ಮತದಾರರ ಪಟ್ಟಿ ಅಕ್ರಮ : ನಾಳೆ ಕಾಂಗ್ರೆಸ್‍ನಿಂದ ಆಯೋಗಕ್ಕೆ ದೂರು

Social Share

ಬೆಂಗಳೂರು, ನ.22- ಮತದಾರರ ಪಟ್ಟಿ ಅಕ್ರಮವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವ ಕಾಂಗ್ರೆಸ್, ನಾಳೆ ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಲಿಖಿತ ದೂರು ಸಲ್ಲಿಸಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದು ಅಲ್ಲಿ ಕಾನೂನು ತಜ್ಞರು ಹಾಗೂ ಎಐಸಿಸಿ ಪದಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಮೊದಲ ಹಂತದ ಚರ್ಚೆ ನಡೆಸಿದ ಬಳಿಕ ಕಾನೂನಾತ್ಮಕವಾದ ಲಿಖಿತ ದೂರನ್ನು ಸಿದ್ಧ ಪಡಿಸಿ ನಾಳೆ ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

ಕಾಂಗ್ರೆಸ್ ನಿಯೋಗ ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ರಾಜ್ಯ ಚುನಾವಣಾ ಮುಖ್ಯಾಧಿಕಾರಿಗೆ ದೂರು ನೀಡಿದೆ. ಹಗರಣ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ತನಿಖೆಗೆ ಸೂಚನೆ ನೀಡಿದೆ. ಪೊಲೀಸರು ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ನೋಟಿಸ್ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ತನಿಖೆ ಸಮರ್ಪಕವಾಗಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂಬುದು ಕಾಂಗ್ರೆಸ್‍ನ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ಕೇಂದ್ರ ಆಯೋಗವನ್ನು ಭೇಟಿ ಮಾಡಲು ಕಾಂಗ್ರೆಸ್ ಮುಂದಾಗಿದೆ.

ಭಾರತ ನೆಲದೊಳಗೆ ನುಸುಳುತ್ತಿದ್ದವನು ಸೇನೆಯ ಗುಂಡಿಗೆ ಬಲಿ

ಕಾಂಗ್ರೆಸ್‍ನ ಮನವಿಗೆ ಸ್ಪಂದಿಸಿದ ಕೇಂದ್ರ ಚುನಾವಣಾ ಆಯೋಗ ಭೇಟಿಗೆ ಇಂದು ಸಮಯ ನೀಡಿತ್ತು. ಆದರೆ ಉನ್ನತಾಧಿಕಾರಿಯನ್ನೇ ಭೇಟಿ ಮಾಡಬೇಕಿರುವುದರಿಂದ ಕಾಂಗ್ರೆಸ್ ನಾಯಕರು ಇಂದಿನ ಸಮಯವನ್ನು ತಳ್ಳಿ ಹಾಕಿದ್ದಾರೆ. ನಾಳೆ ಸಂಜೆ 4.45ಕ್ಕೆ ಪರಿಷ್ಕøತ ಸಮಯ ನಿಗದಿಯಾಗಿದೆ.

ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ ಸೇರಿದಂತೆ ಅನೇಕರು ಆಯೋಗದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಪ್ರತಿಪಕ್ಷದ ನಾಯಕರು ದೆಹಲಿಗೆ ತೆರಳಿ ಆಯೋಗದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಇಂದು ಬೆಳಗ್ಗೆ ದೆಹಲಿಗೆ ತೆರಳುವ ಮುನ್ನಾ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಇದೊಂದು ಗಂಭೀರ ಪ್ರಕರಣವಾಗಿದ್ದು, ತಾರ್ಕಿಕ ಅಂತ್ಯದವರೆಗೂ ಕಾಂಗ್ರೆಸ್ ವಿರಮಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಚೀನಾದಲ್ಲಿ ಕೈಗಾರಿಕಾ ಸಗಟು ಕೇಂದ್ರದಲ್ಲಿ ಬೆಂಕಿ, 36 ಕಾರ್ಮಿಕರ ಸಾವು

ಮತದಾರರ ಪಟ್ಟಿಯಲ್ಲಿ ಯಾವುದೇ ಹೆಸರು ಸೇರ್ಪಡೆ ಅಥವಾ ಕೈ ಬಿಡಲು ನಮೂನೆ 7 ಕಡ್ಡಾಯವಾಗಿದೆ. ಬೆಂಗಳೂರಿನಲ್ಲಿ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಮೂನೆ 7 ಎಲ್ಲಿದೆ, ಅದಕ್ಕೆ ಸಹಿ ಮಾಡಿಕೊಟ್ಟವರು ಯಾರು ಎಂಬ ಪ್ರಶ್ನೆಗಳಿವೆ. ಮುಂದೆ ಅವುಗಳ ಬಗ್ಗೆ ಮಾತನಾಡುತ್ತೇವೆ ಎಂದರು.

