ಐಪಿಎಲ್ ಬಿಡ್ಡಿಂಗ್ : ನಮಗೆ 2 ಕೋಟಿ ಎಂದ ವಾರ್ನರ್, ಗೇಲ್,ಅಶ್ವಿನ್

Social Share

ಬೆಂಗಳೂರು, ಜ.22- ಮುಂದಿನ ತಿಂಗಳು ಬೆಂಗಳೂರಿನಲ್ಲೇ ಐಪಿಎಲ್ನ ಬಿಕರಿ ನಡೆಸಲು ದಿನಾಂಕ ಫಿಕ್ಸ್ ಆಗುತ್ತಿದ್ದಂತೆ ಆಟಗಾರರು ತಮ್ಮ ಮೂಲ ಬೆಲೆಯನ್ನು ಘೋಷಿಸುವಂತೆ ಐಪಿಎಲ್ ಮಂಡಳಿ ಕಾಲಾವಕಾಶವನ್ನು ನೀಡಿತ್ತು.
ಆದರಂತೆ ಇಂದು ಆಟಗಾರರು ಇಂದು ತಮ್ಮ ಮುಖಬೆಲೆಯನ್ನು ಘೋಷಿಸಿಕೊಳ್ಳಲು ಅಂತಿಮ ದಿನವನ್ನು ನಿಗ ಮಾಡಿದ್ದು ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಆಟಗಾರರು ಮೊತ್ತವನ್ನು ಘೋಷಿಸುವ ಮೂಲಕ ಭಾರೀ ಮೊತ್ತಕ್ಕೆ ಬಿಕರಿ ಆಗುವ ಸೂಚನೆಗಳನ್ನು ನೀಡಿದ್ದಾರೆ.
ಭಾರತದ 17 ಆಟಗಾರರು ಹಾಗೂ 32 ವಿದೇಶಿ ಆಟಗಾರರು ತಮ್ಮ ಮೂಲಬೆಲೆಯನ್ನು ಪ್ರಕಟಿಸಿದ್ದಾರೆ. ಭಾರತದ ಖ್ಯಾತ ಆಟಗಾರರಾದ ಶಿಖರ್ಧವನ್, ರವಿಚಂದ್ರನ್ ಅಶ್ವಿನ್, ಶ್ರೇಯಾಸ್ ಅಯ್ಯರ್, ಇಶಾನ್ ಕಿಶನ್, ಸುರೇಶ್ ರೈನಾ, ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ , ಆ್ಯಡಂ ಜಂಪಾ, ಸ್ಟೀವ್ ಸ್ಮಿತ್, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಇಂಗ್ಲೆಂಡ್ನ ಮಾರ್ಕ್ ವುಡ್, ಟ್ರೆಂಟ್ ಬೌಲ್ಟ್, ದಕ್ಷಿಣ ಆಫ್ರಿಕಾದ ಪ್ಲಾಫ್ ಡು ಪ್ಲೆಸಿಸ್, ಕ್ವಿಂಟನ್ ಡಿ ಕಾಕ್, ಕಗಸೊ ರಬಾಡ, ವೆಸ್ಟ್ಇಂಡೀಸ್ನ ದೈತ್ಯ ಆಟಗಾರ ಕ್ರಿಸ್ ಗೇಲ್, ಡ್ವೇನ್ ಬ್ರಾವೋ ಅವರು ತಮ್ಮ ಮೂಲ ಬೆಲೆಯನ್ನು ಘೋಷಿಸಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ ಬಿಡ್ಡಿಂಗ್ನಲ್ಲಿ 270 ಅಂತರರಾಷ್ಟ್ರೀಯ ಆಟಗಾರರು, 312 ಹೊಸ ಮುಖಗಳು ಸೇರಿದಂತೆ 1214 ಮಂದಿ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
