ವೋಟರ್ ಐಡಿ ಹಗರಣ: ಬಿಬಿಎಂಪಿ ಮುಖ್ಯ ಆಯುಕ್ತರ ಎತ್ತಂಗಡಿ ಸಾಧ್ಯತೆ

Social Share

ಬೆಂಗಳೂರು,ನ.29- ಮತದಾರರ ಪಟ್ಟಿ ಅಕ್ರಮ ಹಗರಣ ವ್ಯಾಪಕ ಸದ್ದು ಮಾಡುತ್ತಿದ್ದಂತೆ ಬಿಬಿಎಂಪಿಯಲ್ಲಿ ಆಯುಕ್ತರ ತಲೆ ದಂಡಕ್ಕೆ ಕ್ಷಣಗಣನೆಗಳು ಶುರುವಾಗಿವೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಎತ್ತಂಗಡಿ ಮಾಡಿ ಸಮರ್ಥ ಅಧಿಕಾರಿಗಳನ್ನು ನೇಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈಗಾಗಲೇ ಬಿಬಿಎಂಪಿಯ ಅಪರ ಚುನಾವಣಾಧಿಕಾರಿಗಳಾಗಿರು ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದು, ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ.

ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿ ಯಶಸ್ವಿಯಾಗಿ ಅಧಿಕಾರ ನಡೆಸಿದ್ದ ಮಂಜುನಾಥ್, ಗೌರವ್‍ಗುಪ್ತ ಅಥವಾ ರಾಜೇಶ್ ಗೌಡ ಅವರಲ್ಲಿ ಒಬ್ಬರನ್ನು ವಾಪಸ್ ಪಾಲಿಕೆಗೆ ಉನ್ನತ ಸ್ಥಾನಕ್ಕೆ ಕರೆತರುವುದು ದಟ್ಟವಾಗಿದೆ. ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಪಸ್ ಆದ ನಂತರ ಆದೇಶ ಹೊರಬೀಳುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

ಪ್ರೇಕ್ಷಕರ ಮನ ಗೆದ್ದ ‘ಸದ್ದು ವಿಚಾರಣೆ ನಡೆಯುತ್ತಿದೆ’

ಮುಖ್ಯ ಆಯುಕ್ತರ ಸ್ಥಾನಕ್ಕೆ ಮಂಜುನಾಥ್ ಪ್ರಸಾದ್ ಅವರನ್ನು ಆಡಳಿತಾಧಿಕಾರಿ ಸ್ಥಾನದಲ್ಲಿರುವ ರಾಕೇಶ್ ಅಧಿಕಾರಿಯ ಸ್ಥಾನಕ್ಕೆ ಮತ್ತೊಂದು ಅಧಿಕಾರಿಯನ್ನು ನೇಮಕ ಮಾಡುವುದು ಪಕ್ಕ ಎಂದು ಹೇಳಲಾಗುತ್ತಿದೆ.

ಚುನಾವಣಾ ಆಯೋಗವೇ ಬಿಎಲ್‍ಒಗಳನ್ನು ನೇಮಕ ಮಾಡಲಿ

ಇದೇ ವೇಳೆ ಬಿಬಿಎಂಪಿಯು ಕೂಡ ಹೊಸ ಬದಲಾವಣೆ ತರುವ ಚಿಂತನೆ ನಡೆದಿದೆ. ಮುಂದಿನ ಚಳಿಗಾಲದ ಅಧಿವೇಶನಲ್ಲಿ ಪ್ರತಿಪಕ್ಷಗಳ ಎದುರು ಮುಚುಗರ ತಪ್ಪಿಸಿಕೊಳ್ಳಲು ಸರ್ಕಾರ ಈ ನಿರ್ಧಾರ ಮಾಡಿದೆ. ವಿಪಕ್ಷನಾಯಕ ಸಿದ್ದರಾಮಯ್ಯ ಕೂಡ ತುಷಾರ್ ವಿರುದ್ಧವೇ ಆರೋಪ ಮಾಡುತ್ತಿದ್ದು, ಅವರ ವರ್ಗಾವಣೆ ಮಾಡುವುದು ಅನಿವಾರ್ಯ ಎಂಬಂತೆ ಭಾಸವಾಗುತ್ತಿದೆ.

Voter, ID, scam, BBMP, Chief, Commissioner, Tushar Girinath,

Articles You Might Like

Share This Article