ಮೀಸಲಾತಿ ನೀಡದಿದ್ದರೆ ಹೋರಾಟ : ಒಕ್ಕಲಿಗರ ಸಮುದಾಯ ಎಚ್ಚರಿಕೆ

Social Share

ಬೆಂಗಳೂರು, ಮಾ.15- ರಾಜ್ಯ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನ ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಪೀಠದ ಪೀಠಾಪತಿಗಳಾದ ಶ್ರೀ ನಂಜಾವಧೂತ ಸ್ವಾಮೀಜಿ ಅವರು ಒತ್ತಾಯಿಸಿದರು.

ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.98 ಹಾಗೂ ದ್ವೀತೀಯ ಪಿಯುಸಿಯಲ್ಲಿ ಶೇ.95ರಷ್ಟು ಅಂಕಗಳಿಸಿ ತೇರ್ಗಡೆ ಹೊಂದಿದ ವಿದ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಒಕ್ಕಲಿಗರ ಸಮುದಾಯಕ್ಕೆ 2ಸಿ ಮೀಸಲಾತಿಯಡಿ ಶೇ.7.5ರಷ್ಟು ಮೀಸಲಾತಿ ನೀಡುವುದಾಗಿ ಸರ್ಕಾರ ಹೇಳಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಿ ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ಮೀಸಲಾತಿ ಪ್ರಮಾಣ ಘೋಷಣೆ ಮಾಡಿರುವುದಕ್ಕಿಂತ ಇನ್ನಷ್ಟು ಹೆಚ್ಚಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಸ್ವಾಮೀಜಿ ಅವರು ಆಗ್ರಹಿಸಿದರು.

ನರೇಗಾ ಯೋಜನೆ ಸ್ಥಗಿತಗೊಳಿಸುವ ಹುನ್ನಾರ : ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ

ಇಲ್ಲದಿದ್ದರೆ ನಮ್ಮ ಉಳಿವಿಗಾಗಿ ದೊಡ್ಡಮಟ್ಟದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಕೇಳಿಯೂ ಗೊತ್ತು, ತೆಗೆದುಕೊಳ್ಳಲು ಗೊತ್ತಿದೆ. ಈ ಹಿಂದೆ ಸಮುದಾಯ ಮಾಡಿರುವ ಹೋರಾಟ ಇನ್ನೂ ನೆನಪಿನಲ್ಲಿ ಉಳಿದಿದೆ. ಮತ್ತೆ ಆ ರೀತಿಯ ಹೋರಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಮೀಸಲಾತಿ ಏರಿಳಿತದಿಂದ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರು, ಪದಾಧಿಕಾರಿಗಳು ಒಕ್ಕಲಿಗ ಸಮುದಾಯಕ್ಕೆ ಶೇ. 12-15ರಷ್ಟು ಮೀಸಲಾತಿ ಕೊಡುವ ಭರವಸೆಯನ್ನು ಬಹಿರಂಗವಾಗಿ ಘೋಷಿಸಬೇಕು. ಸಾಧ್ಯವಾದರೆ ಪಕ್ಷಗಳ ಪ್ರಣಾಳಿಕೆಯಲ್ಲೂ ಸೇರಿಸಬೇಕು ಎಂದು ಅವರು
ಆಗಹಿಸಿದರು.

ನಾಡಿನ ಮುತ್ಸದ್ದಿ ರಾಜಕಾರಣಿಗಳಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಈ ಸಂಘವು ಚುನಾವಣೆಯ ನಂತರ ಗೌರವಿಸಬೇಕು. ಈ ಇಬ್ಬರು ಗಣ್ಯರ ವ್ಯಕ್ತಿತ್ವಕ್ಕೆ ಯಾರು ಪರದೆ ಎಳೆಯಲಾಗದು.

ಸೂರ್ಯನ ಬೆಳಕಿನಷ್ಠೇ ಅವರು ಮಾಡಿರುವ ಸೇವೆ ನಮ್ಮ ಕಣ್ಣು ಮುಂದಿದೆ ಎಂದು ಹೇಳಿದರು.
ವಿಧಾನಸೌಧ, ವಿಕಾಸಸೌಧ, ಉದ್ಯೋಗಸೌಧ ಹಾಗೂ ಸುವರ್ಣ ವಿಧಾನಸೌಧ ಕಟ್ಟಿದವರು ನಮ್ಮವರು. ಮುಂದೆ ಇನ್ನೊಂದು ಶಕ್ತಿಸೌಧ, ಕಾರ್ಯಾಂಗಸೌಧ ಕಟ್ಟುವಂತಾಗಲಿದೆ ಎಂದು ಆಶಿಸಿದರು.

