ವೋಟರ್ ಲಿಸ್ಟ್ ಗೋಲ್‌ಮಾಲ್‌ ; ಗೊಂದಲದಲ್ಲಿ ಮತದಾರರು

Social Share

ಬೆಂಗಳೂರು,ನ.22- ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮತದಾರರ ಪಟ್ಟಿ ಗೋಲ್‍ಮಾಲ್ ಪ್ರಕರಣದಿಂದ ಮತದಾರರಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ. ಮತ ಪರಿಷ್ಕರಣೆ ನೆಪದಲ್ಲಿ ಮತದಾರರ ಮಾಹಿತಿಗೆ ಕನ್ನ ಹಾಕಲಾಗಿದೆ. ಮತಪಟ್ಟಿಯಿಂದ ಹೆಸರನ್ನು ಕೈಬಿಡಲಾಗಿದೆ. ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಿ ಅನ್ಯಾಯ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಎನ್‍ಜಿಒ ಸಂಸ್ಥೆಯೊಂದು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ರಾಜಕೀಯ ಪಕ್ಷವೊಂದಕ್ಕೆ ಅನುಕೂಲವಾಗಲು ಪೂರಕ ಕೆಲಸ ಮಾಡಿರುವುದಲ್ಲದೆ ಹಣಕ್ಕೆ ಮತ ಮಾಹಿತಿಯನ್ನು ಮಾರಾಟ ಮಾಡಿಕೊಂಡಿರುವ ಬಗ್ಗೆ ವ್ಯಾಪಕ ತನಿಖೆ ಕೂಡ ನಡೆಯುತ್ತಿದೆ.

ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್, ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ನೀಡಿ ಸೂಕ್ತ ತನಿಖೆಗೆ ಆಗ್ರಹಿಸಿದೆಯಲ್ಲದೆ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಶ್ವಥ್ ನಾರಾಯಣ ಸೇರಿದಂತೆ ಹಲವರ ವಿರುದ್ಧ ಗಂಭೀರ ಆರೋಪ ಮಾಡಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಚಿಲುಮೆ ಎಂಬ ಎನ್‍ಜಿಒ ಸಂಸ್ಥೆ ಮತದಾರರಿಗೆ ಜಾಗೃತಿ ಮೂಡಿಸುವ ನೆಪದಲ್ಲಿ ಪರಿಷ್ಕರಣೆ ಮಾಡಿ ಸಾವಿರಾರು ಜನರ ಹೆಸರುಗಳನ್ನು ಕೈಬಿಟ್ಟು ಮಾಹಿತಿಯನ್ನು ಮಾರಾಟ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದ ಮೌಲ್ಯ ಅಪಾರವಾದುದು. ಆದರೆ ಅದಕ್ಕೆ ಧಕ್ಕೆ ತರುವಂತಹ ಕೆಲಸಗಳು ನಿರಂತರವಾಗಿ ನಡೆಯುತ್ತಲೆ ಬಂದಿವೆ. ಪ್ರಸ್ತುತ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಆರೋಪಗಳಿಂದ ಗೊಂದಲಕ್ಕೀಡಾಗಿರುವ ಜನರ ಸಮಸ್ಯೆಗಳನ್ನು ನಿವಾರಿಸಬೇಕಾದ ಹೊಣೆಗಾರಿಕೆ ಚುನಾವಣಾ ಆಯೋಗದ ಮೇಲಿದೆ.

ಮತದಾರರ ಪಟ್ಟಿ ಅಕ್ರಮ : ನಾಳೆ ಕಾಂಗ್ರೆಸ್‍ನಿಂದ ಆಯೋಗಕ್ಕೆ ದೂರು

ಮತದಾರರ ಪಟ್ಟಿ ಪರಿಷ್ಕರಣೆ ಹೊಣೆ ಹೊತ್ತ ಚಿಲುಮೆ ಸಂಸ್ಥೆ ಮಾಡಿರುವ ಕೆಲಸವೇನು? ಅದರಿಂದ ಆಗಿರುವ ಅನ್ಯಾಯವೇನು? ಎಷ್ಟು ಜನರ ಹೆಸರು ಕೈಬಿಡಲಾಗಿದೆ ಎಂಬ ಎಲ್ಲ ಮಾಹಿತಿಗಳನ್ನು ತಕ್ಷಣವೇ ಬಹಿರಂಗೊಳಿಸಿ ಜನರ ಗೊಂದಲವನ್ನು ನಿವಾರಿಸಬೇಕು. ಇಲ್ಲದಿದ್ದರೆ ಪರಸ್ಪರ ರಾಜಕೀಯ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ.

