ಮತದಾರರ ವೈಯಕ್ತಿಕ ಮಾಹಿತಿ ಕಳುವಿನ ಬಗ್ಗೆ ದಾಖಲೆ ಸಿಕ್ಕಿಲ್ಲ: ತುಷಾರ್ ಗಿರಿನಾಥ್

Social Share

ಬೆಂಗಳೂರು,ನ.19- ಚಿಲುಮೆ ಸಂಸ್ಥೆ ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿರುವ ಬಗ್ಗೆ ಯಾವುದೇ ದಾಖಲೆಯಿಲ್ಲ. ಆದರೂ ಅನುಮಾನದ ಮೇರೆಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಲುಮೆ ಸಂಸ್ಥೆ ಮತದಾರರ ದತ್ತಾಂಶ ಕಳುವು ಮಾಡುತ್ತಿದೆ ಎಂದು ಕಳೆದ ಸೆ.29ರಂದು ದೂರು ಬಂದಿತ್ತು. ಹೀಗಾಗಿ ಅಂದಿನ ಜಿಲ್ಲಾಧಿಕಾರಿಗಳು ಸಂಸ್ಥೆಗೆ ಷೋಕಾಸ್ ನೋಟೀಸ್ ಕೂಡ ನೀಡಿದ್ದರು ಎಂದು ಅವರು ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಹೊರಜಗತ್ತಿಗೆ ಕಾಣಿಸಿಕೊಂಡ ಕಿಮ್ ಪುತ್ರಿ

ಸಂಸ್ಥೆಯವರು ತಮ್ಮ ಸಿಬ್ಬಂದಿಗಳಿಗೆ ಬಿಎಲ್‍ಒಗಳೆಂದು ಗುರುತಿನ ಚೀಟಿ ನೀಡಿರುವ ಆರೋಪವಿದೆ. ಆದರೆ, ದತ್ತಾಂಶ ಕಳುವು ಮಾಡಿರುವ ದಾಖಲೆ ಇಲ್ಲ. ಮಾಧ್ಯಮಗಳ ವರದಿ ಆಧಾರದ ಮೇಲೆ ಚಿಲುಮೆ ಸಂಸ್ಥೆ ವಿರುದ್ಧ ದೂರು ನೀಡಲಾಗಿದೆ ಎಂದರು.

ಚಿಲುಮೆ ಸಂಸ್ಥೆಯವರಿಗೆ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವ ಬಗ್ಗೆ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ನೀಡಲಾಗಿತ್ತು. ಈ ಕುರಿತಂತೆ ಚುನಾವಣಾ ಆಯೋಗಕ್ಕೆ ನಾನು ಮಾಹಿತಿ ನೀಡಿದ್ದೇನೆ ಎಂದು ಅವರು ಹೇಳಿದರು.

“ಮೋದಿಯಂತಹ ನಾಯಕನಿಲ್ಲದಿದ್ದರೆ ನಗರಕ್ಕೊಬ್ಬ ಅಫ್ತಾಬ್ ಹುಟ್ಟುತ್ತಾನೆ”

2018ರಿಂದಲೂ ಮತದಾರ ಜಾಗೃತಿ, ಬೇರೆ ಬೇರೆ ಸರ್ವೆಗೂ ಕಾರ್ಯವನ್ನು ಚಿಲುಮೆ ಸಂಸ್ಥೆಗೆ ವಹಿಸಿದ್ದೇವೆ. ಇದಕ್ಕಾಗಿ ಬಿಬಿಎಂಪಿ ಹಣ ಕೂಡ ಪಾವತಿಸಿದೆ. ಇದುವರೆಗೂ ಮತದಾರರ ಮಾಹಿತಿ ಕಳುವು ಮಾಡಿರುವ ದೂರು ಬಂದಿಲ್ಲ.

ಕೇವಲ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸವಲ್ಲದೆ, ಗೋವು, ಶಿಕ್ಷಣ ಮತ್ತಿತರ ವಿಚಾರ ಕುರಿತಂತೆಯೂ ಚಿಲುಮೆ ಸಂಸ್ಥೆ ಕೆಲಸ ಮಾಡಿದೆ. ಈ ಹಿಂದೆ ನಾವು ಬೇರೆ ಬೇರೆ ಕೆಲಸಗಳಿಗೆ ಆ ಸಂಸ್ಥೆಗೆ ಒಂದೂವರೆ ಕೋಟಿ ರೂ.ಗಳಷ್ಟು ಹಣ ಪಾವತಿಸಿದ್ದೇವೆ ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿ ಗೋಲ್‍ಮಾಲ್ : ಬಿಜೆಪಿ ಹೈ ಕಮಾಂಡ್ ಆಕ್ರೋಶ

ಚಿಲುಮೆ ಸಂಸ್ಥೆಯಲ್ಲಿ ಮಾಜಿ ಶಾಸಕರೊಬ್ಬರು ಹಣ ಹೂಡಿಕೆ ಮಾಡಿರುವ ವಿಚಾರದ ಬಗ್ಗೆಯೂ ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ತನಿಖೆ ನಡೆಸುತ್ತಿದ್ದು, ನಾಳೆ ವೇಳೆಗೆ ಸತ್ಯಾಂಶ ಹೊರಬೀಳುವ ಸಾಧ್ಯತೆ ಇದೆ. ವರದಿ ಬಂದ ನಂತರ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಗಿರಿನಾಥ್ ವಿವರಿಸಿದರು.

voter, record, theft, Chilume, BBMP, Tushar Girinath,

Articles You Might Like

Share This Article