ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾಲ್ನಡಿಗೆ ಜಾಥಾ

Social Share

ಬೆಂಗಳೂರು,ನ.9- ಮತದಾರರ ಪಟ್ಟಿ ಪರಿಷ್ಕರಣೆ-2023 ಭಾಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ನೇತೃತ್ವದಲ್ಲಿ ಕಾಲ್ನಡಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾಲ್ನಡಿಗೆ ಜಾಥಾಥಾ ನಡೆಸಲಾಯಿತು.

ನಗರದಲ್ಲಿಂದು ಹಡ್ಸನ್ ವೃತ್ತದ ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ ಕಾಲ್ನಡಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾಲ್ನಡಿಗೆ ಜಾಥಾಥವು ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ, ಸೆಂಟ್ರಲ್ ಗ್ರಂಥಾಲಯ, ಹೈಕೋರ್ಟ್, ವಿಧಾನಸೌಧ ರಸ್ತೆ, ಪ್ರೆಸ್ ಕ್ಲಬï, ಕಬ್ಬನ್ ಉದ್ಯಾನದ ಮೂಲಕ ಬಾಲಭವನದವರೆಗೆ ನಡೆಯಿತು.

ಮತದಾರರ ಪಟ್ಟಿ ಪರಿಷ್ಕರಣೆಕಾಲ್ನಡಿಗೆ ಜಾಥಾಥದಲ್ಲಿ ಬಿಬಿಎಂಪಿ ಕಚೇರಿ ಸಿಬ್ಬಂದಿ, ಮುಖ್ಯ ಚುನಾವಣಾಧಿಕಾರಿ ಸಿಬ್ಬಂದಿ, ಚುನಾವಣಾ ಸಾಕ್ಷರತಾ ಸಂಘ, ಎನ್.ಸಿ.ಸಿ, ಎನ್.ಎಸ್.ಎಸ್ ವಿದ್ಯಾರ್ಥಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಕುತೂಹಲ ಕೆರಳಿಸಿದೆ ಬಾಲಚಂದ್ರ ಜಾರಕಿಹೊಳಿ- ಹೆಚ್ಡಿಕೆ ಮಾತುಕತೆ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮತದಾರರ ಪಟ್ಟಿ ಪರಿಷ್ಕರಣೆ ಕಾಲ್ನಡಿಗೆ ಜಾಥಾಥಾಕ್ಕೆ ಚಾಲನೆ ನೀಡಿದರು. ಈ ವೇಳೆ ವಿಶೇಷ ಆಯುಕ್ತರಾದ ಎಸ್.ರಂಗಪ್ಪ, ಡಾ. ತ್ರಿಲೋಕ್ ಚಂದ್ರ, ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್, ಉಪ ಆಯುಕ್ತ ಮುರಳೀಧರ್, ಸಹಾಯಕ ಆಯುಕ್ತ ಉಮೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ 60 ಲಕ್ಷ ನಕಲಿ ಮತದಾರರು ಪಟ್ಟಿಯಿಂದ ಹೊರಕ್ಕೆ

Articles You Might Like

Share This Article