ಮತ ಮಾಹಿತಿಗೆ ಕನ್ನ : ಆರೋಪ ಮುಚ್ಚಿಹಾಕುವ ಯತ್ನ ನಡೆದಿತ್ತೆ..?

Social Share

ಬೆಂಗಳೂರು, ನ.22- ಮತದಾರರ ಪಟ್ಟಿ ಅಕ್ರಮ ಕುರಿತು ಕಳೆದ ಸೆಪ್ಟೆಂಬರ್‍ನಲ್ಲೇ ದೂರು ನೀಡಿದ್ದರೂ ಬಿಬಿಎಂಪಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತೆ ಪ್ರದರ್ಶಿಸಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಸಿತ್ತೇ ಎಂಬ ಅನುಮಾನ ದಟ್ಟವಾಗಿದೆ.

ಚಿಲುಮೆ ಸಂಸ್ಥೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆಸುತ್ತಿರುವ ಚಟುವಟಿಕೆಗಳು, ದತ್ತಾಂಶ ಸಂಗ್ರಹ ಸೇರಿದಂತೆ ಹಲವು ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಮನ್ವಯ ಟ್ರಸ್ಟ್ ಸೆ.20ರಂದು ಜಿಲ್ಲಾ ಮುಖ್ಯ ಚುನಾವಧಿಣಾಕಾರಿಯಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಇ-ಮೇಲ್ ಮೂಲಕ ದೂರು ನೀಡಿತ್ತು.

ಆದರೆ, ಈ ದೂರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿರುವುದು ಕಂಡುಬಂದಿದೆ. ಸಮನ್ವಯ ಸಂಸ್ಥೆ ದೂರಿಗೆ ಕಾಟಾಚಾರದ ವಿಚಾರಣೆ ನಡೆಸುವ ಪ್ರಯತ್ನಗಳಾಗಿವೆ. ಸಂಸ್ಥೆಯ ಸಂಪರ್ಕದ ವಿಳಾಸ ಬೆಂಗಳೂರಿನಲ್ಲಿದ್ದರೂ ಬಿಬಿಎಂಪಿ ಅಧಿಕಾರಿಗಳು ದಾವಣಗೆರೆ ಜಿಲ್ಲೆಯ ಜಗಳೂರಿನ ಕಚೇರಿಗೆ ನೋಟಿಸ್ ಕಳುಹಿಸಿದ್ದಾರೆ.

ಬಿ.ಎಲ್.ಸಂತೋಷ್‍ಗೆ ಲುಕ್‍ಔಟ್ ನೋಟಿಸ್

ಭಾನುವಾರ ರಜೆ ದಿನ ಹೋಗಿ ಜಗಳೂರು ಕಚೇರಿ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಉದ್ದೇಶಪೂರ್ವಕವಾಗಿ ಈ ಎಲ್ಲ ನಡೆಗಳು ಬಿಬಿಎಂಪಿಯ ಪ್ರಾಮಾಣಿಕತೆಯನ್ನು ಶಂಕಿಸುವಂತೆ ಮಾಡಿವೆ. ಸಮನ್ವಯ ಸಮಿತಿ ಮೊದಲ ಬಾರಿಗೆ ಧ್ವನಿ ಎತ್ತಿ ಮತದಾರರ ಪಟ್ಟಿಯ ಅಕ್ರಮಗಳ ಬಗ್ಗೆ ಸುಳಿವು ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರ ಹಿಂದೆ ಹಲವು ಅನುಮಾನಗಳಿವೆ.

ಸಮನ್ವಯ ಟ್ರಸ್ಟ್ ಸಿಬ್ಬಂದಿಗಳು ದೂರು ನೀಡಿ ಮನೆಗೆ ಬರುತ್ತಿದ್ದಂತೆ ಅವರಿಗೆ ಬೆದರಿಕೆ ಕರೆಗಳು ಶುರುವಾಗಿವೆ. ಇನ್ನೂ ಕೆಲವರು ಮನೆ ಬಳಿಯೇ ಬಂದು ಬೆದರಿಕೆ ಹಾಕಿ ದೂರು ಹಿಂಪಡೆಯಿರಿ ಎಂದು ಒತ್ತಡ ಹೇರಿರುವುದು ಬೆಳಕಿಗೆ ಬರುತ್ತಿದೆ.

