ವೋಟರ್ ಐಡಿ ಗೋಲ್‍ಮಾಲ್, ಆಯೋಗಕ್ಕೆ ಕಾಂಗ್ರೆಸ್ ದೂರು

Social Share

ಬೆಂಗಳೂರು,ನ.19- ಮತದಾರರ ಗುರುತಿನಚೀಟಿ ಪರಿಷ್ಕರಣೆಯಲ್ಲಿ ನಡೆದಿರುವ ಅಕ್ರಮವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ ಸೇರಿದಂತೆ ಮತ್ತಿತರರ ನಿಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರಿಗೆ ದೂರು ನೀಡಿದರು.

ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಮತದಾರರ ಗೌಪ್ಯ ಮಾಹಿತಿಯನ್ನು ಕಲೆ ಹಾಕಲಾಗಿದೆ. ಕೆಲವು ಕಡೆ ಉದ್ದೇಶಪೂರ್ವಕವಾಗಿ ರ್ನಿಷ್ಟ ಸಮುದಾಯಕ್ಕೆ ಸೇರಿದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರ ಹಿಂದೆ ಖಾಸಗಿ ಸಂಸ್ಥೆ, ಬಿಬಿಎಂಪಿ ಮತ್ತು ಸರ್ಕಾರದ ಕೆಲವು ಸಚಿವರು ಶಾಮೀಲಾಗಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ನಿಯೋಗವು ಮನವಿ ಮಾಡಿತು.

ಮಕ್ಕಳಾಗಲಿಲ್ಲವೆಂದು ರುಬ್ಬುಕಲ್ಲಿನಿಂದ ಜಜ್ಜಿ ಮಹಿಳೆಯ ಕೊಲೆ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಪ್ರಕರಣದಲ್ಲಿ ಸಚಿವರು ಮತ್ತು ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದುವರೆಗೂ ಯಾರು ಬಂಧನವಾಗಬೇಕಿತ್ತೊ ಅವರು ಬಂಧನವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಘುವಾಗಿ ತೆಗೆದುಕೊಂಡಿದ್ದು, ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ನಾವು ಆಯೋಗಕ್ಕೆ ನಮ್ಮ ಬಳಿ ಸಿಕ್ಕಿರುವ ದಾಖಲೆಗಳನ್ನು ನೀಡಿದ್ದೇವೆ. ಚಿಲುಮೆ ಎಂಬ ಸಂಸ್ಥೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಬಿಬಿಎಂಪಿ ಇಲ್ಲವೇ ಸರ್ಕಾರ ಅನುಮತಿ ಕೊಟ್ಟಿತ್ತೇ? ಕೊಟ್ಟಿದ್ದರೆ ಯಾವಾಗ ನೀಡಿತ್ತು? ಚುನಾವಣಾ ಆಯೋಗದ ಅನುಮತಿಯನ್ನು ಪಡೆದಿತ್ತೇ ಎಂದು ಪ್ರಶ್ನೆ ಮಾಡಿದರು.

ನಿಯಮಗಳ ಪ್ರಕಾರ ಮತದಾರರ ಗೌಪ್ಯ ಮಾಹಿತಿಯನ್ನು ಕಲೆ ಹಾಕುವುದು ಶಿಕ್ಷಾರ್ಹ ಅಪರಾಧ. ಚಿಲುಮೆ ಸಂಸ್ಥೆ ಮತ್ತು ಸಚಿವರೊಬ್ಬರಿಗೆ ಸೇರಿದ ಹೊಂಬಾಳೆ ಸಂಸ್ಥೆಗೆ ಒಂದಕ್ಕೊಂದು ಸಂಬಂಧವಿದೆ. ಈಗ ಏನೂ ನಡೆದೇ ಇಲ್ಲ ಎಂದು ಸರ್ಕಾರ ಹೇಳುತ್ತಿದೆ ಎಂದು ಆಪಾದಿಸಿದರು.

ಮತದಾರರ ವೈಯಕ್ತಿಕ ಮಾಹಿತಿ ಕಳುವಿನ ಬಗ್ಗೆ ದಾಖಲೆ ಸಿಕ್ಕಿಲ್ಲ: ತುಷಾರ್ ಗಿರಿನಾಥ್

ಮತದಾರರ ಮಾಹಿತಿ ಅಕ್ರಮದ ಬಗ್ಗೆ ನಾವು ಎಲ್ಲ ವಿಚಾರವನ್ನು ಜನರ ಮುಂದೆ ಇಟ್ಟಿದ್ದೇವೆ. ಮತದಾರರ ಪಟ್ಟಿಯಲ್ಲೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ವಿಚಾರವಾಗಿ ಸರ್ಕಾರ ಪ್ರಮುಖ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ನಿನ್ನೆ ಪೊಲೀಸರು ದಾಳಿ ನಡೆಸಿ ಕೆಲವು ದಾಖಲೆ ವಶಪಡಿಸಿಕೊಂಡಿದ್ದು, ಅಲ್ಲಿ ನೋಟು ಏಣಿಕೆ ಯಂತ್ರಗಳು ಲಭ್ಯವಾಗಿವೆ. ಟ್ರಸ್ಟ್ ಗಳಲ್ಲಿ 2 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ದೇಣಿಗೆಯಾಗಿ ಪಡೆಯುವಂತಿಲ್ಲ. ಚೆಕ್ ಮೂಲಕವೇ ಪಡೆಯಬೇಕು.

ಬೆಂಗಳೂರಿನ ವಾಹನ ಸವಾರರೇ ಇಲ್ಲಿ ಗಮನಿಸಿ

ಹೀಗಿರುವಾಗ ಅಲ್ಲಿ ನೋಟು ಏಣಿಕೆ ಯಂತ್ರ ಯಾಕಿತ್ತು? ಆ ಕಚೇರಿಯಲ್ಲಿ ಕಪ್ಪು ಹಣ ಬಿಳಿ ಹಣವಾಗಿ ಪರಿವರ್ತನೆಯಾಗುತ್ತಿತ್ತು. ಈ ವಿಚಾರವಾಗಿ ಮುಂದೆ ದಾಖಲೆ ಸಮೇತ ಮಾತನಾಡುತ್ತೇವೆ ಎಂದು ಹೇಳಿದರು.

voter, data, thef, Congress, demand, arrest,

Articles You Might Like

Share This Article