Friday, March 29, 2024
Homeಬೆಂಗಳೂರುವಾಟ್ಸಾಪ್ ನಲ್ಲಿ ಹುಡುಗಿಯ ಭಾವಚಿತ್ರ ಬಳಸಿ ಲೈಂಗಿಕ ವಂಚನೆ : ಆರೋಪಿ ಸೆರೆ

ವಾಟ್ಸಾಪ್ ನಲ್ಲಿ ಹುಡುಗಿಯ ಭಾವಚಿತ್ರ ಬಳಸಿ ಲೈಂಗಿಕ ವಂಚನೆ : ಆರೋಪಿ ಸೆರೆ

ಬೆಂಗಳೂರು, ಜ.12- ಹುಡುಗಿಯ ಭಾವಚಿತ್ರವನ್ನು ಬಳಕೆ ಮಾಡಿಕೊಂಡು ವ್ಯಾಟ್ಸ್ ಆಫ್ ಮೂಲಕ ಲೈಂಗಿಕ ವಂಚನೆ ಕೃತ್ಯವೆಸಗುತ್ತಿದ್ದ ದಾವಣಗೆರೆ ಮೂಲದ ಯುವಕನನ್ನು ಉತ್ತರ ವಿಭಾಗದ ಸಿ.ಇ.ಎನ್. ಕ್ರೈಂ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಮೂಲದ ನರಹರಿ (27) ಬಂಧಿತ ವಂಚಕ. ಈತ ಬೊಮ್ಮನಹಳ್ಳಿಯ ಲಾಡ್ಜೊವೊಂದರಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದನು.

ವ್ಯಕ್ತಿಯೊಬ್ಬರು ಕೆನರಾ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಯಾರೋ ಅಪರಿಚಿತರು ಹುಡುಗಿ ಹೆಸರಿನಲ್ಲಿ ಒಂದು ಮೊಬೈಲ್ ನಂಬರಿನ ಮೂಲಕ ಅವರನ್ನು ಸಂಪರ್ಕಿಸಿರುತ್ತಾರೆ. ಈ ರೀತಿ ಒಂದು ತಿಂಗಳಿನಿಂದ ಆ ವ್ಯಕ್ತಿಗೆ ಕರೆ ಮಾಡಿ ಅನೈತಿಕ ಸಂಬಂಧದ ಸಂದೇಶವನ್ನು ಕಳುಹಿಸಿ ನಂತರ ಅನೈತಿಕ ಸಂಬಂಧದಲ್ಲಿರುವ ಸಂದೇಶಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ, ಅವರಿಂದ ಹಂತ ಹಂತವಾಗಿ 1.10 ಲಕ್ಷ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದು, ಈ ಬಗ್ಗೆ ಆ ವ್ಯಕ್ತಿ ದೂರು ನೀಡಿದ್ದರು.

ರಾಜ್ಯ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ : ಬೊಮ್ಮಾಯಿ

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಉತ್ತರ ವಿಭಾಗದ ಸೆನ್ ಠಾಣೆ ಪೊಲೀಸರು ವಂಚಕನ್ನೊಬ್ಬ ಹುಡುಗಿ ಹೆಸರಿನಲ್ಲಿ ನಕಲಿ ವ್ಯಾಟ್ಸ್‍ಆಪ್ ಖಾತೆಯನ್ನು ಕ್ರಿಯೇಟ್ ಮಾಡಿರುವುದನ್ನು ಖಚಿತ ಪಡಿಸಿಕೊಂಡಿರುತ್ತಾರೆ. ಆ ಖಾತೆಗೆ ಹುಡುಗಿಯ ಭಾವಚಿತ್ರವನ್ನು ಬಳಕೆ ಮಾಡಿಕೊಂಡು ದೂರುದಾರ ವ್ಯಕ್ತಿಗೆ ಹುಡುಗಿಯರು ಚಾಟ್ ಮಾಡುವ ರೀತಿಯಲ್ಲಿ ಚಾಟ್ ಮಾಡಿ, ಆತನ ಫೋಟೋಗಳನ್ನು ಸಂಗ್ರಹಣೆ ಮಾಡಿಕೊಂಡು ನಂತರ ಆತನ ಫೋಟೋವನ್ನು ಮಾರ್ಫ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹೆದರಿಸಿ, ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ.

ವಸೂಲಿ ಮಾಡಿದ ಹಣವನ್ನು ಸ್ನೇಹಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಆ ನಂತರ ಎಟಿಎಂ ಮೂಲಕ ಡ್ರಾ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿರುತ್ತಾನೆ. ಈ ರೀತಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ನಡೆದ ಹಣಕಾಸಿನ ವಹಿವಾಟಿನಿಂದ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

RELATED ARTICLES

Latest News