ಬೆಂಗಳೂರು,ಮಾ.8- ಒಂದು ವೇಳೆ ಮನವೊಲಿ ಕೆಗೂ ಬಗ್ಗದೆ ವಸತಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರಲು ಮುಂದಾದರೆ ಬಿಜೆಪಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ರಣತಂತ್ರ ರೂಪಿಸಿದೆ.
ಕೊನೆ ಕ್ಷಣದವರೆಗೂ ಸೋಮಣ್ಣ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ನಡೆಸಬೇಕು. ಅಷ್ಟಕ್ಕೂ ಜಗ್ಗದೆ ಪಕ್ಷ ಬಿಡುವ ತೀರ್ಮಾನಕ್ಕೆ ಬಂದರೆ ಬೆಂಗಳೂರು ಪ್ರತಿನಿಸುವ ಒಕ್ಕಲಿಗ ಸಮುದಾಯದ ಪ್ರಭಾವಿ ಇಬ್ಬರು ಮುಖಂಡರಿಗೆ ಬಿಜೆಪಿ ಗಾಳ ಹಾಕಿದೆ. ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಸೋಮಣ್ಣ
ಎದುರು ರಾಜಕೀಯ ಜಿದ್ದು ಇಟ್ಟುಕೊಂಡಿರುವ ಮಾಜಿ ಸಚಿವರನ್ನು ಮತ್ತು ಯುವಕ ನಾಯಕರೊಬ್ಬರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಟಿಕೆಟ್ ವಿಚಾರ : ಹಳಬರಿಗೆ ಕೋಕ್, RSS ನಿಷ್ಠರಿಗೆ ಲಕ್
ಈಗಾಗಲೇ ಒಂದು ಸುತ್ತಿನ ಮಾತುಕತೆ ಸಚಿವರೊಬ್ಬರ ಜೊತೆ ನಡೆದಿದ್ದು, ಸೋಮಣ್ಣ ಬಿಜೆಪಿಯಿಂದ ಹೊರ ಹೋಗುವುದನ್ನೇ ಎದುರು ನೋಡುತ್ತಿದ್ದಾರೆ. ಅಕೃತವಾಗಿ ಸೇರ್ಪಡೆಯಾದರೆ ಮರುಕ್ಷಣವೇ ಇಬ್ಬರು ನಾಯಕರು ಬಿಜೆಪಿ ಕಡೆ ಮುಖ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸೇರ್ಪಡೆಗೆ ಆರ್‍ಎಸ್‍ಎಸ್ ನಾಯಕರು ಕೂಡ ಸಮ್ಮತಿಸಿದ್ದು, ಸೋಮಣ್ಣ ಮನವೊಲಿಕೆಗೆ ಜಗ್ಗದಿದ್ದರೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವರೆದುರು ಪ್ರಭಾವಿ ನಾಯಕರನ್ನೇ ಕಣಕ್ಕಿಳಿಸಬೇಕೆಂದು ಸಲಹೆ ಕೊಟ್ಟಿದೆ.
ಹಿಂದೊಮ್ಮೆ ಇದೇ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಇತ್ತು. ಆದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂದೆ ಸರಿದಿದ್ದರು.
ಬೆಂಬಲಿಗರಿಗೆ ಗಾಳ :
ಸೋಮಣ್ಣ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಅನೇಕರು ಸಂಧಾನ ನಡೆಸಿದ್ದಾರೆ.
ಭಾರತದಲ್ಲಿ ಹೋಳಿ ಹಬ್ಬ ಆಚರಿಸಿದ ಅಮೆರಿಕದ ಉನ್ನತಾಧಿಕಾರಿ
ಒಂದು ವೇಳೆ ಸಂಧಾನಕ್ಕೆ ಜಗ್ಗದೆ ನಮ್ಮ ನಿರ್ಧಾರವೇ ಅಂತಿಮ ಎಂದರೆ ಬಿಜೆಪಿ ಸೋಮಣ್ಣನವರ ಹಿಂಬಾಲಕರನ್ನು ಪಕ್ಷ ಬಿಡದಂತೆ ಮನವೊಲಿಸುವ ಕಸರತ್ತು ನಡೆಸಿದೆ. ಬರಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಹಾಗೂ ಪಕ್ಷ ಅಕಾರಕ್ಕೆ ಬಂದರೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ನೀಡಲಾಗಿದೆ.