ವಿಧಾನಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ ವಿಧೇಯಕ ಮಂಡನೆ

Social Share

ಬೆಳಗಾವಿ, ಡಿ. 29-ಏಕಾತ್ಮಕ ಸ್ವರೂಪದ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ರಾಜ್ಯ ಒಕ್ಕಲಿಗರ ಸಂಘದ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು, 2022ರ ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಈ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳದಿದ್ದರೆ 4 ಪಟ್ಟುದಂಡ

ಒಕ್ಕಲಿಗರ ಸಂಘವು ಬಹಳ ದಿನಗಳಿಂದಲೂ ವಿಶ್ವವಿದ್ಯಾಲಯ ಸ್ಥಾಪಿಸಲು ಸಾಕಷ್ಟು ಶ್ರಮವಹಿಸಿ ಪ್ರಯತ್ನ ಪಟ್ಟಿತ್ತು. ಈಗ ಆ ಪ್ರಯತ್ನಕ್ಕೆ ತಕ್ಕ ಫಲ ದೊರೆತಿದೆ. ಉದ್ದೇಶಿತ ವಿಶ್ವವಿದ್ಯಾಲಯ ಸ್ಥಾಪನೆ ಮೂಲಕ ವಿಜ್ಞಾನಗಳು, ಎಂಜಿನಿಯರಿಂಗ್‍ನ ಎಲ್ಲ ವಿಭಾಗಗಳು, ವ್ಯವಸ್ಥಾಪನೆ, ವಾಣಿಜ್ಯ, ಸಮಾಜ ವಿಜ್ಞಾನ ಹಾಗೂ ಮಾನವಿಕ ಶಿಕ್ಷಣ ವಿಷಯಗಳಲ್ಲಿ ಆನ್ವಯಿಕ ವಿಶ್ವವಿದ್ಯಾಲಯ ಶಿಕ್ಷಣವನ್ನು ಉತ್ತೇಜಿಸಿ ಪ್ರಗತಿ ಸಾಧಿಸಬೇಕು ಎಂಬುದು ಎಲ್ಲರ ಬಯಕೆಯಾಗಿದೆ. ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ದಾಖಲಾತಿ ಪ್ರಮಾಣ ಏರಿಕೆಗೂ ವಿಧೇಯಕ ಅವಕಾಶ ಮಾಡಿಕೊಟ್ಟಿದೆ.

Vokkaligara Sangha, University Bill, Legislative Assembly, Minister Ashwath Narayan,

Articles You Might Like

Share This Article