ವೀಕೆಂಡ್ ಕರ್ಫ್ಯೂ ಎಫೆಕ್ಟ್ : ನಮ್ಮ ಮೆಟ್ರೋಗೆ ಭಾರಿ ನಷ್ಟ

Social Share

ಬೆಂಗಳೂರು,ಜ.17 -ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರಿಂದ ಇದೀಗ ನಮ್ಮ ಮೆಟ್ರೋಗೆ ಕೋಟಿ ಕೋಟಿ ಆದಾಯ ನಷ್ಟವಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೂ, ಜನರ ತುರ್ತು ಸೇವೆಗೆ ಧಕ್ಕೆಯುಂಟು ಆಗಬಾರದು ಎಂಬ ಕಾರಣಕ್ಕೆ ಆಟೋ, ಬಸ್ ಮತ್ತು ಮೆಟ್ರೋ ಓಡಾಟಕ್ಕೆ ಅನುಮತಿ ನೀಡಲಾಗಿದೆ.ಮೆಟ್ರೋ ಕಾರ್ಯಾಚರಣೆ ಮಾಡಿದ್ರೂ ಆದಾಯ ಮಾತ್ರ ಬರ್ತಿಲ್ಲ.
ವೀಕೆಂಡ್ ಕರ್ಫ್ಯೂನಲ್ಲಿ ಬೆಳಗ್ಗೆ 8ರಿಂದ ರಾತ್ರಿ 9ರವರಗೆ 20 ನಿಮಿಷಕ್ಕೊಮ್ಮೆ ಮೆಟ್ರೋ ಕಾರ್ಯಾಚರಣೆ ಆಗ್ತಿದೆ. ಆದರೂ ಆದಾಯ ಮಾತ್ರ ಇಲ್ಲ.ವೀಕೆಂಡ್ ಕಫ್ರ್ಯೂಗೂ ಮೊದಲು ನಿತ್ಯ ಸುಮಾರು 4 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಟ ನಡೆಸುತ್ತಿದ್ದರು.
ಶನಿವಾರ ಮೆಟ್ರೋದಲ್ಲಿ 36,458 ಪ್ರಯಾಣಿಕರು ಓಡಾಟ ಮಾಡಿದ್ದಾರೆ. ಅದರಲ್ಲಿ ನೇರಳೆ ಮಾರ್ಗದಲ್ಲಿ-14,053, ಹಸಿರು ಮಾರ್ಗದಲ್ಲಿ 16,340 ಪ್ರಯಾಣಿಕರು ಓಡಾಡಿದ್ದಾರೆ. ಅದ್ರೆ ವೀಕೆಂಡ್ ಕರ್ಫ್ಯೂನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಓಡಾಟ ನಡೆಸಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಮೆಟ್ರೋ ಓಡಾಟ ನಡೆಸಿದ್ರೂ, ನಿನ್ನೆ 9 ಲಕ್ಷದ 63 ಸಾವಿರ ಆದಾಯ ಸಂಗ್ರಹವಾಗಿದೆ.
ಸುಮಾರು 4 ಕೋಟಿ ರೂ. ಕಾರ್ಯಾಚರಣೆ ಆದಾಯ ಬರುತ್ತಿತ್ತು. ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಇರುವುದರಿಂದ ಮೆಟ್ರೋಗೆ ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗಿದೆ. ಮೆಟ್ರೋ ಕಾರ್ಯಾಚರಣೆಯಿಂದ ನಿರ್ವಹಣೆ ವೆಚ್ಚವೂ ಸಂಗ್ರಹವಾಗಿಲ್ಲ ಎಂದು ನಿಗಮದ ಹಿರಿಯ ಅಕಾರಿಗಳು ಮಾಹಿತಿ ನೀಡಿದ್ದಾರೆ.

Articles You Might Like

Share This Article