಿಕೋನಗಳಿಗೆ ಆದ್ಯತೆ ಕೊಡಲಾಗಿದೆ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸದೃಢ ಭಾರತದ ನಿರ್ಮಾಣ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಕೇರಳದ ಗಡಿಯಲ್ಲಿ ಸ್ಯಾಂಟ್ರೋ ರವಿಗೆ ತೀವ್ರ ಶೋಧ

ವಿದ್ಯಾರ್ಥಿಗಳು ತಾವೇ ತಮ್ಮ ಭವಿಷ್ಯದ ಶಿಲ್ಪಿಗಳಾಗಬೇಕು. ಈಗ ಇಡೀ ಜಗತ್ತಿನ ಜತೆ ನಾವು ಸ್ರ್ಪಸುತ್ತಿದ್ದೇವೆ. ಆದ್ದರಿಂದ ಈ ನಿಟ್ಟಿನಲ್ಲಿ ವಿವೇಕಾನಂದರು ಇಡೀ ದೇಶಕ್ಕೆ ಸೂರ್ತಿಯಾಗಿದ್ದಾರೆ. ಎನïಇಪಿ ನೀತಿಯು ವಿದ್ಯಾರ್ಥಿ ಕೇಂದ್ರಿತವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಪ್ರಧಾನಿ ನರೇಂದ್ರ ಮೋದಿಯವರು ಯುವಜನರ ವಿಕಾಸಕ್ಕೆ ಪೂರಕವಾದ ಹಲವು ಉಪಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಗುಣಮಟ್ಟ, ಕೌಶಲ್ಯ ಮತ್ತು ಸಮಾಜಮುಖಿಯಾದ ನಾಯಕತ್ವಕ್ಕೆ ಈಗ ಗಮನ ಹರಿಸಲಾಗಿದೆ ಎಂದು ಅವರು ನುಡಿದರು.

ತಂತ್ರಜ್ಞಾನ ಇಂದು ಜಗತ್ತನ್ನು ಆಳುತ್ತಿದೆ. ಅದರಲ್ಲೂ ಬೆಂಗಳೂರು ನಗರವು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನಗಳ ರಾಜಧಾನಿ ಆಗಿದೆ. ನಾವು ಸಾಂಘಿಕವಾಗಿ ಕೆಲಸ ಮಾಡುವ ಅಭ್ಯಾಸ ರೂಢಿಸಿ ಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಜಾಹಿರಾತು ಶುಲ್ಕ ವಸೂಲಿ ಮಾಡಲಾಗುವುದೇ ?: ಸಿಸೋಡಿಯಾ

ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ, ಬೆಂಗಳೂರು ನಗರ ವಿವಿ ಕುಲಪತಿ ಲಿಂಗರಾಜ ಗಾಂ, ಕುಲಸಚಿವ ಡಾ. ಲೋಕೇಶ್, ಪ್ರಿನ್ಸಿಪಾಲ್ ಡಾ.ಪ್ರತಿಮಾ, ಡಾ.ಜ್ಯೋತಿ ವೆಂಕಟೇಶ್, ರತ್ನಾಕರ ಶೆಟ್ಟಿ, ಡಾ.ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

vivekananda, birthday, Education Policy, Minister, Aswathanarayan,

Articles You Might Like

Share This Article