ಜನರಲ್ಲಿರುವ ಆತಂಕ ಮುಂದುವರೆಯುತ್ತಲೇ ಇರುತ್ತದೆ. ಈ ಆರೋಪ ಕೇಳಿಬಂದಾಗಲೇ ಸಾಕಷ್ಟು ಜನ ತಮ್ಮ ಗುರುತಿನಚೀಟಿಗಳನ್ನು ಹಿಡಿದು ಪರಿಶೀಲನೆ ಮಾಡತೊಡಗಿದ್ದಾರೆ. ಕೂಡಲೇ ಚುನಾವಣಾ ಆಯೋಗ ಸಂಬಂಧಿಸಿದ ಅಧಿಕಾರಿಗಳು, ಬಿಬಿಎಂಪಿ ಮುಂದಾಗಿ ಜನರಲ್ಲಿರುವ ಗೊಂದಲವನ್ನು ನಿವಾರಿಸಬೇಕು.

ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವುದು, ವಿಳಾಸ ಬದಲಾವಣೆಯಾಗಿದ್ದರೆ ಅದಕ್ಕೆ ಅವಕಾಶ ಕಲ್ಪಿಸುವುದು ಇದನ್ನು ಆಯೋಗ ನಿರಂತರವಾಗಿ ಮಾಡುತ್ತಿರುತ್ತದೆಯಾದರೂ ಜನರಲ್ಲಿ ಮೂಡಿರುವ ದಟ್ಟವಾದ ಅನುಮಾನವನ್ನು ಬಗೆಹರಿಸಬೇಕು. ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.

ಮತದಾರರ ಪಟ್ಟಿ ಸಾರ್ವಜನಿಕ ಆಸ್ತಿ. ಯಾರೂ ಯಾವಾಗ ಬೇಕಾದರೂ ಅದನ್ನು ಪಡೆಯಬಹುದು. ಆದರೆ ಅದನ್ನು ಪರಿಷ್ಕರಿಸುವ ಅಕಾರ ಚುನಾವಣಾ ಆಯೋಗಕ್ಕೆ ಮಾತ್ರ ಇರುತ್ತದೆ. ಯಾರನ್ನಾದರೂ ಹೊಸದಾಗಿ ಸೇರ್ಪಡೆ ಮಾಡಬೇಕು, ಇಲ್ಲವೇ ಹೆಸರು ಕೈಬಿಡಬೇಕೆಂದರೆ ಅದಕ್ಕೆ ಅದರದೇ ಆದ ನಿಯಮಗಳಿರುತ್ತವೆ.

ಆ ನಿಯಮಗಳ ಅನ್ವಯವೇ ಪಟ್ಟಿ ಪರಿಷ್ಕರಣೆ ನಡೆಯಬೇಕಾಗಿರುತ್ತದೆ. ಆದರೆ ಪ್ರಸ್ತುತ ನಡೆಯುತ್ತಿರುವ ಆರೋಪದಂತೆ ಆರೂವರೆ ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟಿರುವುದು ಯಾವ ನಿಯಮಗಳಡಿ ಎಂಬುದು ಕೂಡ ಅನುಮಾನಕ್ಕೆ ಕಾರಣವಾಗಿ ಆರೋಪಕ್ಕೆ ಗುರಿಯಾಗಿದೆ.

ಚಿಲುಮೆ ಸಂಸ್ಥೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಮತ ಮಾಹಿತಿಯನ್ನು ಮಾರಾಟ ಮಾಡಲು ಮುಂದಾಗಿದೆ ಎಂಬ ಆರೋಪವಲ್ಲದೆ ಇದರಲ್ಲಿ ಆಡಳಿತ ಪಕ್ಷದವರ ಕೈವಾಡವಿದೆ ಎಂಬ ಗುರುತರ ಆಕ್ಷೇಪಗಳು ಕೇಳಿಬಂದಿವೆ.

