ಬೆಂಗಳೂರು,ಮಾ.18- ಯೂಟೂಬ್ ನೋಡಿ ತೂಕದ ಸ್ಕೇಲ್‍ಗಳಲ್ಲಿ ಪಿಸಿಬಿ ಚಿಪ್ ಅಳವಡಿಸಿಕೊಂಡು ರಿಮೋಟ್ ಹಾಗೂ ಹೆಚ್ಚುವರಿ ಬಟನ್ ಮೂಲಕ ತೂಕದಲ್ಲಿ ಬದಲಾವಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೋಮಶೇಖರ್(33), ನವೀನ್‍ಕುಮಾರ್(30), ವಿನೇಶ್ ಪಟೇಲ್(22), ರಾಜೇಶ್‍ಕುಮಾರ್(43), ವ್ಯಾಟರಾಯನ್(42), ಮೇಘನಾಧನ್(38), ಕೆ.ಲೋಕೇಶ(39), ಗಂಗಾಧರ್(32), ಲೋಕೇಶ್924), ಚಂದ್ರಶೇಖರ್(41), ಅನಂತಯ್ಯ(44), ರಂಗನಾಥ್(38), ಶಿವಣ್ಣ(51), ಸಮೀವುಲ್ಲಾ(65), ವಿಶ್ವನಾಥ(54), ಮಹಮದ್ ಈಶಾಕ್(30) ಮತ್ತು ಮಧುಸೂದನ್ ಬಂvತರು.
ಮಾರುತಿನಗರದ ವಿಘ್ನೇಶ್ವರ ಓಲ್ಡ್ ಪೇಪರ್ ಮಾರ್ಟ್‍ನಲ್ಲಿ ರಿಮೋಟ್ ಮೂಲಕ ತೂಕದಲ್ಲಿ ಮೋಸ ಮಾಡಿರುವ ಬಗ್ಗೆ ಗಣೇಶ್ ಎಂಬುವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಾಗ ಬಹುತೇಕ ಅಂಗಡಿಗಳಲ್ಲಿ ಇದೇ ರೀತಿ ಮೋಸ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.
ಕೋಲ್ಡ್ ಸ್ಟೋರೇಜ್ ಕುಸಿದು 14 ಮಂದಿ ಸಾವಿನ ಪ್ರಕರಣ, ಇಬ್ಬರು ಮಾಲೀಕರ ಬಂಧನ
ಆರೋಪಿಗಳ ಪತ್ತೆಗಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ಬಿ. ನಿಂಬರಗಿ ಅವರು ಒಂದು ವಿಶೇಷ ತಂಡ ರಚಿಸಿದ್ದರು. ಈ ತಂಡ ಕಾರ್ಯೋನ್ಮುಖವಾಗಿ ಆರೋಪಿಗಳ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಪ್ರಮುಖ ಇಬ್ಬರು ಆರೋಪಿಗಳಾದ ಸೋಮಶೇಖರ್ ಹಾಗೂ ನವೀನ್‍ಕುಮಾರ್ ಈ ಹಿಂದೆ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಲೈಸೆನ್ಸ್ ಪಡೆದು ಸ್ಕೇಲ್ ಸರ್ವೀಸ್ ಕೆಲಸ ಮಾಡುತ್ತಿದ್ದಾಗ ಯೂಟೂಬ್ ನೋಡಿ ತೂಕದ ಯಂತ್ರದಲ್ಲಿ ವೈರ್‍ಗಳನ್ನು ಬದಲಾವಣೆ ಮಾಡುವುದನ್ನು ಕಲಿತುಕೊಂಡಿದ್ದರು.
ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಈ ಆರೋಪಿಗಳು 2-3 ವರ್ಷಗಳಿಂದ ಸ್ಕೇಲ್‍ನಲ್ಲಿ ಬದಲಾವಣೆ ಮಾಡಿ ಸ್ಕೇಲ್‍ನಲ್ಲಿ ರಿಮೋಟ್ ಹಾಗೂ ಹೆಚ್ಚುವರಿ ಬಟನ್ ಅಳವಡಿಸಿ ತೂಕದಲ್ಲಿ ವ್ಯತ್ಯಾಸ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದು ತಿಳಿದುಬಂದಿದೆ.
ಅಂಗಡಿಗಳ ಮೇಲೆ ದಾಳಿ:
ಪ್ರಮುಖ ಇಬ್ಬರು ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಕಾಮಾಕಿಪಾಳ್ಯ ಠಾಣೆ ಸರಹದ್ದಿನಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿಗಳು, ಮಾಂಸದ ಅಂಗಡಿಗಳು ಹಾಗೂ ಕೋಳಿ , ಮೀನು ಮಾರಾಟ ಅಂಗಡಿಗಳ ಮೇಲೆ ದಾಳಿ ಮಾರ್ಪಾಡು ಮಾಡಿಕೊಂಡಿದ್ದ ಸ್ಕೇಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ.
ತನಿಖೆ ವೇಳೆ ಆರೋಪಿ ನವೀನ್‍ಕುಮಾರ್ ವಿರುದ್ಧ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಕೇಲ್‍ಗಳಲ್ಲಿ ಬದಲಾವಣೆ ಮಾಡಿರುವ ಬಗ್ಗೆ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ.
ಸಿದ್ದು ವಿರುದ್ಧ ಬಿ.ವೈ.ವಿಜಯೇಂದ್ರ ಕಣಕ್ಕೆ..?
ಬೆದರಿಕೆ:
ಈ ಬಗ್ಗೆ ದೂರು ನೀಡಿದ್ದ ಅಸಿಸ್ಟೆಂಟ್ ಕಂಟ್ರೋಲರ್ ಅವರಿಗೆ ಬೆದರಿಕೆ ಹಾಕಿದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದು ತಿಳಿದುಬಂದಿರುತ್ತದೆ.
ವಿಜಯನಗರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರವಿ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಲೋಹಿತ್ ಹಾಗೂ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.
weight, scale, Fraud, 17 arrested,