ಬೆಂಗಳೂರು,ಡಿ.20- ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಹಾಗೂ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡುಗಳಲ್ಲಿ ಯಾವುದೇ ಲೋಪಗಳಿಲ್ಲದಂತೆ ನೋಡಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆ, ರದ್ದತಿ ಮತ್ತು ಮಾರ್ಪಾಡು ಕುರಿತಂತೆ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿರುವ ಆಯುಕ್ತರು ರಾಜಾಜಿನಗರದ ಹಲವಾರು ಮನೆಗಳಿಗೆ ಭೇಟಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಸಂಬಂಧಪಟ್ಟ ಅಧಿಕಾರಿಗಳ ಜೊತೆ ರಾಜಾಜಿ ನಗರ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಹಲವಾರು ಮನೆಗಳಿಗೆ ಭೇಟಿ ನೀಡಿ ವಿಲೇವಾರಿ ಮಾಡಿರುವ ನಮೂನೆಗಳ ಪರಿಶೀಲನೆ ನಡೆಸಿದರು.
ಇಯರ್ ಎಂಡ್ ಸೆಲೆಬ್ರೇಷನ್ ಸಂದರ್ಭದಲ್ಲೇ ಆಟೋ ಮುಷ್ಕರ
ರಾಜಾಜಿನಗರ ವ್ಯಾಪ್ತಿಯಲ್ಲಿ 7 ಮನೆಗಳಿಗೆ ಭೇಟಿ ನೀಡಿ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡು ಮಾಡಿರುವ ನಮೂನೆಗಳನ್ನು ಪರಿಶೀಲಿಸಿ ಬಿ.ಎಲ.ಒ ಗಳು ಎಲ್ಲಾ ಸರಿಯಾದ ಕ್ರಮದಲ್ಲಿ ಮಾಡಿರುವುದನ್ನು ಗಮನಿಸಿ ನಮೂನೆಯಲ್ಲಿ ದೃಢೀಕರಿಸಿ ನಮೂನೆ ಸಲ್ಲಿಸಿರುವವರಿಂದ ಸಹಿ ಪಡೆದುಕೊಳ್ಳಲಾಯಿತು.
ಮೊದಲಿಗೆ ರಾಜಾಜಿನಗರ ವಾರಿಯರ್ ಬೇಕರಿ ಬಳಿಯ ಮನೆಗೆ ಭೇಟಿ ನೀಡಿ ನಮೂನೆಯನ್ನು ಪರಿಶೀಲಿಸಿ ನಮೂನೆಯ ಪ್ರತಿಯಲ್ಲಿ ಎಲ್ಲವೂ ಸರಿಯಾಗಿರುವುದನ್ನು ಗಮನಿಸಿ ಮುಖ್ಯ ಆಯುಕ್ತರು ನಮೂನೆಯನ್ನು ದೃಢೀಕರಿಸಿ ಸಹಿ ಪಡೆದುಕೊಂಡರು.
ಉಳಿದಂತೆ ರಾಜಾಜಿನಗರ ಹಾಗೂ ಶಿವನಹಳ್ಳಿ ವ್ಯಾಪ್ತಿಯಲ್ಲಿ 5 ಮನೆಗಳಿಗೆ ಭೇಟಿ ನೀಡಿ ನಮೂನೆಗಳನ್ನು ಪರಿಶೀಲಿಸಿ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಹಾಗೂ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡುಗಳಲ್ಲಿ ಯಾವುದೇ ಲೋಪಗಳಿಲ್ಲದಂತೆ ಪರಿಶೀಲಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಆಯುಕ್ತರು, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಯುತ್ತಿದೆ. ಮತದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಖುದ್ದಾಗಿ 10 ಮನೆ ಗಳಿಗೆ ಭೇಟಿ ನೀಡಿ ಪರಿಶೀಲಿಸುವ ಹಾಗೂ ಕಛೇರಿಯಲ್ಲಿ 52 ನಮೂನೆಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ED ಅಂದ್ರೆ ಎಲೆಕ್ಷನ್ ಡಿಪಾರ್ಟ್ಮೆಂಟ್, IT ಅಂದ್ರೆ ಇಂಜಲಿಜೆಂಟ್ ಡಿಪಾರ್ಟ್ಮೆಂಟ್ : ಹರಿಪ್ರಸಾದ್ ವಾಗ್ದಾಳಿ
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ 3 ನಮೂನೆಗಳನ್ನು ಪರಿಶೀಲಿಸಲಾಯಿತು. ಮೊದಲಿಗೆ ಹೊಸ ಸೇರ್ಪಡೆಗಾಗಿ ನಮೂನೆ 6 ಅನ್ನು ಸಲ್ಲಿಸಿರುವುದನ್ನು ಪರಿಶೀಲಿಸಿದ ಮುಖ್ಯ ಆಯುಕ್ತರು ದೃಢೀಕರಿಸಿ ನಮೂನೆ ಸಲ್ಲಿಸಿರುವವರಿಂದ ಸಹಿ ಪಡೆಯಲಾಯಿತು.
ಈ ವೇಳೆ ಪಶ್ಚಿಮ ವಲಯ ಜಂಟಿ ಆಯುಕ್ತರಾದ ಯೋಗೇಶ್, ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತ ನಾಗರಾಜ, ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಮೇಶ್ ಹಾಗೂ ಮತ್ತಿತರ ಅಕಾರಿಗಳು ಉಪಸ್ಥಿತರಿದ್ದರು.