ವೋಟರ್ ಐಡಿ ಹಗರಣ: ರಾಜಕಾರಣಿಗಳ ಸಂಪರ್ಕದ ಬಗ್ಗೆ ಬಾಯಿ ಬಿಡದ `ಚಿಲುಮೆ’ ರವಿ

Social Share

ಬೆಂಗಳೂರು,ನ.24- ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಪೊಲೀಸರು ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ರಾಜಕೀಯ ಒತ್ತಡದ ಕಾರಣಕ್ಕಾಗಿ ತಾವು ದತ್ತಾಂಶಗಳನ್ನು ಸಂಗ್ರಹಿಸಿದ್ದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಒತ್ತಡ ಹೇರಿದ ರಾಜಕಾರಣಿಗಳು ಯಾರು ಎಂಬ ವಿಷಯವನ್ನು ರವಿಕುಮಾರ್ ಬಾಯಿ ಬಿಡದೆ ಸತಾಯಿಸುತ್ತಿದ್ದಾರೆ. ತೀವ್ರ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ರವಿಕುಮಾರ್ ಹೇಳಿಕೆಗಳು ಮಹತ್ವದಾಗಿದೆ. ಹೀಗಾಗಿ ಸಮಗ್ರ ಮಾಹಿತಿ ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಆದರೆ ಬುದ್ದಿವಂತಿಕೆಯಿಂದ ವರ್ತಿಸುತ್ತಿರುವ ರವಿಕುಮಾರ್ ವಿಚಾರಣೆ ಸಂದರ್ಭದಲ್ಲಿ ಅಸ್ಪಷ್ಟ ಮಾಹಿತಿ ನೀಡುವುದು, ಕೆಲವು ವೇಳೆ ಮಾಹಿತಿ ಮುಚ್ಚಿಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಪೊಲೀಸರು ಈವರೆಗಿನ ತನಿಖೆಯಲ್ಲಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ವಾರ್ಡ್ ಪುನರ್ ವಿಂಗಡಣೆ ತಕರಾರು: ಬಿಬಿಎಂಪಿಗೆ ನೋಟೀಸ್..

ಒಟ್ಟು 5 ಜನರನ್ನು ಬಂಧಿಸಿದ್ದಾರೆ. ನಿನ್ನೆಯ ದಾಳಿಯೂ ಸೇರಿದಂತೆ ಈವರೆಗೂ ಒಟ್ಟು 6 ಮೊಬೈಲ್, 2 ಕಂಪ್ಯೂಟರ್ ಮತ್ತು ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳ ವಿಶ್ಲೇಷಣೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೆಲವು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಕೇಳುವ ಪ್ರಶ್ನೆಗಳಿಗೆ ರವಿಕುಮಾರ್ ಉತ್ತರಿಸುತ್ತಿಲ್ಲ ಎಂದು ತಿಳಿದುಬಂದಿದೆ. ತಮ್ಮ ಸಂಸ್ಥೆಯಿಂದ ಮತದಾರರ ಮಾಹಿತಿಯ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಆದರೆ ಅವುಗಳನ್ನು ಯಾರಿಗೂ ನೀಡಿಲ್ಲ. ಮಾರಾಟ ಮಾಡಿಕೊಂಡಿಲ್ಲ ಎಂದು ಪದೇ ಪದೇ ಪುನರುಚ್ಚರಿಸುತ್ತಿದ್ದಾರೆ.

ದತ್ತಾಂಶ ಸಂಗ್ರಹವೇ ತಪ್ಪು ಎಂಬ ಪ್ರಶ್ನೆ ಎದುರಾದಾಗ ಈ ಕೆಲಸ ಮಾಡಲು ತಮಗೆ ರಾಜಕೀಯ ಒತ್ತಡವಿತ್ತು ಎಂದು ಉತ್ತರಿಸಿದ್ದಾರೆ. ಆದರೆ ಒತ್ತಡ ಹೇರಿದವರು ಯಾರು ಎಂಬುದನ್ನು ಬಹಿರಂಗಪಡಿಸುತ್ತಿಲ್ಲ.

ನೇಮಕ ಮಾಡದಿದ್ದರೆ ಆಕಾಶ ಕಳಚಿಬೀಳುತ್ತಿತ್ತೇ: ಸುಪ್ರೀಂ ಗರಂ

ಪ್ರಕರಣದಲ್ಲಿ ಮತ್ತೊಂದು ಸಾಕ್ಷ್ಯ ಎಂದು ಪರಿಗಣಿಸಲ್ಪಡುವ ರವಿಕುಮಾರ್ ಅವರ ಮೊಬೈಲ್ ಇದುವರೆಗೂ ಪತ್ತೆಯಾಗಿಲ್ಲ. ಅದನ್ನು ಉದ್ದೇಶಪೂರ್ವಕವಾಗಿ ಬೇರೆಡೆ ಎಸೆಯಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಚುನಾವಣಾ ಆಯೋಗ ಪ್ರಕರಣದತ್ತ ಗಮನಹರಿಸಿರುವುದರಿಂದ ಪೊಲೀಸರು ನಿಷ್ಪಕ್ಷಪಾತ ತನಿಖೆಗೆ ಮುಂದಾಗಿದ್ದಾರೆ.

ಡಿಜಿಟಲ್ ಮಾಧ್ಯಮಕ್ಕೆ ಬೀಳಲಿದೆ ಕಡಿವಾಣ

ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ದೂರುಗಳನ್ನು ನೀಡಿವೆ. ಹೀಗಾಗಿ ಒಟ್ಟಾರೆ ಹೊಣೆಗಾರಿಕೆ ರವಿಕುಮಾರ್ ಅವರ ಮೇಲಿದ್ದು, ಸ್ಪಷ್ಟ ಉತ್ತರ ನೀಡದೆ ಇರುವುದು ಪೊಲೀಸರಿಗೆ ತಲೆನೋವಾಗಿದೆ.

Voters, Data, Scam, Chilume, Ravi, CCB Police,

Articles You Might Like

Share This Article