3.8 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕದ ಗುರಿ

Social Share

ನವದೆಹಲಿ,ಫೆ.1- ಪ್ರಸಕ್ತ ವರ್ಷ 3.8 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು 60ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.ಹರ್‍ಗರ್ ನಳ್ ಸೇಜಲ್ ಯೋಜನೆಯಡಿ 8.7 ಕೋಟಿ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಇದರಿಂದ 5.5 ಕೋಟಿ ಮನೆಗಳಿಗೆ ಕಳೆದ ಎರಡು ವರ್ಷಗಳಿಂದ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.
ದೇಶದ ಎಲ್ಲರಿಗೂ ಮನೆ ನಿರ್ಮಿಸಿಕೊಡುವ ಸಂಕಲ್ಪವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಹೊಂದಿದ್ದು, 2022-23ನೇ ಸಾಲಿನಲ್ಲಿ 80 ಲಕ್ಷ ಮನೆ ನಿರ್ಮಾಣವನ್ನು ಪೂರ್ಣಗೊಳಿಸಲಾಗುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪಿಎಂ ಅವಾಜ್ ಯೋಜನೆಗಾಗಿ 48 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ.
ನಿವೇಶನ ಮಂಜುರಾತಿ ಮತ್ತು ನಿರ್ಮಾಣ ಕಾರ್ಯಕ್ಕೆ ಅಗತ್ಯವಾದ ಅನುಮತಿ ಪಡೆಯುವ ವಿಳಂಬಗಳನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರಗಳೊಂದಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು.
ಬಡವರು, ಮಧ್ಯಮವರ್ಗ ಹಾಗೂ ದುರ್ಬಲ ವರ್ಗಗಳಿಗೆ ನಗರ ಪ್ರದೇಶದಲ್ಲು ಮನೆ ನಿರ್ಮಿಸಿಕೊಡಲಾಗುವುದು. ಜತೆಗೆ ಮಧ್ಯವರ್ತನೆಯ ವೆಚ್ಚಗಳನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿದರು.

Articles You Might Like

Share This Article