ವಿಧಾನಸಭೆ ಚುನಾವಣೆಗೆ ಮತದಾರರ ಅಂತಿಮ ಪಟ್ಟಿ ಪ್ರಕಟ

Social Share

ಬೆಂಗಳೂರು,ಜ.5- ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಅಂತಿಮ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಈ ಬಾರಿ ಪುರುಷರು, ಮಹಿಳೆಯರು ಹಾಗೂ ಇತರ ಸೇರಿದಂತೆ ಒಟ್ಟು 5,05,48,553 ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.


ಇದರಲ್ಲಿ ಪುರುಷರು 2,54,49,775, ಮಹಿಳೆಯರು 2,50,94,326, ಇತರರು 4,502 ಸೇರಿದಂತೆ ಒಟ್ಟು 5,05,48,553 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ ಎಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಮನೋಜ್‍ಕುಮಾರ್ ಮೀನಾ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪರಿಷ್ಕøತ ಕರಡು ಪಟ್ಟಿಯಾಗಿದ್ದು, ಉಳಿದಿರುವ ಮೂರು ವಿಧಾನಸಭಾ ಕ್ಷೇತ್ರಗಳ ಪಟ್ಟಿ ಜ.15ರ ನಂತರ ಪ್ರಾದೇಶಿಕ ಆಯುಕ್ತರ ವರದಿ ಬಂದ ನಂತರ ಪ್ರಕಟಿಸುವುದಾಗಿ ಹೇಳಿದರು.

ಮಹದೇವಪುರ, ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಿ ಒಂದು ವೇಳೆ ದುರುದ್ದೇಶ ಪೂರ್ವಕವಾಗಿ ಹೆಸರುಗಳನ್ನು ಕೈ ಬಿಟ್ಟಿದ್ದರೆ ಸೇರ್ಪಡೆ ಮಾಡಬೇಕೆಂದು ಸೂಚಿಸಲಾಗಿದೆ. ವರದಿ ಬಂದ ನಂತರ ಈ ಮೂರು ಕ್ಷೇತ್ರಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ವಿವರಿಸಿದರು.

ಕಾದ ಕಬ್ಬಿಣದ ದ್ರವ ಬಿದ್ದು 8 ಮಂದಿ ಕಾರ್ಮಿಕರಿಗೆ ಗಾಯ

ಇಂದು ಜಿಲ್ಲಾಧಿಕಾರಿಗಳು, ಸಹಾಯಕ ಚುನಾವಣಾಕಾರಿಗಳು, ಚುನಾವಣಾ ನೋಂದಾವಣೆ ಅಧಿಕಾರಿಗಳ ಜತೆ ಸಭೆ ನಡೆಸಿ ಮತದಾರರ ಪಟ್ಟಿ ಪ್ರಕಟಿಸಲು ಸೂಚನೆ ನೀಡಲಾಗಿದೆ. ಒಂದು ವೇಳೆ ಯಾವುದೇ ಒಬ್ಬ ವ್ಯಕ್ತಿಯ ಹೆಸರು ಬಿಟ್ಟು ಹೋಗಿದ್ದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸೇರ್ಪಡೆ ಮಾಡಿಕೊಳ್ಳಬಹುದು.

ನಿಜವಾದ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳಬಾರದು ಎಂದು ಮನೋಜ್‍ಕುಮಾರ್ ಮೀನಾ ಮನವಿ ಮಾಡಿದ್ದಾರೆ.

221 ಕ್ಷೇತ್ರಗಳ ಪೈಕಿ ಹೆಚ್ಚುವರಿಯಾಗಿ 5,80,531 ಪುರುಷರ ಮತಗಳನ್ನು ಸೇರ್ಪಡೆ ಮಾಡಲಾಯಿತು. ಇದರಲ್ಲಿ 3,07,174 ಹೆಸರುಗಳನ್ನು ತೆಗೆದು(ಡಿಲೀಟ್) ಹಾಕಲಾಗಿದೆ. ಮಹಿಳಾ ಮತದಾರರಲ್ಲಿ 6,50,667 ಹೆಸರುಗಳು ಸೇರ್ಪಡೆಯಾಗಿದ್ದವು, 3,11,748 ಮತಗಳನ್ನು ತೆಗೆದು ಹಾಕಲಾಗಿದೆ ಎಂದರು.

342 ತೃತೀಯ ಲಿಂಗಿ ಮತಗಳು ಸೇರ್ಪಡೆಯಾಗಿದ್ದವು. 43 ಹೆಸರುಗಳನ್ನು ಕೈ ಬಿಡಲಾಗಿದೆ. ಒಟ್ಟು ಹೊಸದಾಗಿ 26,38,990 ಮತಗಳು ಸೇರ್ಪಡೆಯಾಗಿವೆ ಎಂದು ಅವರು ವಿವರಿಸಿದರು. 2,62,854 ಮತದಾರರು ಮೃತಪಟ್ಟಿದ್ದರೆ, 3,27,488 ಮತದಾರರನ್ನು ವರ್ಗಾವಣೆ ಮಾಡಲಾಗಿದೆ. 24,137 ಪುನಾರವರ್ತಿತರಾಗಿದ್ದರು.

2023ರ ಚುನಾವಣೆಯಲ್ಲಿ 3,88,064 ಪುರುಷರು, 3,13,040 ಮಹಿಳೆಯರು, 139 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 7,01,243 ಯುವ ಮತದಾರರು ಸೇರ್ಪಡೆಯಾಗಿದ್ದಾರೆ.

ಮರಕ್ಕೆ ಅಪ್ಪಳಿಸಿದ ಪಿಕಪ್ ವಾಹನ, ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ 6 ಭಕ್ತರ ಸಾವು

2011ರಲ್ಲಿ ಲಿಂಗಾನುಪಾತ 973 ಇದ್ದರೆ, ಈ ಬಾರಿ 988ಕ್ಕೆ ಏರಿಕೆಯಾಗಿದೆ. ಲೈಂಗಿಕ ಕಾರ್ಯಕರ್ತೆಯರು 1,00,834, ಬುಡಕಟ್ಟು ವಾಸಿಗಳು 30,517, ವಿಶೇಷಚೇತನರು 5,09,553 ಹಾಗೂ ತೃತೀಯ ಲಿಂಗಿಗಳು 41,317 ಸೇರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ರಾಜೇಂದ್ರ ಚೋಳನ್ ಹಾಗೂ ವೆಂಕಟೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

voters list published, 5 crore, voters, Karnataka,

Articles You Might Like

Share This Article