ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ

Social Share

ಬೊಗೋಟಾ (ಕೊಲಂಬಿಯಾ), ಡಿ .7-ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿಂದು ಒಟ್ಟು 200 ಕೆಜಿ ಬಾರ ಎತ್ತುವ ಮೂಲಕ ಭಾರತದ ಮಹಿಳಾ ವೇಟ್‍ಲಿಪ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.

ಮಹಿಳಾ ವಿಭಾಗದ 49 ಕೆಜಿ ವಿಭಾಗದಲ್ಲಿ ಸ್ರ್ಪಧಿಸುತ್ತಿರುವ ಮೀರಾಬಾಯಿ ಸ್ಯಾಚ್‍ನಲ್ಲಿ 87 ಕೆಜಿ ಎತ್ತುವಲ್ಲಿ ಯಶಸ್ವಿಯಾದರು ಮತ್ತು ಕ್ಲೀನ್ ಮತ್ತು ಜರ್ಕ್‍ನಲ್ಲಿ 113 ಕೆಜಿ ಎತ್ತುವ ಸಾಹಸವಿತ್ತು ಆದರೆ ಮಣಿಕಟ್ಟಿನ ಗಾಯದ ಕಾರಣ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಮೊದಲ ಹಂತದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ತೆರೆ

ಇದೇ ವಿಬಾಗದಲ್ಲಿ ಒಟ್ಟು 206 ಕೆಜಿ (93 ಕೆಜಿ + 113 ಕೆಜಿ) ಎತ್ತುವ ಗುರಿ ಸಾಧನೆಯೊಂದಿಗೆ ಚೀನಾದ ಜಿಯಾಂಗ್ ಹುಯಿಹುವಾ ಚಿನ್ನ ಗೆದ್ದರು ಚೀನಾದವರೇ ಆದ ಹೌ ಝಿಹುವಾ 198 ಕೆಜಿ (89 ಕೆಜಿ + 109 ಕೆಜಿ) ಕಂಚಿನ ಪದಕವನ್ನು ಪಡೆದರು.

ಮಾಧ್ಯಮದ ಜೊತೆ ಮಾತನಾಡಿದ ಮೀರಾಬಾಯಿ ಸ್ಪರ್ದೆ ಸಂದರ್ಭದಲ್ಲಿ ಯಾವುದೇ ಒತ್ತಡವನ್ನು ತೆಗೆದುಕೊಳ್ಳಲಿಲ್ಲ. ಇಂದಿನಿಂದ ನಾವು ತೂಕವನ್ನು ಹೆಚ್ಚಿಸಲು ಮತ್ತು ಸುಧಾರಿಸಲು ಪ್ರಾರಂಭಿಸುತ್ತೇವೆ ಎಂದು ಭಾರತ ತಂಡದ ಮುಖ್ಯ ಕೋಚ್ ವಿಜಯ್ ಶಮಾರ್ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಮಹತ್ವದ ಸಭೆ

2017 ರ ವಿಶ್ವ ಚಾಂಪಿಯನ್ ಚಾನು ಸೆಪ್ಟೆಂಬರ್‍ಮಲ್ಲಿ ತರಬೇತಿ ಅವಧಿಯಲ್ಲಿ ಮಣಿಕಟ್ಟಿಗೆ ಗಾಯವಾಗಿತ್ತು . ಆದರೂ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದರು. ಈಗ, ನಾವು ಆಕೆಯ ಮಣಿಕಟ್ಟಿನ ಚಿಕಿತ್ಸೆ ಮೇಲೆ ಗಮನ ಕೇಂದ್ರೀಕರಿಸುತ್ತೇವೆ ಏಕೆಂದರೆ ಮುಂದಿನ ಪಂದ್ಯಾವಳಿಗೆ ನಮಗೆ ಸಾಕಷ್ಟು ಸಮಯವಿದೆ ಎಂದು ಶರ್ಮಾ ಹೇಳಿದರು.

ಸ್ನ್ಯಾಚ್ ವಿಭಾಗದಲ್ಲಿ ಬೆಳ್ಳಿ ಪದಕವನ್ನೂ ಪಡೆದರು. ಇದು ಮಣಿಪುರಿಯ ಎರಡನೇ ವಲ್ಡ್ಸರ್ï ಪದಕವಾಗಿದೆ, ಅವರು 2017 ರಲ್ಲಿ ಚಿನ್ನ ಗೆದ್ದಿದ್ದರು.

#Weightlifter, #MirabaiChanu, #clinchessilver, #WorldChampionships,

Articles You Might Like

Share This Article