ಚಿಲುಮೆ ಸಂಸ್ಥೆ ಉಚಿತವಾಗಿ ಸೇವೆ ಒದಗಿಸುವುದಾಗಿ ತಿಳಿಸಿದೆ. ಹಲವಾರು ಸಂಸ್ಥೆಗಳಿಗೆ ಉಪಗುತ್ತಿಗೆ ನೀಡಿದೆ. 2012ರಿಂದಲೂ ಚಿಲುಮೆ ಸಂಸ್ಥೆಗೆ ಹಲವು ರೀತಿಯ ಗುತ್ತಿಗೆ ಕೆಲಸಗಳನ್ನು ನೀಡಿರಬಹುದು. ಆದರೆ ಚುನಾವಣೆ ಕೆಲಸವೇ ಬೇರೆ, ಹಿಂದಿನ ಗುತ್ತಿಗೆಗಳೇ ಬೇರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಬಂಧನ ಕುರಿತಂತೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಕಳ್ಳತನ ಮಾಡಿದವನು ತಾನೇ ಮಾಡಿದ್ದು ಎಂದು ಒಪ್ಪಿಕೊಳ್ಳಬಹುದು. ಆದರೆ ಮಾಡಿಸಿದ್ದು ಯಾರು. ಹಿರಿಯ ಅಧಿಕಾರಿಯೊಬ್ಬರು ತಮಗೆ ಮೇಲಿನಿಂದ ಆದೇಶ ಬಂದಿತ್ತು ಎಂದು ಹೇಳಿದ್ದಾರೆ. ಹಾಗಾದರೆ ಮೇಲಿನವರು ಯಾರು.

ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ, ಡಿ.ಕೆ.ಶಿವಕುಮಾರ್ ಹೇಳಿದ್ದೆ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿನವರೇ, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಮೇಲಿನವರು ಎಂದರೆ ಯಾರು ? ಈ ಕುರಿತು ತನಿಖೆಯಾಗಬೇಕು. ಪೊಲೀಸರಿಂದ ಇದನ್ನು ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೈಕೋರ್ಟ್‍ನ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಬೇಕಿದೆ ಎಂದು ಸ್ಪಷ್ಟಪಡಿಸಿದರು.

ಆರಕ್ಕೇರದ ಬಿಜೆಪಿ, ಮೂರಕ್ಕಿಳಿಯದ ಕಾಂಗ್ರೆಸ್, ಜೆಡಿಎಸ್ ಜೋಶ್

ಈ ಅಕ್ರಮದಲ್ಲಿ ಮತದಾರರ ದತ್ತಾಂಶ ಕಳ್ಳತನವಾಗಿದೆ. ಬೆಂಗಳೂರಿನಲ್ಲಿ 8250 ಮತಗಟ್ಟೆಗಳಿವೆ. ಒಂದೊಂದು ಮತಗಟ್ಟೆಗೆ ಒಬ್ಬೊಬ್ಬ ಅಧಿಕಾರಿ ಕೆಲಸ ಮಾಡಬೇಕು. ಆದರೆ ಚಿಲುಮೆ ಸಂಸ್ಥೆ ಖಾಸಗಿ ವ್ಯಕ್ತಿಗಳಿಗೆ ಅವಕಾಶ ನೀಡಿದೆ.

ಉಪಗುತ್ತಿಗೆ ನಿರ್ವಹಿಸಿದ ಸಂಸ್ಥೆಗಳು ತಮಗೆ ಬೇಕಾದವರನ್ನು ನೇಮಿಸಿಕೊಂಡಿವೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ಗರುಡ ಆಪ್ ಅನ್ನು ಸರ್ಕಾರಿ ಅಧಿಕಾರಿಗಳು ಬಿಟ್ಟು ಬೇರೆಯವರು ಬಳಸಬಾರದು, ಆದರೆ ಬೇರೆಯವರು ಹೇಗೆ ಬಳಸಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಹಲವು ಅನುಮಾನಗಳಿವೆ. ನಮ್ಮ ಬಳಿ ಇನ್ನೂ ಬಹಳಷ್ಟು ಮಾಹಿತಿಗಳಿವೆ, ಹಂತ ಹಂತವಾಗಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇವೆ ಎಂದರು.

ಹಗರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಕಾನೂನಾತ್ಮಕ ಅಂಶಗಳು ಹೆಚ್ಚಿವೆ. ಒಂದು ವೇಳೆ ನಮ್ಮ ಕಾಲದಲ್ಲೂ ತಪ್ಪು ನಡೆದಿದ್ದರೆ ತನಿಖೆ ಮಾಡಲಿ. ಆದರೆ ತನಿಖೆ ಹೈಕೋರ್ಟ್‍ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನಡೆಯಲಿ ಎಂದು ಒತ್ತಾಯಿಸಿದರು.

Voter, data, theft, Congress, Election, Commission,

Articles You Might Like

Share This Article