ಕೆರೆಯ ನೀರನ್ನು ಕೆರೆಗೇ ಚೆಲ್ಲುತ್ತಿದ್ದೇವೆ. ನೀವು ಸುಮ್ಮನಿರಿ ಎಂದು ಧಮ್ಕಿ ಹಾಕಲಾಗಿದೆ. ಚಿಲುಮೆ ಟ್ರಸ್ಟ್ ಚಟುವಟಿಕೆ ಹಿಂದೆ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವರೂ ಇದ್ದಾರೆ. ನೀವು ಹೆಚ್ಚು ಧ್ವನಿ ಎತ್ತಿದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಸಲಾಗಿದೆ.

ಬೇರೆ ಬೇರೆ ಹೆಸರುಗಳಲ್ಲಿ ಬ್ಲಾಕ್‍ಮೇಲ್ ಮಾಡಿ ದೂರು ವಾಪಸ್ ತೆಗೆದುಕೊಳ್ಳುವಂತೆ ಮಾಡುವ ಪ್ರಯತ್ನಗಳಾಗಿವೆ. ಅಲ್ಲಿಗೆ ಚಿಲುಮೆ ಸಂಸ್ಥೆ ಭಾರೀ ಅಕ್ರಮದ ಸಂಚಿನಲ್ಲಿ ತೊಡಗಿದ್ದು, ಅದು ಬಿಬಿಎಂಪಿ ಅಧಿಕಾರಿಗಳ ಅರಿವಿನಲ್ಲಿತ್ತು ಎಂಬುದು ಸ್ಪಷ್ಟವಾಗುತ್ತಿದೆ. ಸಮನ್ವಯ ಟ್ರಸ್ಟ್ ಯಾವುದೇ ಒತ್ತಡಕ್ಕೆ ಮಣಿಯದೆ ಗಟ್ಟಿಯಾಗಿ ನಿಂತಿತ್ತು ಎಂದು ತಿಳಿದುಬಂದಿದೆ.

ಆದರೆ, ಅದರ ದೂರಿಗೆ ಸರಿಯಾದ ವಿಚಾರಣೆ ನಡೆದಿರಲಿಲ್ಲ. ಸುಮಾರು ಮೂರು ತಿಂಗಳ ಬಳಿಕ ಪ್ರಕರಣ ಬಹಿರಂಗವಾಗಿದೆ. ರಾಜಕೀಯ ಪಕ್ಷಗಳು ಕೈ ಹಾಕಿದ್ದರಿಂದಾಗಿ ಗಂಭೀರತೆ ಹೆಚ್ಚಾಗಿದೆ.

ವಾಯುಭಾರ ಕುಸಿತ, ರಾಜ್ಯದಲ್ಲಿ ಇನ್ನೆರಡು ದಿನ ಮಳೆ

44 ಪುಟಗಳ ಪ್ರಶ್ನಾವಳಿ: ಚುನಾವಣಾ ಆಯೋಗ ಮತದಾರರ ಜಾಗೃತಿಗಾಗಿ ಕಾರ್ಯಕ್ರಮ ರೂಪಿಸುವಂತೆ ಬಿಬಿಎಂಪಿಗೆ ಸೂಚಿಸುತ್ತದೆ. ಅದರ ಪ್ರಕಾರ ಕಾರ್ಯಕ್ರಮಗಳು ಜಾರಿಯಾಗಬೇಕಿತ್ತು. ಆದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ ಜವಾಬ್ದಾರಿಯನ್ನೂ ಚಿಲುಮೆ ಸಂಸ್ಥೆಗೆ ವಹಿಸಿದೆ. ಚಿಲುಮೆ ಸಂಸ್ಥೆಯವರು ಅನಧಿಕೃತವಾಗಿ ಮತಗಟ್ಟೆ ಅಧಿಕಾರಿಗಳು ನೇಮಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.

