Saturday, September 23, 2023
Homeಇದೀಗ ಬಂದ ಸುದ್ದಿನೀರಿನ ಟ್ರ್ಯಾಂಕರ್ ಹರಿದು 4 ವರ್ಷದ ಬಾಲಕ ಸಾವು

ನೀರಿನ ಟ್ರ್ಯಾಂಕರ್ ಹರಿದು 4 ವರ್ಷದ ಬಾಲಕ ಸಾವು

- Advertisement -

ಬೆಂಗಳೂರು, ಜೂ.7- ಟ್ರಾಕ್ಟರ್ ವಾಟರ್ ಟ್ಯಾಂಕರ್ ಹರಿದು 4 ವರ್ಷ ದ ಬಾಲಕ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಸಿ.ಕೆ.ಪಾಳ್ಯದಲ್ಲಿ ನಡೆದಿದೆ. ಭುವನ್ (4) ಮೃತ ಬಾಲಕನಾಗಿದ್ದಾನೆ. ತನ್ನ ಅಣ್ಣನ ಜೊತೆ ಐಸ್ ಕ್ರೀಂ ತರಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಇಂದು ಮಧ್ಯಾಹ್ನ ಟ್ರ್ಯಾಕ್ಟರ್ ನಲ್ಲಿ ನೀರು ಸಾಗಿಸುತ್ತಿದ್ದ ಚಾಲಕ ಮಗುವನ್ನು ನೋಡದೆಯೇ ಚಲಿಸಿದ್ದಾನೆ. ಇದರಿಂದಾಗಿ ಬಾಲಕನ ತಲೆಯ ಮೇಲೆ ಚಕ್ರ ಹರಿದು ತೀವ್ರವಾಗಿ ಭುವನ್ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮಗು ಮೃತಪಟ್ಟಿದೆ.

- Advertisement -

ಟ್ರ್ಯಾಕ್ಟರ್ ಚಾಲಕ ಮದ್ಯದ ನಶೆಯಲ್ಲಿದ್ದ ಎಂದು ಹೇಳಲಾಗುತ್ತಿದ್ದು, ಮಗುವನ್ನು ಕಳೆದುಕೊಂಡ ಕುಟುಂಬದ ರೋಧನೆ ಮುಗಿಲು ಮುಟ್ಟಿದೆ. ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

#watertranker, #accident, #boydied,

- Advertisement -
RELATED ARTICLES
- Advertisment -

Most Popular