ಹೀಗಾಗಿ ಬಹುತೇಕ ಮತದಾರರಲ್ಲಿ ಅನುಮಾನದ ದಟ್ಟ ಹೊಗೆ ಹತ್ತಿಕೊಂಡಿದೆ. ಹಾಗಾಗಿ ಇದನ್ನು ತಕ್ಷಣವೇ ಬಗೆಹರಿಸಬೇಕಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ಒಂದೆಡೆಯಾದರೆ, ಜನರ ಅನುಮಾನ ಬಗೆಹರಿಸುವುದು ಮೊದಲ ಆದ್ಯತೆಯಾಗಿರಬೇಕು.

ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಸಾರ್ವಭೌಮನಾಗಿದ್ದು, ಜನಪ್ರತಿನಿಗಳನ್ನು ಆಯ್ಕೆ ಮಾಡುವ ಮಹತ್ತರ ಹಕ್ಕು ಇರುತ್ತದೆ. ಆ ಮೂಲಕ ಒಂದು ಜನಪರ ಅಡಳಿತ ನೀಡುವ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ದೊಡ್ಡ ಶಕ್ತಿ ಅವರಿಗಿದೆ.

ರಾಜ್ಯ ಚುನಾವಣಾ ಆಯೋಗದ ಪ್ರಕಾರ ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ತೆಗೆದುಹಾಕುವ ಅಕಾರ ಯಾವುದೇ ಸಂಘ-ಸಂಸ್ಥೆಗಳಿಗಾಗಲಿ, ಖಾಸಗಿ ವ್ಯಕ್ತಿಗಳಿಗಾಗಲಿ ಇರುವುದಿಲ್ಲ.
ಮೃತಪಟ್ಟವರು ಸ್ಥಳಾಂತರಗೊಂಡವರ ಹೆಸರನ್ನು ನಿಯಮಾನುಸಾರ ಪಟ್ಟಿಯಿಂದ ಕೈ ಬಿಡಲಾಗುತ್ತದೆ. ಹಾಗೆಯೇ ಭೌಗೋಳಿಕ ವಿವರ, ಭಾವಚಿತ್ರ, ಸಾಮ್ಯತೆ ಆಧರಿಸಿ ಒಬ್ಬರ ಹೆಸರು ಒಂದಕ್ಕಿಂತ ಹೆಚ್ಚು ಕಡೆ ಇದ್ದರೆ ಅದನ್ನು ನಿಯಮಾನುಸಾರ ಪರಿಶೀಲಿಸಿ ಕೈಬಿಡಲಾಗುತ್ತದೆ.

ವಿದೇಶಿ ಪೈಲಟ್‍ಗಳ ಮೊರೆ ಹೋದ ಏರ್ ಇಂಡಿಯಾ..!

ಮತದಾರರ ಪಟ್ಟಿಯಲ್ಲಿ ಮತದಾರರ ಜಾತಿ, ಧರ್ಮಕ್ಕೆ ಸಂಬಂಸಿದಂತೆ ಯಾವುದೇ ಮಾಹಿತಿ ಹೊಂದಿರುವುದಿಲ್ಲ. ಹಾಗಾಗಿ ನಿರ್ದಿಷ್ಟ ಜಾತಿ, ಸಮುದಾಯದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಪ್ರಶ್ನೆ ಬರುವುದಿಲ್ಲ ಎಂದು ಚುನಾವಣಾ ಆಯೋಗ ಕೂಡ ಸ್ಪಷ್ಟಪಡಿಸಿದೆ.

2023ರ ಕರಡು ಮತದಾರರ ಪಟ್ಟಿ ಈಗಾಗಲೇ ಪ್ರಕಟವಾಗಿದೆ. ಡಿಸೆಂಬರ್ 8ರ ವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈಗಲೇ ನಾವು ಇದನ್ನು ಖಾತ್ರಿಪಡಿಸಿಕೊಳ್ಳಬಹುದು. ಆಯೋಗದ ವೆಬ್‍ಸೈಟ್ https://karcec.gov.in ಪರಿಶೀಲಿಸಿಕೊಳ್ಳಬಹುದು.

