ಬೆಂಗಳೂರು,ಜ.17-ವೀಕೆಂಡ್ ಕರ್ಫ್ಯೂ ಜಾರಿಯಿಂದಾಗಿ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ.ಇಂದು ಒಂದೇ ದಿನ 18622 ಸೋಂಕಿತರು ಮಾತ್ರ ಪತ್ತೆಯಾಗಿದ್ದಾರೆ. ಇದು ನಿನ್ನೆ ದಾಖಲಾಗಿದ್ದ ಸೋಂಕಿತರಿಗಿಂತ 3 ಸಾವಿರ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ 22317 ಸೋಂಕಿತರು ಪತ್ತೆಯಾಗಿದ್ದರು, ವಿಕೇಂಡ್ ಕರ್ಫ್ಯೂ ಆರಂಭದ ಮೊದಲ ದಿನ ಅಂದರೆ ನಿನ್ನೆ 21092 ಸೋಂಕಿತರು ಪತ್ತೆಯಾಗಿದ್ದರು. ಇಂದು ನಿನ್ನೆಗಿಂತ 3 ಸಾವಿರ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ. ವಾರದ ಆರಂಭದಲ್ಲಿ ಅಬ್ಬರಿಸುವ ಕೊರೊನಾ ಸೋಂಕಿನ ಪ್ರಮಾಣ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಇಳಿಮುಖವಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸರ್ಕಾರ ಮತ್ತೆ ಕೆಲ ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸುವ ಸಾಧ್ಯತೆಗಳಿವೆ.
ಸಹಜ ಸ್ಥಿತಿಗೆ ನಗರ; ಎರಡನೆ ವಾರದ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿ ಪೂರ್ಣಗೊಂಡ ಬೆನ್ನಲೆ ನಗರ ಸಹಜ ಸ್ಥಿತಿಗೆ ಮರಳಿದೆ. ಬೆಳಿಗ್ಗೆಯಿಂದಲೇ ನಗರದ ವಾಹನಗಳ ಓಡಾಟ ಶುರುವಾಗಿದೆ. ವೀಕೆಂಡ್‍ನಲ್ಲಿ ಊರುಗಳಿಗೆ ತೆರಳಿದ್ದ ಜನ ನಗರಕ್ಕೆ ವಾಪಸಾಗಿದ್ದಾರೆ.
ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ ಐದು ಗಂಟೆವರೆಗೆ ನೈಟ್ ಕರ್ಫ್ಯೂ ಮಾತ್ರ ಜಾರಿಯಲ್ಲಿರುತ್ತದೆ. ಉಳಿದಂತೆ ಕೆಲ ವಾಣಿಜ್ಯ ಉದ್ದಿಮೆಗಳು, ಮಾಲ್‍ಗಳು, ಚಿತ್ರಮಂದಿರಗಳು, ಪಬ್, ಬಾರ್‍ಗಳು ಕೊರೊನಾ ನಿಯಮದಡಿ ಕರ್ತವ್ಯ ನಿರ್ವಹಿಸಲಿವೆ.
