ಬೆಂಗಳೂರು,ಸೆ.30- ಮತದಾರರ ಮಾಹಿತಿ ಕಳುವು ಪ್ರಕರಣಗಳಿಗೆ ಸರ್ಕಾರೇತರ ಸಂಸ್ಥೆಗಳೇ ಪ್ರಮುಖ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಸ್ವೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಹುತೇಕ ಸರ್ಕಾರೇತರ ಸಂಸ್ಥೆಗಳು ಮತದಾರರ ಮಾಹಿತಿ ಕಳುವು ಮಾಡುವ ಉದ್ದೇಶಗಳನ್ನು ಹೊಂದಿರುತ್ತವೆ ಎಂದು ಬಿಬಿಎಂಪಿಯ ಹಿರಿಯ ಕಂದಾಯಾಧಿಕಾರಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಇಂತಹ ಕಾರ್ಯಕ್ಕೆ ಚಿಲುಮೆ ಸಂಸ್ಥೆ ಯೊಂದೇ ಕೈ ಹಾಕಿಲ್ಲ. ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಹಲವಾರು ಸರ್ಕಾರೇತರ ಸಂಸ್ಥೆಗಳು ಇಂತಹ ದ್ರೋಹ ಮಾಡಿವೆ ಎಂದು ಅವರು ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ. 2013 ರಲ್ಲಿ ಸ್ವೀಪ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜನಾಗ್ರಹ ಸಂಸ್ಥೆ ಕೂಡ ಮತದಾರರ ವೈಯಕ್ತಿಕ ಮಾಹಿತಿ ಕಲೆ ಹಾಕಿತ್ತು. ಅವರ ಕರ್ಮಕಾಂಡವನ್ನು ಬಿಬಿಎಂಪಿ ಸಹ ಕಂದಾಯಾಧಿಕಾರಿಯಾಗಿದ್ದ ಸುಂದರೇಶ್ ಎನ್ನುವರು ಪತ್ತೆ ಹಚ್ಚಿದ್ದರು. ಆ ನಂತರ ಅವರಿಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿತ್ತು.
ಜನಾಗ್ರಹ ಸಂಸ್ಥೆಯವರು ಹಾಲು ಮಾರುವವರು, ಪೇಪರ್ ಹಾಕುವ ಹುಡುಗರ ಮತ್ತಿತರರಿಂದ ವೈಯಕ್ತಿಕ ಮಾಹಿತಿ ಪಡೆಯುತ್ತಿದ್ದರು. ಅವರಿಗೆ ಮಾಹಿತಿ ಕಲೆ ಹಾಕಲು ಯಾವುದೇ ಮಾನದಂಡ ಇರಲಿಲ್ಲ. ಮತದಾರರ ಯಾವ ಕೋಮಿಗೆ ಸೇರಿದವರು, ಅವರ ಹಣಕಾಸಿನ ಸ್ಥಿತಿಗತಿ ಹೇಗಿತ್ತು. ಅವರು ಈ ಹಿಂದೆ ಯಾವ ಪಕ್ಷಕ್ಕೆ ಮತ ಹಾಕಿದ್ದರು ಎಂಬೆಲ್ಲಾ ಮಾಹಿತಿ ಕಲೆ ಹಾಕುತ್ತಿದ್ದರು.
