ಪುಟಿನ್ ನಿಜಕ್ಕೂ ಜಗತ್ತಿನ ಶ್ರೇಷ್ಠ ನಾಯಕನೇ..? ಇಲ್ಲಿದೆ ಮಹತ್ವದ ಮಾಹಿತಿಗಳು

Social Share

ನವದೆಹಲಿ,ಮಾ.3- ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಗತ್ತಿನ ಶ್ರೇಷ್ಠ ನಾಯಕ ಎಂದು ಬಿಂಬಿಸಲಾಗುತ್ತಿದೆ. ಪುಟಿನ್ ಅವರ ವಿದೇಶಾಂಗ ನೀತಿಗಳು, ಭಾರತದ ಪರವಾದ ನಿಲುವು ಮತ್ತು ಅಮೆರಿಕ ವಿರೋಧಿ ಧೋರಣೆಗಳ ಕುರಿತು ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿವೆ.  ಈ ನಡುವೆ ನ್ಯಾಟೋ ಪಡೆಗಳು ಮತ್ತು ಅಮೆರಿಕಾದ ಸರ್ವಾಕಾರಿ ಧೋರಣೆಗೂ ಟೀಕೆಗಳು ಕೇಳಿ ಬಂದಿದ್ದು, ಬಹುತೇಕ ಮುಸ್ಲಿಂ ರಾಷ್ಟ್ರಗಳು ರಷ್ಯಾ ಪರವಾಗಿ ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.
ಉಕ್ರೇನ್ ಮೇಲಿನ ದಾಳಿಯನ್ನು ಅಮೆರಿಕ ತೀವ್ರವಾಗಿ ವಿರೋಧಿಸಿದೆ. ಜತೆಗೆ ಹಲವಾರು ಆರ್ಥಿಕ ನಿರ್ಬಂಧಗಳನ್ನು ಹೇರುವ ಮೂಲಕ ರಷ್ಯಾವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ಹೆಣೆಯುತ್ತಿದೆ. ನ್ಯಾಟೋ ಪಡೆ ಅಮೆರಿಕ ತಾಣಕ್ಕೆ ಕುಣಿಯುತ್ತಿವೆ. ಉಕ್ರೇನ್ ಪರವಾಗಿ ಶಸ್ತ್ರಾಸ್ತ್ರ ಹಿಡಿದು ರಣಭೂಮಿಗೆ ಪ್ರವೇಶಿಸುವುದಿಲ್ಲ ಎಂದು ಅಮೆರಿಕ ಘೋಷಿಸಿದೆಯಾದರೂ, ಜಾಗತಿಕವಾಗಿ ಪುಟಿನ್ ಅವರನ್ನು ಅಪರಾ ಧಿಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ.
ನ್ಯಾಟೋ ಪಡೆ ಪೈಕಿ ಕೆಲವು ರಾಷ್ಟ್ರಗಳು ಉಕ್ರೇನ್‍ಗೆ ಶಸ್ತ್ರಾಸ್ತ್ರ ಪೂರೈಸಿವೆ. ಆದರೆ, ಭೌತಿಕವಾಗಿ ಉಕ್ರೇನಿಯರ ಜತೆ ನಿಂತು ಯುದ್ಧ ಮಾಡುತ್ತಿಲ್ಲ.  ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ದ್ವಂದ್ವ ನಿಲುವಿಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ರಷ್ಯಾ ಅಧ್ಯಕ್ಷ ಪುಟಿನ್ ಅವರು ನೇರವಾಗಿ ಅಮೆರಿಕದ ಮೇಲೆ ವಾಗ್ದಾಳಿ ನಡೆಸಿದ್ದು, ಈ ಹಿಂದೆ 2001ರ ಸೆಪ್ಟೆಂಬರ್ 11ರಂದು ನಡೆದ ಡಬ್ಲ್ಯೂಟಿಒ ಮೇಲಿನ ದಾಳಿಗೆ ಪ್ರತಿಕಾರವಾಗಿ ಅಮೆರಿಕ ಇರಾಕ್ ಮೇಲೆ ದಾಳಿ ನಡೆಸಿತ್ತು. ಅಲ್ಲಿ ಅಣ್ವಸ್ತ್ರಗಳಿವೆ ಎಂಬ ಆರೋಪ ಮಾಡಿತ್ತು. ನಾಗರಿಕರ ಹತ್ಯೆ ಮಾಡಲಾಗಿತ್ತು.
