ಮತದಾರರ ಪಟ್ಟಿಯಿಂದ ಸಾವಿರಾರು ಮಂದಿಯ ಹೆಸರು ನಾಪತ್ತೆ : ಚಿಲುಮೆ ಕೈವಾಡ ಶಂಕೆ

Social Share

ಬೆಂಗಳೂರು,ನ.18- ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣ ಬಿಬಿಎಂಪಿಯ 243 ವಾರ್ಡ್‍ಗಳ ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. 243 ವಾರ್ಡ್‍ಗಳ ಚುನಾವಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿತ್ತು. ಆದರೆ, ಇದೀಗ ಚಿಲುಮೆ ಸಂಸ್ಥೆ ಮತದಾರರ ವೈಯಕ್ತಿಕ ಮಾಹಿತಿ ಕಲೆ ಹಾಕುವ ವಿಚಾರ ಪರಿಷ್ಕರಣೆಗೆ ತೊಡಕಾಗಿ ಪರಿಣಮಿಸುವ ಸಾಧ್ಯತೆಗಳಿವೆ.

ಚಿಲುಮೆ ಸಂಸ್ಥೆಯ ಸಿಬ್ಬಂದಿಗಳು ಬಿಎಲ್‍ಒಗಳು ಎಂದು ಐಡಿ ಕಾರ್ಡ್ ತಯಾರಿಸಿ ಮತದಾರರ ಮನೆ ಮನೆಗೂ ಹೋಗಿ ಮಾಹಿತಿ ಕಲೆ ಹಾಕಿದೆ ಎಂಬ ಆರೋಪದ ಬೆನ್ನಲ್ಲೆ ನಗರದ ಮತದಾರರ ಪಟ್ಟಿಯಿಂದ 6,69,652 ಮತದಾರರ ಹೆಸರು ಡಿಲಿಟ್ ಮಾಡಿರುವುದು ಬಹಿರಂಗಗೊಂಡಿದೆ.

ಹೀಗಾಗಿ ಮತದಾರರ ಹೆಸರು ಡಿಲಿಟ್ ಆಗಿರುವುದರ ಹಿಂದೆ ಚಿಲುಮೆ ಸಂಸ್ಥೆಯ ಕೈವಾಡ ಇದೆಯೇ ಎಂಬ ಗುಮಾನಿ ಇದೀಗ ಎಲ್ಲರನ್ನೂ ಕಾಡತೊಡಗಿದೆ. ಕೆಲವು ಪ್ರದೇಶಗಳಲ್ಲಿ ಇನ್ನು ಜೀವಂತವಾಗಿರುವ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೇವಲ ಲೆಹಂಗಾ ವಿಚಾರಕ್ಕೆ ಮುರಿದುಬಿತ್ತು ಮದುವೆ..!

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲೂ ಸಾವಿರಾರು ಮಂದಿ ಹೆಸರು ಡಿಲಿಟ್ ಮಾಡಲಾಗಿದೆ. ಯಾವ ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಹೆಸರು ಕೈಬಿಡಲಾಗಿದೆ ಎಂಬ ವಿವರ ಹೀಗಿದೆ.

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 21,968
ಕೆಆರ್ ಪುರಂ ಕ್ಷೇತ್ರದಿಂದ 39,763
ಬ್ಯಾಟರಾಯನಪುರ ಕ್ಷೇತ್ರದಿಂದ 30,757
ಯಶವಂತಪುರ 35,829
ಆರ್‍ಆರ್ ನಗರ 33,009
ದಾಸರಹಳ್ಳಿ 35,086
ಮಹಾಲಕ್ಷ್ಮಿ ಲೇಔಟ್ 20,404
ಮಲ್ಲೇಶ್ವರಂ 11,788
ಹೆಬ್ಬಾಳ 20,039
ಪುಲಕೇಶಿ ನಗರ 22,196
ಸರ್ವಜ್ಞ ನಗರ 28,691
ಸಿವಿ ರಾಮನ್ ನಗರ 21,457
ಶಿವಾಜಿನಗರ 14,679
ಶಾಂತಿನಗರ 20,386
ಗಾಂಧಿನಗರ 16,465
ರಾಜಾಜಿನಗರ 12,757
ಗೋವಿಂದರಾಜನಗರ 20,067

ರಾಷ್ಟ್ರೀಯ ನಾಯಕರನ್ನು ಕರೆತಂದು ಸಾಲು ಸಾಲು ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ
ವಿಜಯನಗರ 28,562
ಚಾಮರಾಜಪೇಟೆ 19,304
ಚಿಕ್ಕಪೇಟೆ 16,231
ಬಸವನಗುಡಿ 18,838
ಪದ್ಮನಾಭನಗರ 17,435
ಬಿಟಿಎಂ ಲೇಔಟ್ 16,141
ಜಯನಗರ 13,061
ಮಹದೇವಪುರ 33,376
ಬೊಮ್ಮನಹಳ್ಳಿ 31,157
ಬೆಂಗಳೂರು ದಕ್ಷಿಣ 45,927
ಹಾಗೂ ಆನೇಕಲ್ 24,279

ನ.1ರಿಂದಲೇ ಪೂರ್ವಾನ್ವಯವಾಗುವಂತೆ ಮೀಸಲಾತಿ ಹೆಚ್ಚಳ ಜಾರಿ

voter, list, names, missing, Chilume, Institute, bangalore,

Articles You Might Like

Share This Article