ಖ್ಯಾತ ಉದ್ಯಮಿ ವಿಕ್ರಮ್ ಕಿರ್ಲೋಸ್ಕರ್ ನಿಧನ
ಇದೀಗ ಮತದಾರರ ವೈಯಕ್ತಿಕ ಮಾಹಿತಿ ಕಲೆ ಹಾಕಿರುವ ಆರೋಪಕ್ಕೆ ಗುರಿಯಾಗಿರುವ ಚಿಲುಮೆ ಸಂಸ್ಥೆಯವರು ಮಾಡಿರುವುದು ಅದೇ ಕಾರ್ಯ. ಅವರ ಇಂತಹ ನೀಚ ಕಾರ್ಯಕ್ಕೆ ಅನುಮತಿ ನೀಡಿರುವುದು ನಮ್ಮ ಬಿಬಿಎಂಪಿಯ ಹಿರಿಯ ಅಧಿಕಾರಿಗಳೇ ಆದರೆ, ಶಿಕ್ಷೆ ಅನುಭವಿಸುತ್ತಿರುವುದು ಮಾತ್ರ ಆರ್‍ಒ ಹಾಗೂ ಎಆರ್‍ಒಗಳು ಇದು ಯಾವ ನ್ಯಾಯ ಸರ್ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಆಗಷ್ಟ್ 20 ರಂದು ಚಿಲುಮೆ ಸಂಸ್ಥೆಯವರು ಮತದಾರರ ಗುರುತಿನ ಚೀಟಿ ಹಾಗೂ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಲು ಬಿಬಿಎಂಪಿಯ ಹಿರಿಯ ಅಧಿಕಾರಿಗಳೇ ಅನುಮತಿ ನೀಡಿದ್ದಾರೆ. ಅದಕ್ಕೆ ಪುರಾವೆಗಳು ಇವೆ.
ಅದಕ್ಕೂ ಮುನ್ನ ಶಿಕ್ಷಣ ಇಲಾಖೆಯ ಸೆನ್ಸಸ್ ಮಾಡಿದ್ದ ಚಿಲುಮೆ ಸಂಸ್ಥೆಯವರು ಅದೇ ಮಾಹಿತಿ ಇಟ್ಟುಕೊಂಡು ನಾವು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಕೊಡುತ್ತೇವೆ ಎಂಬ ಭರವಸೆ ನೀಡಿ ಬಿಬಿಎಂಪಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಆಧಾರ್ ಲಿಂಕ್ ಮಾಡುವ ಕೆಲಸಕ್ಕೆ ಅನುಮತಿ ಪಡೆದಿದ್ದರು ಎನ್ನಲಾಗಿದೆ.
ನಾವು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ನಮ್ಮ ಸಿಬ್ಬಂದಿಗಳಿಗೆ ಗುರುತಿನ ಚೀಟಿ ಅವಶ್ಯಕತೆ ಇದೆ ಎಂದ ಚಿಲುಮೆ ಸಂಸ್ಥೆಯವರಿಗೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಿಎಲ್‍ಸಿ ಎಂಬ ಗುರುತಿನ ಚೀಟಿ ನೀಡಲಾಗಿತ್ತು.
ಆದರೆ, ಚಿಲುಮೆ ಸಂಸ್ಥೆಯವರು ಬಿಬಿಎಂಪಿ ನೀಡಿದ್ದ ಬಿಎಲ್‍ಸಿ ಗುರುತಿನ ಚೀಟಿಗಳನ್ನು ಫೇಕ್ ಮಾಡಿ ಬಿಎಲ್‍ಒ ಎಂದು ಗುರುತಿನ ಚೀಟಿ ಮಾಡಿಕೊಂಡಿದ್ದಾರೆ. ಇದು ಇಂದಿನ ವಿವಾದಕ್ಕೆ ಪ್ರಮುಖ ಕಾರಣವಾಗಿದೆ.
ನಮ್ಮ ಹಿರಿಯ ಅಕಾರಿಗಳೇ ಚಿಲುಮೆ ಸಂಸ್ಥೆಯವರಿಗೆ ಸಹಕಾರ ನೀಡಿ ಎಂದು ನಮಗೆ ಆದೇಶಿಸಿರುವುದರಿಂದ ನಮ್ಮ ಅಧಿಕಾರಿಗಳು ಅವರು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ ಅನಿವಾರ್ಯವಾಗಿ ಅವರಿಗೆ ಸಹಕರಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಆದರೆ, ಸರ್ಕಾರೇತರ ಸಂಸ್ಥೆಗಳ ಹಿಂದಿನ ಕರ್ಮಕಾಂಡಗಳ ಅರಿವಿದ್ದ ಕೆಲವು ಹಿರಿಯ ಕಂದಾಯಾಧಿಕಾರಿಗಳು ಮಾತ್ರ ಯಾವುದೇ ಲೋಪಕ್ಕೆ ಅವಕಾಶ ನೀಡಿಲ್ಲ. ಆದರೆ, ಕೆಲವರು ಮೇಲಾಧಿಕಾರಿಗಳ ಮಾತು ಕೇಳಿ ಇದೀಗ ಶಿಕ್ಷೆ ಅನುಭವಿಸುವಂತಾಗಿದೆ.
