ಮತದಾರರ ಮಾಹಿತಿ ಕಳವು ಪ್ರಕರಣ : ಪಕ್ಷಗಳ ಕೆಸರೆರಚಾಟ ಮುಂದುವರಿಕೆ

Social Share

ಬೆಂಗಳೂರು,ನ.18- ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಮತದಾರರ ಪರಿಷ್ಕøತ ಪಟ್ಟಿಯಲ್ಲಿನ ಮಾಹಿತಿ ಕಳವು ಪ್ರಕರಣ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕೆಸರೆರಚಾಟ ಶುಕ್ರವಾರವೂ ಮುಂದುವರೆದಿದೆ.
ಸರ್ಕಾರ ಇದರಲ್ಲಿ ಯಾವುದೇ ರೀತಿಯ ಆರೋಪ, ಅಕ್ರಮ ನಡೆದಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರೆ ಪ್ರತಿಪಕ್ಷಗಳು ಮಾತ್ರ ತನಿಖೆ ನಡೆಯಲಿ ಎಂದು ಒತ್ತಾಯಿಸಿವೆ.

ಇದರ ನಡುವೆ ರಾಜ್ಯ ಚುನಾವಣಾ ಆಯೋಗವು ಪ್ರಕರಣ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲಾ ಬಿಸ್ವಾಸ್ ಅವರನ್ನು ತನಿಖಾಕಾಧಿರಿಯನ್ನಾಗಿ ನೇಮಿಸಿದೆ.
ಇನ್ನೊಂದೆಡೆ ಬೆಂಗಳೂರು ಚುನಾವಣಾಕಾಧಿರಿಯೂ ಆಗಿರುವ ಬಿಬಿಎಂಪಿ ವಿಶೇಷ ಆಯುಕ್ತ ಎಸ್.ರಂಗಪ್ಪ ಅವರಿಗೂ ಚುನಾವಣಾ ಆಯೋಗ ನೊಟೀಸ್ ಜಾರಿಗೊಳಿಸಿದೆ.

ಪ್ರಕರಣದ ಕೇಂದ್ರಬಿಂದು ಎನ್ನಲಾಗುತ್ತಿರುವ ಚಿಲುಮೆ ಸಂಸ್ಥೆಯ ವಿರುದ್ಧ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಪ್ರಕರಣ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಸರ್ಕಾರ ಮಾತ್ರ ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ.

ಕೆಲವು ಕಡೆ ಮತದಾರರ ಹೆಸರು ಎರಡೆರಡು ಕಡೆ ಸೇರ್ಪಡೆ ಯಾಗಿದ್ದರಿಂದ ಅಂಥವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ .ಇದು ಪ್ರತಿ ಚುನಾವಣಾ ಸಂದರ್ಭದಲ್ಲೂ ನಡೆಯುವ ಸಾಮಾನ್ಯ ಪ್ರಕ್ರಿಯೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಇದೇ ಸಂಸ್ಥೆಗೆ ಪರಿಷ್ಕರಣೆ ಮಾಡಲು ನೀಡಲಾಗಿತ್ತು ಎಂದು ಸರ್ಕಾರ ಆರೋಪವನ್ನು ತಳ್ಳಿ ಹಾಕುತ್ತಿದೆ.

