ಪಾಕ್‌ನಿಂದ ಡ್ರೋನ್‍ ಮೂಲಕ ಬಂದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

Social Share

ಜಮ್ಮು, ಅ. 31-ಪಾಕಿಸ್ತಾನದಿಂದ ಬಂದ ಡ್ರೋನ್‍ಗಳಿಂದ ಬೀಳಿಸಿದ ಶಸ್ತ್ರಾಸ್ತ್ರಗಳು ಮತ್ತು ಸೋಟಕಗಳನ್ನು ಸಾಗಿಸುವಲ್ಲಿ ತೊಡಗಿರುವ ಅದರ ಇಬ್ಬರನ್ನು ಗಡಿ ಬಳಿ ಬಂಧಿಸಲಾಗಿದೆ.

ಆರ್ ಎಸ್ ಪುರದ ಅಂತರಾಷ್ಟ್ರೀಯ ಗಡಿಯಲ್ಲಿರುವ ಬಸ್ಪುರ್ ಬಳಿ ಬಾಂಗ್ಲಾ ಪ್ರದೇಶದ ಡ್ರೋನ್‍ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಭಾರತದ ನೆಲದೊಳಗೆ ಇಳಿಸಿದ ಇಳಿಸಿ ಸಾಗಿಸಲಾಗುತ್ತಿತ್ತು.

ದೋಡಾದ ಚಂದರ್ ಬೋಸ್ ಮತ್ತು ಜಮ್ಮುವಿನ ಕ್ಯಾಂಪ್ ಗೋಲೆ ಗುಜ್ರಾಲ್‍ನ ಶಂಶೇರ್ ಸಿಂಗ್ ಬಂಧಿತರಾಗಿರುವ ಆರೋಪಿಗಳಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ.

ಅವರಿಂದ ನಾಲ್ಕು ಪಿಸ್ತೂಲ್‍ಗಳು, ಎಂಟು ಮ್ಯಾಗಜೀನ್‍ಗಳು ಮತ್ತು 47 ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ,ಇವರ ಬಂನದಿಂದ ಯುರೋಪ್‍ನಿಂದ ಸಂಘಟಿತವಾಗಿರುವ ಭಯೋತ್ಪಾದಕ ಘಟಕವನ್ನು ಭೇದಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇಬ್ಬರನ್ನು ವಿಚಾರಣೆ ನಡೆಸಿದಾಗ ಭಯೋತ್ಪಾದನಾ ಘಟಕದ ಸಂಯೋಜಕ ಯುರೋಪ್‍ನಲ್ಲಿ ನೆಲೆಸಿದ್ದಾನೆ ಎಂದು ತಿಳಿದು ಬಂದಿದೆ. ಇಬ್ಬರೂ ಯುರೋಪ್‍ನಲ್ಲಿ ನೆಲೆಸಿರುವ ನಿಷೇತ ಭಯೋತ್ಪಾದಕ ಸಂಘಟನೆಯ ಬಲ್ವಿಂದರ್‍ಗೆ ಕೆಲಸ ಮಾಡುತ್ತಿದ್ದರು

Articles You Might Like

Share This Article