ಸಲಿಂಗ ವಿವಾಹ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ
ಹೀಗಾಗಿ ಎಲ್ಲ ಅವ್ಯವಹಾರಗಳಿಗೂ ಸರ್ಕಾರೇತರ ಸಂಸ್ಥೆಗಳೇ ಪ್ರಮುಖ ಕಾರಣವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕಾರ್ಯ ನಿರ್ವಹಿಸಲು ಬರುವ ಸರ್ಕಾರೇತರ ಸಂಸ್ಥೆಗಳ ಬಗ್ಗೆ ಹದ್ದಿನಕಣ್ಣಿಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
6ಬಿ ಕರ್ಮಕಾಂಡ: ಮತದಾರರು ತಮ್ಮ ವೈಯಕ್ತಿಕ ಮಾಹಿತಿ ಮಾರ್ಪಾಡು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಅವಕಾಶ ಮಾಡಿಕೊಟ್ಟಿರುವ 6ಬಿ ಅರ್ಜಿಯಲ್ಲೂ ಗೋಲ್‍ಮಾಲ್ ನಡೆಯುತ್ತಿದೆಯಂತೆ!
ನಿಮ್ಮ ಯಾವುದೇ ಮಾಹಿತಿ ಬದಲಾವಣೆ ಮಾಡಿಕೊಳ್ಳಬೇಕಾದರೆ ನೀವು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವೇ ಬಿಎಲ್‍ಒಗಳಿಗೆ ಅರ್ಜಿ ತುಂಬಿಕೊಡಬೇಕು ಆಗ ಮಾತ್ರ ನೀವು ಸೂಚಿಸುವ ಮಾಹಿತಿ ಮಾರ್ಪಡಗಲಿದೆ.
ಭಾರಿ ವೈರಲ್ ಆಯ್ತು ಸೈನಿಕರ ಫೈಟಿಂಗ್ ವೀಡಿಯೋ
ಅದೇ ರೀತಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು 6ಬಿ ಅರ್ಜಿ ಅವಶ್ಯಕ. ಆದರೆ, ಕೆಲವರು ಏಜನ್ಸಿಗಳು ಸಾರ್ವಜನಿಕರು ಇತರ ಸಂಸ್ಥೆಗಳಿಗೆ ಅನ್ಯ ಕಾರ್ಯಗಳಿಗೆ ನೀಡಿದ್ದ ಆಧಾರ್ ಕಾರ್ಡ್ ಮಾಹಿತಿ ಪಡೆದುಕೊಂಡು ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುತ್ತಿದ್ದಾರಂತೆ.
ಇದಕ್ಕೆ ಸೂಕ್ತ ಸಾಕ್ಷಿಯೆಂದರೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಶೇ.90 ರಷ್ಟು ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲಾಗಿದೆ. ಪ್ರಜ್ಞಾವಂತರು ಹೆಚ್ಚಿರುವ ಬೆಂಗಳೂರಿನಲ್ಲಿ ಇದುವರೆಗೂ ಶೇ.10 ರಷ್ಟು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸಲು ಸಾಧ್ಯವಾಗಿಲ್ಲ.
ಬಸ್ – ಟ್ರಕ್ ನಡುವೆ ಭೀಕರ ಅಪಘಾತ: ಆರು ಮಂದಿ ಸಾವು
ಇಂತಹ ಸಂದರ್ಭದಲ್ಲಿ ಶಿರಾ ಕ್ಷೇತ್ರದಲ್ಲಿ ಶೇ.90 ರಷ್ಟು ಮತದಾರರ ಗುರುತಿನ ಚೀಟಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರುವುದರ ಹಿಂದೆಯೂ ಗೋಲ್‍ಮಾಲ್ ನಡೆದಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕುರಿತಂತೆಯೂ ತನಿಖೆಯಾದರೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
voter, information, Theft, NGOs,