ವಾಷಿಂಗ್ಟನ್, ಜ.6-ರಷ್ಯಾ – ಉಕ್ರೇನ್ ಯುದ್ಧ ಇದೀಗ ನಿರ್ಣಾಯಕ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ರಷ್ಯಾದ ಆಕ್ರಮಣವನ್ನು ಎದುರಿಸಲು ಉಕ್ರೇನಿಯನ್ನರಿಗೆ ಏನ್ನೆಲ್ಲಾ ಸಹಾಯ ಮಾಡಬೇಕೊ ಅದನ್ನು ನಾವು ಮಾಡಿದ್ದೇವೆ ಎಂದು ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಜಪಾನ್ ಒಳಗೊಂಡಂತೆ ನಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುವ ಇತರ ದೇಶಗಳ ದೊಡ್ಡ ತಂಡವನ್ನು ನಾವು ಹೊಂದಿದ್ದೇವೆ. ಆದರೆ ನಾವು ಏನು ಮಾಡಲಿದ್ದೇವೆ ಎಂಬುದರ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.
ನಾವು ಉಕ್ರೇನ್ಗೆ ಬೆಂಬಲವನ್ನು ಹೆಚ್ಚಿಸಲಿದ್ದೇವೆ, ನಾವು ರಷ್ಯಾದ ವೈಮಾನಿಕ ದಾಳಿಯ ವಿರುದ್ಧ ಉಕ್ರೇನ್ ಅನ್ನು ರಕ್ಷಿಸಲು ಸಹಾಯ ಮಾಡಲಿದ್ದೇವೆ. ಜರ್ಮನಿಯು ವಾಯು ರಕ್ಷಣಾ ವ್ಯವಸ್ಥೆಯನ್ನು ಒದಗಿಸಲಿದೆ ಎಂದು ತಿಳಿಸಿದೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣಕಾರಿ ಯುದ್ಧದ ಕುರಿತು ಜರ್ಮನಿ ಅಧ್ಯಕ್ವರ ಜೊತೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು ಮತ್ತು ಉಕ್ರೇನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.
War, Ukraine, critical, point right, President, Joe Biden,