ಇರಾಕನ್ನು ಸಂಪೂರ್ಣವಾಗಿ ನಾಶ ಮಾಡಿ ವಾಪಸ್ ಬರುವಾಗ ನಮ್ಮ ಗುಪ್ತಚರ ಇಲಾಖೆ ತಪ್ಪು ಮಾಹಿತಿ ನೀಡಿದ್ದರಿಂದ ಯುದ್ಧ ಮಾಡಬೇಕಾಯಿತು ಎಂದು ಸಮರ್ಥನೆ ನೀಡಿದೆ. ಅಮೆರಿಕ ತನ್ನೆಲ್ಲಾ ವಿಧ್ವಂಸಕ ಕಾರ್ಯಾಚರಣೆಗಳಿಗೆ ಗುಪ್ತಚರ ಇಲಾಖೆಯ ವೈಫಲ್ಯವನ್ನು ಸಮರ್ಥನೆಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಇರಾಕ್ ಮೇಲೆ ದಾಳಿ ಮಾಡುವಾಗ ಅಮೆರಿಕ ಮತ್ತು ನ್ಯಾಟೊ ಪಡೆಗಳು ವಿಶ್ವದ ಯಾವುದೇ ರಾಷ್ಟ್ರದ ಅನುಮತಿ ಪಡೆದಿರಲಿಲ್ಲ ಎಂದು ಪುಟಿನ್ ತಿರುಗೇಟು ನೀಡಿದ್ದಾರೆ. ಈ ನಡುವೆ ಅಮೆರಿಕದ ಸಂಸದರೊಬ್ಬರು ಇರಾಕ್ ಯುದ್ಧದ ಬಗ್ಗೆ ಸೆನೆಟ್‍ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅಮೆರಿಕ ದಾಳಿ ಮಾಡಿ ಸಾವಿರಾರು ನಾಗರಿಕರು, ಮಕ್ಕಳನ್ನು ಹತ್ಯೆ ಮಾಡಲಾಗಿದೆ.
ಬಳಿಕ ಆಲ್‍ಖೈದ ಮತ್ತು ಇರಾಕ್‍ಗೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟವಾಗಿದೆ. ಆ ಯುದ್ಧದಲ್ಲಿ 1600 ಅಮೆರಿಕ ಯೋಧರು ಮೃತಪಟ್ಟಿದ್ದರು. 15ಸಾವಿರ ಮಂದಿ ಗಾಯಗೊಂಡಿದ್ದರು. ಜಗತ್ತಿನ ಮುಂದೆ ಅಮೆರಿಕ ಸುಳ್ಳು ಹೇಳಿ ಯುದ್ಧ ಮಾಡಿತ್ತು ಎಂದು ಆರೋಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಉಕ್ರೇನ್ ಮೇಲಿನ ದಾಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ನ್ಯಾಟೋ ಪಡೆ ಈ ಹಿಂದೆ 1990ರಲ್ಲಿ ಬೆಲ್‍ಗ್ರೇಡೆ ಮೇಲೆ ಮತ್ತು 2011ರಲ್ಲಿ ಟ್ರಿಪೋಲಿ ಮೇಲೆ ಆಕ್ರಮಣ ಮಾಡಿ ಸರ್ವನಾಶ ಮಾಡಿವೆ. ಆಫ್ಘಾನಿಸ್ತಾನದಲ್ಲಿ ನ್ಯಾಟೋ ಮಾಡಿರುವ ಅವಾಂತರವನ್ನು ಮರೆಯಲಾಗುವುದಿಲ್ಲ.
ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್‍ಕ್ಲಿಂಟನ್ ಕಾಲದಲ್ಲಿ ಬೌನ್ಸಿಯಾ ಮತ್ತು ಕೊಸೊವೋ, ಜಾರ್ಜ್ ಬುಷ್ ಕಾಲದಲ್ಲಿ ಇರಾಕ್ ಮತ್ತು ಆಫ್ಘಾನಿಸ್ತಾನ, ಒಬಾಮ ಕಾಲದಲ್ಲಿ ಲಿಬಿಯಾ ಹಾಗೂ ಸಿರಿಯಾ ಮೇಲೆ ಯುದ್ಧ ಸಾರಲಾಗಿದೆ. ಅದಕ್ಕೂ ಮೊದಲಿನ ಅಧ್ಯಕ್ಷರು ಪಲಾಮ, ಇರಾಕ್, ಸೊಮಾಲಿಯಾ, ಬೈರೋಥ್, ಗ್ರೆನೆಡಾ ದೇಶಗಳ ಮೇಲೆ ದಂಡೆತ್ತಿ ಹೋಗಿದ್ದನ್ನು ರಷ್ಯಾದ ಚಿಂತಕರು ಪ್ರಸ್ತಾಪಿಸಿದ್ದಾರೆ.
ಅಮೆರಿಕ ಒಟ್ಟು 9 ಮುಸ್ಲಿಂ ರಾಷ್ಟ್ರಗಳನ್ನು ನಾಶ ಮಾಡಿದ್ದು, 11 ದಶಲಕ್ಷ ಜನರನ್ನು ಕೊಂದಿದೆ. ಈಗಲೂ ಪ್ಯಾಲಸ್ಥೈನ್‍ನಲ್ಲಿ ಇಸ್ರೇಲ್ ಪಡೆಗಳು ಆಕ್ರಮಣವನ್ನು ಮುಂದುವರೆಸಿವೆ. ಯುದ್ಧ ವಿರೋಯಾಗಿ ಮಾತನಾಡಿದರೆ ಎಲ್ಲಾ ಯುದ್ಧಗಳ ಬಗ್ಗೆಯೂ ಚರ್ಚಿಸಬೇಕು ಎಂಬುದು ಅಮೆರಿಕ ವಿರೋಗಳ ನಿಲುವಾಗಿದೆ.
