ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ : ಕೆಲ ಅಧಿಕಾರಿಗಳಿಗೆ ನಡುಕ ಶುರು

Social Share

ಬೆಂಗಳೂರು,ಡಿ.7- ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿನ ಲೋಪ ದೋಷ ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದ್ದು, ಅಕ್ರಮಕ್ಕೆ ಸಾಥ್ ನೀಡಿರುವ ಕೆಲ ಅಧಿಕಾರಿಗಳು ಮತ್ತು ಅವರಿಗೆ ಬೆಂಬಲವಾಗಿ ನಿಂತಿದ್ದ ಕೆಲವು ರಾಜಕೀಯ ಮುಖಂಡರ ಎದೆಯಲ್ಲಿ ನಡುಕ ಶುರುವಾಗಿದೆ.

ಕೆಲ ರಾಜಕಾರಣಿಗಳ ಸೂಚನೆ ಮೇರೆಗೆ ನಗರದ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಿಂದ ಕೆಲವು ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಕುರಿತಂತೆ ಚುನಾವಣಾ ಆಯೋಗ ಇಂದಿನಿಂದ ತನಿಖೆ ಆರಂಭಿಸಿರುವುದು ಕೆಲ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.

ಅದರಲ್ಲೂ ಚಿಲುಮೆ ಸಂಸ್ಥೆ ವಿರುದ್ಧ ಮೊದಲ ಆರೋಪ ದಾಖಲಾದ ಮಹದೇವಪುರ ಕ್ಷೇತ್ರದಿಂದಲೇ ತನಿಖೆ ಆರಂಭಗೊಂಡಿದೆ. ಈಗಾಗಲೇ ಹಿರಿಯ ಐಎಎಸ್ ಅಧಿಕಾರಿ ಅಜಯ್ ನಾಗ್‍ಭೂಷಣ್ ಅವರನ್ನು ವಿಶೇಷಾಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿದೆ.

BEST CEO ಅವಾರ್ಡ್‍ಗೆ ಎನ್.ಜಯರಾಮ್ ಭಾಜನ

ಇಂದು ಸರ್ವಪಕ್ಷಗಳ ಸಭೆ ಕರೆದಿರುವ ನಾಗಭೂಷಣ್ ಅವರು ಸಭೆಯಲ್ಲಿ ಕಳೆದ ಜ.1 ರ ನಂತರ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಡಿಲಿಟ್ ಮಾಡಿರುವವರ ಪಟ್ಟಿ ಪರಿಶೀಲನೆ ನಡೆಸಿದ್ದಾರೆ. ಮಹದೇವಪುರ ವಿಧಾನಸಭಾ ಕ್ಷೇತ್ರ ಒಂದರಲ್ಲೇ 33,376 ಮತದಾರರ ಹೆಸರುಗಳು ಡಿಲೀಟ್ ಆಗಿದ್ದು, ಯಾವ ಕಾರಣಕ್ಕೆ ಸಾವಿರಾರು ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಮಾಹಿತಿಯನ್ನು ನಾಗಭೂಷಣ್ ಅವರು ಕಲೆ ಹಾಕುತ್ತಿದ್ದಾರೆ.

ದುಬಾರಿ ಮೊಬೈಲ್‍ಗಳನ್ನು ಎಗರಿಸುತ್ತಿದ್ದ ನಾಲ್ವರ ಬಂಧನ

ಚಿಲುಮೆ ಸಂಸ್ಥೆಯ ಕರ್ಮಕಾಂಡವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಆರಂಭಿಸಿರುವ ಅಪರೇಷನ್‍ನಲ್ಲಿ ಮತ್ತಷ್ಟು ಅಧಿಕಾರಿಗಳ ಬಂಡವಾಳ ಬಯಲಾಗುವ ಸಾಧ್ಯತೆಗಳಿವೆ.

ಎಲ್ಲೆಲ್ಲಿ ಡಿಲೀಟ್
ಯಲಹಂಕ 21,968
ಕೆ.ಆರ್ ಪುರಂ 39,763
ಬ್ಯಾಟರಾಯನಪುರ 30,757
ಯಶವಂತಪುರ 35,829
ಆರ್ ಆರ್ ನಗರ 33,009
ದಾಸರ ಹಳ್ಳಿ 35,086
ಮಹಾಲಕ್ಷ್ಮಿಲೇಔಟ್ -20,404
ಮಲ್ಲೇಶ್ವರಂ 11,788
ಹೆಬ್ಬಾಳ 20,039
ಪುಲಕೇಶಿ ನಗರ 22,196
ಸರ್ವಜ್ಞ ನಗರ 28,691
ಸಿವಿ ರಾಮನ್ ನಗರ -21,457
ಶಿವಾಜಿನಗರ 14,679
ಶಾಂತಿನಗರ 20,386
ಗಾಂನಗರ 16,465
ರಾಜಾಜಿನಗರ 12,757
ಗೋವಿಂದರಾಜನಗರ-20,067
ವಿಜಯನಗರ 28,562
ಚಾಮರಾಜಪೇಟೆ 19,304
ಚಿಕ್ಕಪೇಟೆ 16,231
ಬಸವನಗುಡಿ 18,838
ಪದ್ಮನಾಭ ನಗರ 17,435
ಬಿಟಿಎಂ ಲೇಔಟ್ 16,141
ಜಯನಗರ 13,061
ಮಹಾದೇವಪುರ 33,376
ಬೊಮ್ಮನಹಳ್ಳಿ 31,157
ಬೆಂಗಳೂರು ದಕ್ಷಿಣ 45,927
ಆನೇಕಲ್ 24,279
ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ.

BBMP, voter, list, deleted, officials, started, investigation,

Articles You Might Like

Share This Article