“ನಾಳೆ, ನಾಡಿದ್ದು ಏನಾಗುತ್ತೋ ಕಾದು ನೋಡಿ” : ಕಾಶ್ಮೀರ ಗೌರ್ನರ್ ಮಾರ್ಮಿಕ ಹೇಳಿಕೆ..!

ಶ್ರೀನಗರ, ಆ.4- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರೀ ಸಂಖ್ಯೆಯ ಯೋಧರ ಜಮಾವಣೆಯಿಂದ ಸಮರ ಸದೃಶ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲೇ ಹಲವು ಅನುಮಾನ ಮತ್ತು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜನೆ ಮಾಡಿರುವುದು ಈ ವಿಷಯದ ಬಗ್ಗೆ ದೇಶದ ಗಮನ ಕೇಂದ್ರೀಕೃತವಾಗುವಂತೆ ಮಾಡಿದೆ. ಈ ನಡುವೆ ಜಮ್ಮು-ಕಾಶ್ಮೀರ ರಾಜ್ಯಪಾಲರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕಾಶ್ಮೀರಕ್ಕೆ ಸಂಬಂಧಿಸಿದ ವದಂತಿಗಳಿಗೆ ಮಾತನಾಡಿರುವ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಊಹಾಪೋಹಗಳಿಗೆ ಕಿವಿಗೊಡುವುದರ ಬದಲು ಸೋಮವಾರ ಅಥವಾ ಮಂಗಳವಾರದವರೆಗೂ ಕಾದು ನೋಡಿ.

ಜಮ್ಮು-ಕಾಶ್ಮೀರದಲ್ಲಿ ಏನೇ ನಡೆದರೂ ಸಹ ರಹಸ್ಯವಾಗಿ ನಡೆಯುವುದಿಲ್ಲ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಬಗ್ಗೆ ಚರ್ಚೆ ನಡೆಯಲಿದೆ, ಆದ್ದರಿಂದ ವದಂತಿಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಸಂಸತ್ ಕಲಾಪ ಇನ್ನೂ ಮುಗಿದಿಲ್ಲ ಆದ್ದರಿಂದ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಇನ್ನು 2 ದಿನ ಕಾದು ನೋಡಿ ಎಂದು ಹೇಳಿದ್ದಾರೆ. ಕಾಶ್ಮೀರ ರಾಜ್ಯಪಾಲರ ಈ ಮಾರ್ಮಿಕ ನುಡಿ ವಿವಿಧ ಆಯಾಮಗಳಲ್ಲಿ ಯೋಜಿಸುವಂತೆ ಮಾಡಿದ್ದು ನಾಳೆ ಅಥವಾ ನಾಡಿದ್ದು ಕಣಿವೆ ರಾಜ್ಯದಲ್ಲಿ ನಡೆಯುವ ಬೆಳವಣಿಗೆ ಕುತೂಹಲ ಮೂಡಿಸಿದೆ.

Sri Raghav

Admin