ರಷ್ಯಾ ಆರಂಭದಿಂದಲೂ ಭಾರತದ ಉತ್ತಮ ಸ್ನೇಹಿತನಾಗಿ ವರ್ತಿಸುತ್ತಿದೆ. 1957ರಲ್ಲಿ ಕಾಶ್ಮೀರ ಪರವಾಗಿ ವಿಟೋ ಚಲಾಯಿಸಿತ್ತು. 1961ರಲ್ಲಿ ಗೋವಾ ವಿಮೋಚನೆಗೆ ಬೆಂಬಲ ನೀಡಿತ್ತು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪವಾದಾಗಲೆಲ್ಲಾ ರಷ್ಯಾ ಭಾರತದ ಬೆನ್ನುಲುಬಿಗೆ ನಿಂತಿದ್ದು, 1962, 1971ರಲ್ಲೂ ಸಹಕಾರ ನೀಡಿದೆ.
2019ರಲ್ಲಿ ಕಾಶ್ಮೀರದಲ್ಲಿನ ಆರ್ಟಿಕಲ್ 370ರದ್ದುಗೊಳಿಸಿದಾಗಲೂ ಸಹಮತ ವ್ಯಕ್ತಪಡಿಸಿತು. ಹೀಗಾಗಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಸಾಮಾನ್ಯ ಅವೇಶನದಲ್ಲಿ ತಟಸ್ಥ ನಿಲುವನ್ನು ಅನುಸರಿಸಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕ ತನ್ನ ದೊಡ್ಡಸ್ಥಿಕೆಗಾಗಿ ಸಣ್ಣಪುಟ್ಟ ರಾಷ್ಟ್ರಗಳು ಅಣ್ವಸ್ತ್ರ ಹೊಂದುವುದನ್ನು ತಡೆ ಹಿಡಿದು ಶಕುನಿ ಬುದ್ದಿಯನ್ನು ಪ್ರದರ್ಶಿಸಿದೆ. ಬಹುತೇಕ ರಾಷ್ಟ್ರಗಳು ಬೃಹತ್ ಸಾಮಥ್ರ್ಯದ ರಾಷ್ಟ್ರಗಳಿಂದ ಬೆದರಿಕೆ ಅನುಭವಿಸುತ್ತಿರುವುದೇ ಅಣ್ವಸ್ತ್ರದ ಕೊರತೆಯಿಂದಾಗಿ. ಅಮೆರಿಕ ತನ್ನ ಸ್ವಾರ್ಥ ಸಾಧನೆಗಾಗಿ ಶಾಂತಿ ಧೂತನಂತೆ ಬಿಂಬಿಸಿಕೊಂಡಿದೆ. ಅಮೆರಿಕ ನಂಬಿದ ಉಕ್ರೇನ್ ಇಂದು ಸಂಕಷ್ಟಕ್ಕೆ ಸಿಲುಕಿದೆ.
ಅಮೆರಿಕದ ಮಾತು ಕೇಳಿ ಉಕ್ರೇನ್‍ನ ಅಧ್ಯಕ್ಷ ವೊಲ್ಡೋಮೀರ್ ಝಲೆನ್ಸ್ಕಿ ತಮ್ಮ ದೇಶದ ವಿರೋಧ ಪಕ್ಷದ ನಾಯಕರನ್ನು ಜೀವಾವ ಶಿಕ್ಷೆಯಡಿ ಜೈಲಿನಲ್ಲಿಟ್ಟಿದ್ದಾರೆ. ಸರ್ಕಾರದ ನೀತಿ, ನಿಲುವುಗಳನ್ನು ಬಹಿರಂಗವಾಗಿ ವಿರೋಸಿದ ಮೂರು ಟಿವಿ ಚಾನಲ್‍ಗಳನ್ನು ಮುಚ್ಚಿಸಿದ್ದಾರೆ ಎಂಬ ಆರೋಪಗಳಿವೆ.
ರಷ್ಯಾ ದಾಳಿಯನ್ನು ಖಂಡಿಸುತ್ತಿರುವ ಅಮೆರಿಕ ತಾನು ಮಾಡಿದ್ದೆಲ್ಲಾ ಸರಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ತನ್ನನ್ನು ನಂಬಿದ ರಾಷ್ಟ್ರಗಳ ನೆರವಿಗೂ ಹೋಗದೆ ನಂಬಿಕೆ ದ್ರೋಹ ಮಾಡಿದೆ. ಹಾಗೆ ನೋಡಿದರೆ ಪುಟಿನ್ ವಿಶ್ವದ ಬಹುತೇಕ ರಾಷ್ಟ್ರಗಳ ವಿರೋಧದ ನಡುವೆಯೂ ಕೂಡ ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

Articles You Might Like

Share This Article