ವೋಟರ್ ಐಡಿ ಹಗರಣ : ಕೇಂದ್ರ ಚುನಾವಣಾ ಆಯೋಗದಿಂದ ಪರಿಶೀಲನೆ

Social Share

ಬೆಂಗಳೂರು,ನ.24- ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿರುವ ಚಿಲುಮೆ ಸಂಸ್ಥೆ ಹಗರಣ ಕೇಂದ್ರ ಚುನಾವಣಾ ಆಯೋಗದ ನಿದ್ದೆಗೆಡಿಸಿದೆ. ಚಿಲುಮೆ ಸಂಸ್ಥೆ ವಿರುದ್ಧ ಕೇಳಿ ಬಂದಿರುವ ಆರೋಪದ ಹಿನ್ನಲೆಯಲ್ಲಿ ಪ್ರಕರಣದ ಜಾಡು ಪತ್ತೆ ಹಚ್ಚಲು ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತರು ನಗರಕ್ಕೆ ಆಗಮಿಸಿದ್ದಾರೆ.

ನಗರದಲ್ಲಿ ಬೀಡುಬಿಟ್ಟಿರುವ ಉಪ ಆಯುಕ್ತರು ಇಂದು ನಗರದ 28 ಕ್ಷೇತ್ರಗಳ ಮತದಾರರ
ನೋಂದಣಿ ಅಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಕಳೆದ ಜ.1ರಿಂದ ಇಲ್ಲಿಯವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವ ಮತ್ತು ತೆಗೆದು ಹಾಕಿರುವ ಹೆಸರುಗಳು ಹಾಗೂ ತಿದ್ದುಪಡಿ ಮಾಡಿರುವ ದಾಖಲೆಗಳನ್ನು ಅವರು ಪರಿಶೀಲನೆ ನಡೆಸಲಿದ್ದಾರೆ.

ಈ ಬಾರಿ ಬೆಂಗಳೂರು ಒಂದರಲ್ಲೇ 6 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲಿಟ್ ಆಗಿರುವ ಬಗ್ಗೆಯೂ ಉಪ ಆಯುಕ್ತರು ಮಾಹಿತಿ ಪಡೆದುಕೊಳ್ಳಲಿದ್ದಾರೆ ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಕಚೇರಿಯಲ್ಲಿ ಹಾಜರಿದ್ದು ಅವರು ಕೇಳುವ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷ ಕುರಿತಂತೆ ಪರಿಶೀಲನೆ ನಡೆಸಲಿರುವ ಉಪ ಆಯುಕ್ತರು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ವರದಿ ನೀಡಲಿದ್ದಾರೆ.

ಕೇಂದ್ರ ಚುನಾವಣೆ ಅಯೋಗದ ಉಪ ಅಯುಕ್ತರು ಹಾಗೂ ಅಯೋಗದ ಅಧಿಕಾರಿಗಳು ಮತದಾರರ ನೋಂದಣಿ ಕಚೇರಿಗಳಿಗೆ ಭೇಟಿ ನೀಡುತ್ತಿರುವುದರಿಂದ ಚುನಾವಣಾ ಉಸ್ತುವಾರಿ ನೋಡಿಕೊಳ್ಳುವ ಕಂದಾಯಾಧಿಕಾರಿಗಳಿಗೆ ನಡುಕ ಶುರು ಆಗಿದೆ.

Voter, ID, scam, Chilume, Election, Commission,

Articles You Might Like

Share This Article