ಎಫ್‍ಐಆರ್ ಇಲ್ಲದೆ ವಿಚಾರಣೆ ನಡೆಸಲು ಇಡಿಗೆ ಅಧಿಕಾರವಿಲ್ಲ: ಚಿದಂಬರಂ

Spread the love

ನವದೆಹಲಿ, ಜೂ.14- ಪ್ರಥಮ ಮಾಹಿತಿ ವರದಿ ದಾಖಲಾಗದೆ ಸಮನ್ಸ್ ನೀಡಲು, ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವೇ ಇಲ್ಲ. ರಾಹುಲ್ ಗಾಂಧಿ ಅವರನ್ನು ಯಾವ ಸೆಕ್ಷನ್ ಮೇಲೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

ಟ್ವಟರ್‍ನಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧ ವಾಗ್ಧಾಳಿ ನಡೆಸಿದ ಚಿದಂಬರಂ, ಬಿಜೆಪಿಯಲ್ಲಿರುವ ಖ್ಯಾತ ವಕ್ತಾರರು ದಯವಿಟ್ಟು ತಮ್ಮ ಪ್ರಶ್ನೆಗಳಿಗೆ ಉತ್ತರಿಸುವರೇ ಎಂದು ಪ್ರಶ್ನಿಸಿದ್ದಾರೆ. ಜಾರಿ ನಿರ್ದೇಶನಾಲಯದ ಯಾವ ನಿಗದಿತ ಅಪರಾಧಕ್ಕಾಗಿ ರಾಹುಲ್‍ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದೆ.

ಪಿಎಂಎಲ್‍ಎ ಕಾನೂನಿನ ಯಾವ ಸೆಕ್ಷನ್‍ಗಳನ್ನು ಉಲ್ಲೇಖಿಸಲಾಗಿದೆ. ವಿಚಾರಣೆ ನಡೆಸುತ್ತಿರುವ ಆರೋಪದ ಮೇಲೆ ಯಾವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಯವಿಟ್ಟು ಆ ಎಫ್‍ಐಆರ್ ಪ್ರತಿಯನ್ನು ನಮಗೆ ತೋರಿಸುತ್ತೀರಾ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ಎಫ್‍ಐಆರ್ ಇಲ್ಲದೆ ವಿಚಾರಣೆ ನಡೆಸುವ ಅಧಿಕಾರವನ್ನು ಜಾರಿ ನಿರ್ದೇಶನಾಲಯ ಹೊಂದಿಲ್ಲ ಎಂಬ ಮಾಹಿತಿ ನಿಮಗೆ ತಿಳಿದಿಲ್ಲವೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

Facebook Comments

Sri Raghav

Admin