ಒಕ್ಕಲಿಗರ ಸಂಘವು ನಿಂತ ನೀರಾಗದೆ ಬೆಳವಣಿಗೆ ಹೊಂದಬೇಕು. ನಾಡಪ್ರಭು ಕೆಂಪೇಗೌಡರನ್ನು ಬ್ರಾಂಡ್ ಮಾಡಿಕೊಂಡು 10-15 ಜಿಲ್ಲೆಗಳಲ್ಲಿ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಸಲಹೆ ಮಾಡಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಹ ಸೇವೆ ಸಲ್ಲಿಸುವಂಥವರಾಗಬೇಕು. ಶಿಕ್ಷಣ ಸಂಸ್ಥೆಗಳು ತಂದೆ ತಾಯಿಗಳನ್ನು ಗೌರವಿಸುವ ಹಾಗೂ ಸತ್ಪ್ರಜೆಗಳನ್ನು ತಯಾರು ಮಾಡಬೇಕು ಎಂದು ಸ್ವಾಮೀಜಿ ಅವರು ಕಿವಿ ಮಾತು ಹೇಳಿದರು.

ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಶ್ರೀ ಸೌಮ್ಯನಾಥಸ್ವಾಮೀಜಿ ಅವರು ಮಾತನಾಡಿ, ಒಕ್ಕಲಿಗರ ಸಂಘವು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹಲವು ಸಂಸ್ಥೆ ಮೂಲಕ ಸೇವೆ ಸಲ್ಲಿಸುತ್ತಿದೆ.

ಸತತ 3ನೇ ದಿನವೂ ನಡೆಯದ ಸಂಸತ್ ಕಲಾಪ, ಅಮೂಲ್ಯ ಸಮಯ ವ್ಯರ್ಥ

ರಾಜ್ಯ, ರಾಷ್ಟ್ರ, ಜಾಗತಿಕ ಮಟ್ಟಕ್ಕೆ ಒಕ್ಕಲಿಗ ಸಮುದಾಯ ವಿದ್ಯಾರ್ಥಿಗಳು ಬೆಳೆಯಬೇಕು. ಹಣ ಅಧಿಕಾರ ಇತರೆ ಲಾಲಸೆಗಳಿಗೆ ಒಳಗಾಗದೇ, ದೇಶದ ಒಳಿತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಸಮಾಜದ ಸೇವೆಗಾಗಿ ಯುಪಿಎಸ್ ಹಾಗೂ ಕೆಪಿಎಸ್ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುವ ಗುರಿಯಾಗಿಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರದ ಪ್ರೋತ್ಸಾಹದಿಂದ ಉನ್ನತ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.

ಬೆಂಗಳೂರು ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಅಶ್ವತ್ಥ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿಐಟಿಗೆ ಈ ಬಾರಿ 28 ರ್ಯಾಂಕುಗಳು ಬಂದಿವೆ. 25 ಚಿನ್ನದ ಪದಕಗಳು ದೊರೆತಿವೆ. ಮುರಳಿ ಎಂಬ ವಿದ್ಯಾರ್ಥಿ 18 ಚಿನ್ನದ ಪದಕ ಗಳಿಸಿ ವಿಶ್ವವಿದ್ಯಾಲಯದಲ್ಲಿ ದಾಖಲೆ ನಿರ್ಮಿಸಿದ್ದಾರೆ ಎಂದರು.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಎಂಸಿಎ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಮತ್ತು ಚಿನ್ನದ ಪದಕ ಪಡೆದ ಬಿಐಟಿಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಯುಗಾದಿಗೆ ಊರಿಗೆ ಹೋಗಲು ಬೆಂಗಳೂರಿಗರು ಪರದಾಡುವುದು ಗ್ಯಾರಂಟಿ

ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ., ಸಹಾಯಕ ಕಾರ್ಯದರ್ಶಿ ರಾಘವೇಂದ್ರ, ಖಜಾÁಂಚಿ ಆರ್.ಪ್ರಕಾಶ್, ಕಾರ್ಯಾಧ್ಯಕ್ಷರಾದ ಸಿ.ದೇವರಾಜು, ನಿರ್ದೇಶಕರಾದ ಎಂ.ಎಸ್.ಉಮಾಪತಿ, ಎಂ.ಪುಟ್ಟಸ್ವಾಮಿ, ಡಾ.ವಿನಾರಾಯಣಸ್ವಾಮಿ, ಅಶೋಕ್ ಹೆಚ್.ಎನ್., ಲೋಕೇಶ್ ಬಿ.ನಾಗರಾಜಯ್ಯ, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

vokkaligara, sangha, reservation, government,

Articles You Might Like

Share This Article