ಸುಂಬರ್ವುಲುಹ್ (ಇಂಡೋನೇಷ್ಯಾ), ಡಿ.5 – ಪೂರ್ವ ಜಾವಾ ಪ್ರಾಂತ್ಯದ ಲುಮಾಜಾಂಗ್ ಜಿಲ್ಲೆಯ ಮೌಂಟ್ ಸೆಮೆರು ಜ್ವಾಲಾಮುಖಿ ತೀವ್ರಗೊಂಡಿದ್ದು ಸುಮಾರು 5,000 ಅಡಿ ಎತ್ತರಕ್ಕೆ ಬೂದಿಯನ್ನು ಆಕಾಶಕ್ಕೆ ಉಗುಳುತ್ತಿರುವ ಕಾರಣ ಸಮೀಪದ ಹಳ್ಳಿಗಳು ಮತ್ತು ಹತ್ತಿರದ ಪಟ್ಟಣಗಳು ಮುಚ್ಚಿಹೋಗಿವೆ, ಆದರೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.
ಇಂದು ನೂರಾರು ರಕ್ಷಕರ ಪಡೆ ಸುಂಬರ್ವುಲುಹ್ ಮತ್ತು ಸುಪಿತುರಾಂಗ್ ಗ್ರಾಮಗಳಲ್ಲಿ ಮನೆಗಳ ಮೇಲೆ ಟನ್‍ಗಟ್ಟಲೆ ಜ್ವಾಲಾಮುಖಿಯ ಅವಶೇಷಗಳು ಬಿದ್ದು ಮುಚ್ಚಿಹೋಗಿದೆ ಇಲ್ಲಿ ಬದುಕಿರುವವರಿಗಾಗಿ ಹುಡುಕಾಟ ನಡೆದಿದೆ.
ಭಾರೀ ಮಳೆ ಸುರಿದ ಕಾರಣ ಜ್ವಾಲಾಮುಖಿಯ ಮೇಲಿರುವ ಲಾವಾ ಗುಮ್ಮಟ ಕುಸಿದಿದ್ದು ಇದು ಹತ್ತಿರದ ನದಿಯ ಕಡೆಗೆ ಇಳಿಜಾರುಗಳಲ್ಲಿ ಗುಳ್ಳೆಗಳು ಮತ್ತು ಲಾವಾಪಾತವನ್ನು ಉಂಟು ಮಾಡಿತು. ಇಡೀ ಹಳ್ಳಿಗಳನ್ನು ಮುಳುಗಿದ್ದು ಮತ್ತು ಕಳೆದ ವರ್ಷ ಮರು ನಿರ್ಮಿಸಲ್ಪಟ್ಟ ಸೇತುವೆಯನ್ನು ನಾಶವಾಗಿದೆ . ಸುಂಬರ್‍ವುಲುಹ್ ಗ್ರಾಮ ಸೇರಿದಂತೆ ಹಲವು ಗ್ರಾಮದಲ್ಲಿ 2,970 ಮನೆಗಳನ್ನು ಸ್ಥಳಾಂತರಿಸಲಾಗಿದೆ.
ಮಹಿಳೆ ಗ್ಯಾಂಗ್ ರೇಪ್ ಮಾಡಿ, ಗುಪ್ತಾಂಗಕ್ಕೆ ಸಿಗರೇಟ್‌ನಿಂದ ಸುಟ್ಟ ಕಾಮುಕರು..!
ವಿಜ್ಞಾನಿಗಳು ಜ್ವಾಲಾಮುಖಿಯ ಎಚ್ಚರಿಕೆಯನ್ನು ನೀಡಿದ್ದಾರೆ ಮಹಾಮೇರು ಎಂದೂ ಕರೆಯಲ್ಪಡುವ ಸೆಮೆರು ಬೆಟ್ಟ ಪ್ರದೇಶದಲ್ಲಿ ಕಳೆದ 200 ವರ್ಷಗಳಲ್ಲಿ ಹಲವಾರು ಬಾರಿ ಸೋಟಗೊಂಡಿದೆ.
ಇಂಡೋನೇಷ್ಯಾ, 270 ಮಿಲಿಯನ್‍ಗಿಂತಲೂ ಹೆಚ್ಚು ಜನರಿರುವ ದ್ವೀಪ ಸಮೂಹವಾಗಿದ್ದು, ಪೆಸಿಫಿಕ್ ರಿಂಗ್ ಆಫ್ ಫೈಯರ್ ಉದ್ದಕ್ಕೂ ಇದೆ, ಇದು ಕುದುರೆಗಾಲಿನ ಆಕಾರದ ದೋಷ ರೇಖೆಗಳ ಸರಣಿಯಾಗಿದೆ ಮತ್ತು ಭೂಕಂಪಗಳು ಮತ್ತು ಜ್ವಾಲಾಮುಖಿ ಚಟುವಟಿಕೆ ಕೇಂದ್ರವಾಗಿದೆ.
#Indonesia #MountSemeru #volcanoerupts, #Triggered,