ಒಟ್ಟು 231 ಸಾಕ್ಷಿದಾರರನ್ನೊಳಗೊಂಡ ವಾಟರ್ ಟೈಟ್ ಚಾರ್ಜ್ ಶೀಟ್ : ದಯಾನಂದ

ಬೆಂಗಳೂರು, ಸೆ.4– ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಪೂರ್ಣ ಮುಗಿದಿದ್ದು, ಇಂದು ನ್ಯಾಯಾಲಯಕ್ಕೆ ವಾಟರ್ ಟೈಟ್ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ. ಸಾಕಷ್ಟು ತಾಂತ್ರಿಕ ಸಾಕ್ಷ್ಯಗಳು ದೊರೆತಿದ್ದು, ಅದನ್ನು ತನಿಖೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ವೈದ್ಯರು, ಎಂಜಿನಿಯರ್, ಆರ್ಟಿಓಗಳು, ತಹಸೀಲ್ದಾರರು ಹಾಗೂ 56 ಪೊಲೀಸರನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ. ಒಟ್ಟು 231 ಒಟ್ಟು ಸಾಕ್ಷಿದಾರರನ್ನು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು. … Continue reading ಒಟ್ಟು 231 ಸಾಕ್ಷಿದಾರರನ್ನೊಳಗೊಂಡ ವಾಟರ್ ಟೈಟ್ ಚಾರ್ಜ್ ಶೀಟ್ : ದಯಾನಂದ