# 2 ಕೋಟಿ ಮುಖಬೆಲೆ:
ಚುಟುಕು ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಡೇವಿಡ್ ವಾರ್ನರ್, ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಮಿಚಲ್ ಮಾರ್ಷ್, ಮಿಚಲ್ ಸ್ಟ್ರಾಕ್, ಇಂಗ್ಲೆಂಡ್ನ ಸ್ಯಾಮ್ ಕರನ್, ಬೆನ್ ಸ್ಟೋಕ್, ಜೋಫ್ರಾ ಅರ್ಚರ್, ಕ್ರಿಸ್ ವೋಕ್ಸ್ ಹಾಗೂ ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್, ಭಾರತದ ರವಿಚಂದ್ರನ್ ಅಶ್ವಿನ್, ಶಿಖರ್ ಧವನ್ಗೆ 2 ಕೋಟಿ ಮೂಲ ಬೆಲೆಯನ್ನು ಘೋಷಣೆ ಮಾಡಲಾಗಿದೆ.
# ವಾಷಿಂಗ್ಟನ್ ಸುಂದರ್ಗೆ 1.5 ಕೋಟಿ:
ಆರ್ಸಿಬಿಯ ಮಾಜಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರಿಗೆ 1.5 ಕೋಟಿ ರೂ. ಮುಖಬೆಲೆಯನ್ನು ನಿಗಗೊಳಿಸಲಾಗಿದೆ. ಭಾರತದ ಅಮಿತ್ಮಿಶ್ರಾ, ಇಶಾಂತ್ ಶರ್ಮಾ, ಆಸ್ಟ್ರೇಲಿಯಾದ ಟ್ವೆಂಟಿ-20 ನಾಯಕ ಆರೋನ್ ಫಿಂಚ್, ಕ್ರಿಸ್ ಲಿನ್, ನಾಥನ್ ಲಾಯನ್, ಇಂಗ್ಲೆಂಡ್ನ ಅಲೆಕ್ಸ್ ಹಾಲ್ಸ್, ಆಡಂ ಮಿಲ್ನೆ, ಟಿಮ್ ಸೋಥಿ, ವೆಸ್ಟ್ಇಂಡೀಸ್ನ ಸಿಮ್ರಾನ್ ಹಿಟ್ಮೇರ್ ಇದ್ದಾರೆ.
# ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ 1 ಕೋಟಿ:
ಒಂದು ಕೋಟಿ ಮುಖಬೆಲೆಯ ಸಾಲಿನಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ , ಭಾರತದ ಪಿಯೂಸ್ ಚಾವ್ಲ, ಕೇದಾರ್ ಜಾಧವ್, ಟಿ. ನಟರಾಜನ್, ಮನೀಷ್ ಪಾಂಡೆ, ಆಫ್ಘಾನಿಸ್ತಾನದ ಮೊಹಮ್ಮದ್ ನಬಿ, ಆಸ್ಟ್ರೇಲಿಯಾದ ಮೊಸಿಸ್ ಹೆನ್ಕ್ರೂಸ್, ಮಾರ್ನೂಸ್ ಲಬುಸ್ಟೆಂಗ್ನೆ, ರಿಲೇ ಮೆಡ್ರತ್, ಇಂಗ್ಲೆಂಡ್ನ ಲಿವಿಂಗ್ಸ್ಟನ್, ಟೈಮಲ್ ಮಿಲ್ಸ್, ಡೇವೊನ್ ಕಾನ್ವೆ, ಕೊಲಿನ್ ಡಿ ಗ್ರಾಂಡ್ಹೋಮೆ, ದಕ್ಷಿಣ ಆಫ್ರಿಕಾದ ಆದಿಲ್ ಮಾರ್ಕಂ, ತರ್ಬೆಜ್ ಶಂಸಿ, ರೆಸ್ಸೆ ವಾನ್ ಡೇರ್ ಡುಸೆನ್ ಮುಂತಾದರಿದ್ದಾರೆ.

Articles You Might Like

Share This Article