ಮನೆ ಮನೆ ಸಮೀಕ್ಷೆ ವೇಳೆ 12 ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಲಾಗಿದೆ. ಮತದಾರರ ಹೆಸರು, ಮೊಬೈಲ್ ಸಂಖ್ಯೆ, ಹುದ್ದೆ, ವಾರ್ಡ್ ಸಂಖ್ಯೆ, ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆ ಹೆಸರು, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹೆಸರು, ಮತಗಟ್ಟೆ ಸಂಖ್ಯೆ, ಮತಗಟ್ಟೆ ಹೆಸರು, ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರದ ಮಾಹಿತಿ ಕಲೆ ಹಾಕಲಾಗಿದೆ.

ಈ ಮೂಲಕ ಚಿಲುಮೆ ಸಂಸ್ಥೆಯ ಕಾರ್ಯಚಟುವಟಿಕೆಗಳು ಬಿಬಿಎಂಪಿಗಷ್ಟೇ ಸೀಮಿತವಾಗದೆ ರಾಜ್ಯಾದ್ಯಂತ ವಿಸ್ತರಣೆಯಾಗುವ ಸಾಧ್ಯತೆಗಳಿದ್ದವು ಎಂದು ತಿಳಿದುಬಂದಿದೆ. ಸಂಗ್ರಹಿಸಿದ ಮಾಹಿತಿಗಳ ಖಚಿತತೆಯನ್ನು ಮತ್ತಷ್ಟು ದೃಢಪಡಿಸಲು ಮತದಾರರು ಹೊಂದಿರುವ ಆಸ್ತಿ ಸಂಖ್ಯೆ, ಮನೆ ನಂ., ಮಹಡಿ, ಕಟ್ಟಡದ ಹೆಸರು, ಸಂಪೂರ್ಣ ವಿಳಾಸ, ನಕ್ಷೆ ಪ್ರಕಾರ ಆಸ್ತಿಯ ಪ್ರಾ ಕಾರಗಳನ್ನು ನಮೂದಿಸಲಾಗುತ್ತಿತ್ತು. ಈ ಮೂಲಕ ದತ್ತಾಂಶಗಳು ಶೇ.100ರಷ್ಟು ಖಚಿತವಾಗಿವೆ ಎಂಬುದನ್ನು ನಂಬಿಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ.

ಗಡಿ ವಿವಾದ ಕೆದಕಿದ ಮಹಾರಾಷ್ಟ್ರ : ಸಿಎಂ ಬೊಮ್ಮಾಯಿ ಆಕ್ರೋಶ

ಮನೆ ಮನೆ ಸಮೀಕ್ಷೆ ನಡೆಸಿದ ಸಿಬ್ಬಂದಿ ಖಾಲಿ ಮನೆಗಳ ಮಾಹಿತಿಗಳನ್ನೂ ಕಲೆ ಹಾಕುತ್ತಿದ್ದರು. ಗುರುತಿನ ಚೀಟಿಯ ಸಂಖ್ಯೆಯನ್ನೂ ಪಡೆದುಕೊಳ್ಳುತ್ತಿದ್ದರು. ಎಫ್-6 ನಮೂನೆಗೂ ಸಹಿ ಹಾಕಿಸಿಕೊಂಡಿದ್ದರು ಎಂಬ ಮಾಹಿತಿಗಳು ಬೆಳಕಿಗೆ ಬಂದಿವೆ.

ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಅಕ್ರಮ ಮತದಾರರ ಪಟ್ಟಿ ಪರಿಷ್ಕರಣೆ, ಆಳ-ಅಗಲಗಳು ಬಗೆದಷ್ಟೂ ಹೆಚ್ಚಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾರಕತೆಯನ್ನು ಪ್ರತಿಬಿಂಬಿಸುತ್ತಿವೆ.

Voter, Data ,Theft, Bbmp,

Articles You Might Like

Share This Article