ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೆವೆ : ಅಮೆರಿಕ

Social Share

ನವದೆಹಲಿ,ಜ.26- ಗುಜರಾತ್ ಗಲಭೆ ಘಟನೆ ಸಂಬಂಧ ಬಿಬಿಸಿ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದ ಪ್ರಸಾರವನ್ನು ಭಾರತ ಸರ್ಕಾರ ನಿಷೇಧಿಸಿದ ನಿರ್ಧಾರದ ಬಗ್ಗೆ ಅಮೆರಿಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ವಕ್ತಾರ ನೆಡ್ ಪ್ರೈಸ್ ಅವರು, ಅಮೆರಿಕವು ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ.

ಭಾರತವೂ ಒಳಗೊಂಡಂತೆ ವಿಶ್ವಾದ್ಯಂತ ಪತ್ರಿಕಾ ಸ್ವಾತಂತ್ರ್ಯ ಇರಬೇಕೆಂದು ಬಯಸುತ್ತೇವೆ. ಭಾರತ ಸೇರಿ ಇಡೀ ವಿಶ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪ್ರಜಾಪ್ರಭುತ್ವದ ತತ್ವಗಳ ಮಹತ್ವವನ್ನು ಪ್ರತಿಪಾದಿಸಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕವು ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ತೋರಿಸುವುದು ಅತ್ಯಂತ ಮಹತ್ವದ ವಿಷಯವಾಗಿದೆ. ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತ ನಿಷೇಧಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ವಿಚಾರವಾ ಅಥವಾ ವಾಕ್ ಸ್ವಾತಂತ್ರ್ಯದ ವಿಚಾರವಾ ಎಂದು ಪಾಕ್ ಪತ್ರಕರ್ತರು ಕೇಳಿದಾಗ, ಈ ವಿಚಾರ ಬಂದಾಗ ಪತ್ರಿಕಾ ಸ್ವಾತಂತ್ರ್ಯದ ಮಹತ್ವಕ್ಕೆ ನಮ್ಮ ಬೆಂಬಲ ಇರಲಿದೆ.

ನಾಗಾಲ್ಯಾಂಡ್‍ನಲ್ಲಿ ಎಎಪಿ ಏಕಾಂಗಿ ಸ್ಪರ್ಧೆ

ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಇತ್ಯಾದಿ ಪ್ರಜಾತಂತ್ರೀಯ ಮೌಲ್ಯಗಳ ಮಹತ್ವವನ್ನು ಎತ್ತಿಹಿಡಿಯುವ ಕೆಲಸ ಮುಂದುವರಿಸುತ್ತೇವೆ. ವಿಶ್ವಾದ್ಯಂತ ನಮ್ಮ ಸಂಬಂಧಗಳಲ್ಲಿ ಇದು ಪ್ರಮುಖ ವಿಚಾರವಾಗಿರುತ್ತದೆ. ಭಾರತದೊಂದಿಗೂ ಇದೇ ವಿಚಾರವನ್ನು ಮುಂದಿಟ್ಟಿದ್ದೇವೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಹೇಳಿದರು.

ನಾವು ಅಭಿವ್ಯಕ್ತಿ ಸ್ವಾತಂತ್ರ್ಯ, ಧರ್ಮ ಅಥವಾ ನಂಬಿಕೆಯಂತಹ ಪ್ರಜಾಪ್ರಭುತ್ವದ ತತ್ವಗಳು ಹಾಗೂ ಮಾನವ ಹಕ್ಕುಗಳ ಪ್ರಾಮುಖ್ಯತೆಯನ್ನು ವಿಶ್ವಕ್ಕೆ ಸಾರುವ ಕೆಲಸ ಮಾಡುತ್ತೇವೆ. ಇದರಿಂದ ನಮ್ಮ ಪ್ರಜಾಪ್ರಭುತ್ವಗಳು ಬಲವರ್ಧನೆ ಆಗುತ್ತವೆ. ಈ ಎಲ್ಲ ಅಂಶಗಳನ್ನು ಅಮೆರಿಕದ ವಿವಿಧ ಸ್ನೇಹ ರಾಷ್ಟ್ರಗಳ ವಿಷಯದಲ್ಲಿ ಪ್ರತಿಪಾದಿಸಿದ್ದೇವೆ. ಭಾರತದ ವಿಷಯದಲ್ಲೂ ಕೂಡ ಅದನ್ನೇ ಮಾಡಿದ್ದೇವೆ ಎಂದು ಹೇಳಿದ್ದಾರೆ.

ನೀವು ಉಲ್ಲೇಖಿಸುತ್ತಿರುವ ಸಾಕ್ಷ್ಯಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ. ಅಮೆರಿಕ ಮತ್ತು ಭಾರತ ಎರಡು ಅಭಿವೃದ್ಧಿಶೀಲ, ರೋಮಾಂಚಕ ಪ್ರಜಾಪ್ರಭುತ್ವಗಳನ್ನು ರೂಪಿಸುವ ಮËಲ್ಯಗಳು ಮಾತ್ರ ನನಗೆ ಗೊತ್ತಿವೆ. ಭಾರತದಲ್ಲಿ ತೆಗೆದುಕೊಳ್ಳಲಾದ ಕ್ರಮಗಳು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದಾಗ ನಾವು ಆ ಬಗ್ಗೆ ದನಿ ಎತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಾಡಿದ ತಿರಂಗಾ

ಇನ್ನು, ಬಿಬಿಸಿ ನಿರ್ಮಿಸಿರುವ ವಿವಾದಾತ್ಮಕ ಸಾಕ್ಷ್ಯ ಚಿತ್ರಕ್ಕೆ ಸಂಬಂಸಿದಂತೆ ಕಳೆದ ವಾರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಂತಿದ್ದರು. ಅದಲ್ಲದೇ ತಮ್ಮದೇ ದೇಶದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದಿಂದ ಅಂತರ ಕಾಯ್ದುಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಆ ರೀತಿ ಬಿಂಬಿಸಿರುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದರು. ಪಾಕಿಸ್ತಾನ ಮೂಲದ ಸಂಸದ ಇಮ್ರಾನ್ ಹುಸೇನ್ ಅವರು ಬ್ರಿಟಿಷ್ ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗೆ ರಿಷಿ ಸುನಕ್ ಈ ಪ್ರತಿಕ್ರಿಯೆಯನ್ನು ನೀಡಿದ್ದರು.