2025ರ ಜೂನ್ ವೇಳೆಗೆ 175 ಕಿ.ಮೀ. ಮೆಟ್ರೋ ಮಾರ್ಗ ಸಿದ್ಧ

ನ್ಯಾಯಾಂಗ ತನಿಖೆಯಾಗಲಿ:
ಪ್ರಕರಣ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ನಮ್ಮ ಕಾಲದಲ್ಲಿ ನಡೆದಿರಲಿ ಅಥವಾ ಬೇರೆ ಯಾರ ಅವಧಿಯಲ್ಲಾದರೂ ನಡೆಯಲಿ. ಒಂದು ಸಂಸ್ಥೆಗೆ 18 ಸಾವಿರ ಮಂದಿ ಕೆಲಸ ಮಾಡುತ್ತಾರೆ ಎಂದರೆ ಯಾರಾದರೂ ಉಚಿತವಾಗಿ ಕೆಲಸ ಮಾಡುತ್ತಾರಾ? ಇದರಲ್ಲಿ ಅನೇಕ ಅನುಮಾನಗಳಿದ್ದು, ತನಿಖೆಯಾಗ ಬೇಕೆಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ವೇಳೆ ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿಯನ್ನು ನಮ್ಮ ಅವಧಿಯಲ್ಲಿ ನೀಡಿದ್ದರೆ ತನಿಖೆ ನಡೆಸಲಿ. ಸಚಿವರು, ಶಾಸಕರು, ಅಧಿಕಾರಿಗಳು ಯಾರೇ ಭಾಗಿಯಾಗಿದ್ದರೂ ಸರ್ಕಾರ ತಕ್ಷಣವೇ ಬಂಧಿಸಲಿ ಎಂದು ಸವಾಲು ಎಸೆದರು.

ಸಿದ್ದರಾಮಯ್ಯ, ಡಿಕೆಶಿ ಚುನಾವಣೆಯಲ್ಲಿ ಸ್ಪರ್ಧಿಸೋದು ಬೇಡ : ಸಂತೋಷ ಲಾಡ್

ಚಿಲುಮೆ ಸಂಸ್ಥೆ ಹಿಂದೆ ಯಾರಿದ್ದಾರೆ? ಸಚಿವರು ಯಾರು? ಅಧಿಕಾರಿಗಳು ಯಾರ್ಯಾರು ಭಾಗಿಯಾಗಿದ್ದಾರೆ ಎಲ್ಲವೂ ಆಚೆ ಬರಬೇಕು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳನ್ನು ಬಂಧನಕ್ಕೊಳಪಡಿಸಬೇಕೆಂದು ಒತ್ತಾಯಿಸಿದರು.

ಇತ್ತ ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಚಿಂಲುಮೆ ಎಂಬುವುದು ಖಾಸಗಿ ಸಂಸ್ಥೆಯಾಗಿದೆ. ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಹೆಸರಿನಲ್ಲಿ ಇದು ಕಾರ್ಯಾಚರಣೆ ನಡೆಸುತ್ತಿದೆ.

2019ರ ಲೋಕಸಭಾ ಚುನಾವಣೆ ಸಂಬಂಧ ಕೆಲಸ ಮಾಡಿದ್ದ ಚಿಲುಮೆ ಸಂಸ್ಥೆ ಇದೀಗ 2023ರ ಚುನಾವಣೆಗೂ ಕೂಡ ಅದೇ ಮಾದರಿಯ ಕೆಲಸವನ್ನು ನಿರ್ವಹಣೆ ಮಾಡಲು ಗುತ್ತಿಗೆಯನ್ನು ಪಡೆದುಕೊಂಡಿದೆ ಎನ್ನಲಾಗುತ್ತಿದೆ.

ಮತದಾರರ ಮಾಹಿತಿ ಕಳುವು ಕುರಿತು ಚುನಾವಣಾ ಆಯೋಗದಿಂದ ತನಿಖೆ

ಚಿಲುಮೆ ನಡೆಸಿದ ಅಕ್ರಮ ಏನು?
ಮತದಾರರಿಗೆ ಜಾಗೃತಿ ಮೂಡಿಸುವ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಈ ಸಂಸ್ಥೆ ಬಿಎಲ್‍ಓ (ಬೂತ್ ಮಟ್ಟದ ಅಧಿಕಾರಿ) ಹೆಸರಿನಲ್ಲಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ಮತದಾರರ ಮನೆಗಳಿಗೆ ತೆರಳಿ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿದೆ. ಹಾಗೂ ಈ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬುವುದು
ಅವರ ವಿರುದ್ಧ ಇರುವ ಆರೋಪವಾಗಿದೆ.

ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕರು, ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ ಎಂಬ ಸಂಸ್ಥೆಗಳೂ ಇದರಲ್ಲಿ ಭಾಗಿಯಾಗಿವೆ. ಈ ಸಂಸ್ಥೆ ಡಿಜಿಟಲ್ ಸಮೀಕ್ಷಾ ಎಂಬ ಆಪ್ ಮೂಲಕ ದತ್ತಾಂಶವನ್ನು ಸಂಗ್ರಹ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

voter, data, theft, allegations, BJP, Congress,

Articles You Might Like

Share This Article