ಆದರೆ ಚಿಲುಮೆ ಎಂಬ ಎನ್‍ಜಿಒ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ನೀಡಿದ ಬಿಬಿಎಂಪಿ ನಂತರ ಅದನ್ನು ವಾಪಸ್ ಪಡೆದು ಸುಮ್ಮನಾಗಿದ್ದು, ಈಗ ದೊಡ್ಡ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾಗಿದೆ.
ಕಳೆದ 2018ರಲ್ಲಿ ಈ ಸಂಸ್ಥೆಗೆ ಚುನಾವಣಾ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿತ್ತು ಎಂಬುದು ಆಡಳಿತ ಪಕ್ಷದವರ ಆರೋಪ. ಆದರೆ, ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ, ಮಾತ್ರ ತಮ್ಮ ಪಾತ್ರವೇನೂ ಇಲ್ಲ. ಇದೆಲ್ಲ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುತ್ತಿದೆ.

ಆಪ್ ಶಾಸಕನಿಗೆ ಕಾರ್ಯಕರ್ತರಿಂದಲೇ ಬಿತ್ತು ಗೂಸಾ

ಇದಲ್ಲದೆ 2013ರಿಂದ ಪರಿಷ್ಕರಣೆಯ ಅಂಕಿ-ಅಂಶಗಳನ್ನು ಸೂಕ್ತ ತನಿಖೆಗೊಳಪಡಿಸಲಿ, ಎಲ್ಲ ಸತ್ಯಾಸತ್ಯತೆಗಳು ಹೊರಬರಲಿವೆ ಎಂದು ಹೇಳುತ್ತಿದೆ. ಇವೆಲ್ಲವನ್ನೂ ಗಮನಿಸಿದರೆ ಎಲ್ಲ ಸರ್ಕಾರದ ಅವಗಳಲ್ಲೂ ಮತದಾರರ ಪಟ್ಟಿ ತಯಾರಿಕೆಯಲ್ಲಿ ಕೆಲವು ನೂನ್ಯತೆಗಳು ನಡೆದಿವೆ ಎಂಬುದು ಈಗ ಬಟ್ಟಬಯಲಾಗುತ್ತಿದೆ.

ಹಲವಾರು ಸುಧಾರಣೆಗಳ ನಂತರ ಚುನಾವಣಾ ಆಯೋಗ ಈಗ ಮತದಾರರ ಪಟ್ಟಿಯಲ್ಲಿ ಭಾವಚಿತ್ರದ ಗುರುತಿನ ಚೀಟಿ ವ್ಯವಸ್ಥೆ ಜಾರಿಗೊಳಿಸಿತು. ವಯಸ್ಸು, ಗುರುತಿನ ಚೀಟಿಯ ಸಂಖ್ಯೆಗಳಿರುತ್ತವೆ. ಇದಲ್ಲದೆ ನಿಮ್ಮ ಆಧಾರ್‍ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‍ಪೋರ್ಟ್ ಸೇರಿದಂತೆ ಹಲವು ಸರ್ಕಾರಿ ಮಾನ್ಯತಾ ಕಾರ್ಡ್‍ಗಳನ್ನು ತೋರಿಸಿ ಕೂಡ ಮತದಾನ ಮಾಡಬಹುದು.

ಹೆಚ್ಚು ಹೆಚ್ಚು ಮತದಾನಕ್ಕೆ ಪ್ರತಿ ಬಾರಿ ಹೆಚ್ಚು ಪ್ರಚಾರ, ಜಾಗೃತಿ ಮೂಡಿಸುವ ಚುನಾವಣಾ ಆಯೋಗ ಪ್ರತಿಯೊಬ್ಬರು ಮತದಾನಕ್ಕೆ ಪ್ರೇರಣೆ ನೀಡುತ್ತದೆ.

Voter, data, theft, Bengalureans, check, revised ,electoral, roll,

Articles You Might Like

Share This Article