ಸರ್ಕಾರ ನಿಷೇಧಿಸಿದಾಗ್ಯೂ ಬಿಬಿಸಿ ಸಾಕ್ಷ್ಯಚಿತ್ರಗಳನ್ನು ದೇಶದ ವಿವಿಧೆಡೆ ಪ್ರಸಾರ ಮಾಡುವ ಪ್ರಯತ್ನ ನಡೆದಿದೆ. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಪಂಜಾಬ್ ಯೂನಿವರ್‍ಸಿಟಿ ಮೊದಲಾದೆಡೆ ಡಾಕ್ಯುಮೆಂಟರಿ ಪ್ರಸಾರಕ್ಕೆ ಪ್ರಯತ್ನ ನಡೆದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವು ವಿದ್ಯಾರ್ಥಿಗಳನ್ನು ಬಂಸಿದ ಘಟನೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ 2002ರಲ್ಲಿ ನಡೆದ ಗುಜರಾತ್ ಗಲಭೆಯ ವಿಚಾರವಾಗಿ ಬಿಬಿಸಿ ಇಂಡಿಯಾ: ದಿ ಮೋದಿ ಕ್ವಶ್ಚನ್ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಈ ಸಾಕ್ಷ್ಯಚಿತ್ರ ಭಾರತದಲ್ಲಿ ಬಿರುಗಾಳಿ ಸೃಷ್ಟಿಸಿದ್ದು, ಹಲವು ಪ್ರತಿಭಟನೆಗಳು, ಗಲಾಟೆಗಳಿಗೆ ಸಾಕ್ಷಿಯಾಗಿದೆ. ಭಾರತ ಸರ್ಕಾರ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರದರ್ಶಿಸುವುದನ್ನು ನಿಷೇಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಡಾಕ್ಯುಮೆಂಟರಿ ಹಂಚಿಕೆಯ ಮೇಲೆ ನಿರ್ಬಂಧ ವಿಧಿಸಿದೆ.

ಏನಿದು ಸಾಕ್ಷ್ಯಚಿತ್ರ?: 2002ರಲ್ಲಿ ಗೋಧ್ರಾ ರೈಲು ದುರಂತದ ನಂತರ ಗುಜರಾತ್ ರಾಜ್ಯಾದ್ಯಂತ ಸಂಭವಿಸಿದ ಭೀಕರ ಗಲಭೆ ಘಟನೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದರು. ಅಂದು ಗುಜರಾತ್‍ನಲ್ಲಿ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಅಂದಿನ ಅವರ ನೇತೃತ್ವದ ಸರ್ಕಾರವೇ ಗಲಭೆಗಳಿಗೆ ಕುಮ್ಮಕ್ಕು ಕೊಟ್ಟಿತ್ತು ಎಂಬುದು ಆರೋಪ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ

ಭಾರತದ ಸುಪ್ರೀಂಕೋರ್ಟ್‍ನಲ್ಲಿ ಈ ಪ್ರಕರಣದ ವಿಚಾರಣೆಯಾಗಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದಾಗ್ಯೂ ಬಿಬಿಸಿ ಈ ಘಟನೆ ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸಿದೆ. ಅಂದಿನ ಗಲಭೆ ಘಟನೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾಕ್ಷ್ಯಗಳಾಗಿದ್ದವರ ಹೇಳಿಕೆಗಳನ್ನು ಆಧರಿಸಿ ಇಂಡಿಯಾ: ದಿ ಮೋದಿ ಕ್ವಶ್ಚನ್ ಹೆಸರಿನಲ್ಲಿ ಡಾಕ್ಯುಮೆಂಟರಿ ಮಾಡಿದೆ.

ಈ ಸಾಕ್ಷ್ಯಚಿತ್ರವು ಪಕ್ಷಪಾತಿತನ ಮತ್ತು ವಸಾಹತುಷಾಹಿ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂಬುದು ಸರ್ಕಾರದ ಅನಿಸಿಕೆ. ಈ ಕಾರಣವೊಡ್ಡಿ ಬಿಬಿಸಿಯ ಈ ಎರಡು ಕಂತುಗಳ ಸಾಕ್ಷ್ಯಚಿತ್ರದ ಪ್ರಸಾರವನ್ನು ಭಾರತ ಸರ್ಕಾರ ನಿಷೇಸಿದೆ. 2021ರ ಐಟಿ ನಿಯಮಗಳ ಆಧಾರದ ನಿಷೇಧ ಮಾಡಿದೆ. ಯೂಟ್ಯೂಬ್‍ನಲ್ಲಿ ಹಾಕಲಾಗಿದ್ದ ಈ ಡಾಕ್ಯುಮೆಂಟರಿ ವಿಡಿಯೋಗಳನ್ನು ತೆಗೆದುಹಾಕಲಾಗಿದೆ.

We support, importance, free press, US, India, banning, BBC documentary, PM Modi,

Articles You Might Like

Share This Article