ವಾಷಿಂಗ್ಟನ್, ಡಿ 9- ಭಾರತದಲ್ಲಿ ವೀಸಾ ನೀಡುವಲ್ಲಿ ದೀರ್ಘ ವಿಳಂಬವಾಗುತ್ತರುವ ಬಗ್ಗೆ ನಮಗೆ ತಿಳಿದಿದೆ ಇದನ್ನು ಶೀಘ್ರದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್‍ಪಿಯರ್ ತಿಳಿಸಿದರು.
ಭಾರತದಲ್ಲಿನ ಮಿಷನ್ ಅಮೆರಿಕ ಪ್ರಕ್ರಿಯೆಯಲ್ಲಿ ವೀಸಾಗೆ ಸಂದರ್ಶನ ಅವಧಿಯ ಪ್ರಸ್ತುತ 1,000 ದಿನಗಳಿಗಿಂತ ಹೆಚ್ಚು ಕಾಲ ಹಿಡಿಯುತ್ತಿದೆ ಅವರು ಹೇಳಿದರು.
ಸಾಂಕ್ರಾಮಿಕ ಕೊರೊನಾದಿಂದಾಗಿ ಪ್ರಕ್ರಿಯೆ ನಿಂತಿತ್ತು ನಮ್ಮ ಸಿಬ್ಬಂದಿ ಸವಾಲುಗಳಿಂದ ಚೇತರಿಸಿಕೊಳ್ಳುವಲ್ಲಿ ಸಲ್ಪ ಸಮಯ ಕಳೆದಿದೆ ಆದರೂ ನಾವು ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ ಪ್ರಸ್ತುತ ವೀಸಾ ಬೇಡಿಕೆ ಹೆಚ್ಚಿದ್ದು ನಾವು ಇನ್ನೂ ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಜೀನಪಿಯರ್ ಹೇಳಿದರು.
ಕಳವು ಮಾಡಿದ್ದ ಬೈಕ್‍ನಲ್ಲಿ ನೈಟ್ ರೌಂಡ್ಸ್ : ಮೊಬೈಲ್ ದೋಚುತ್ತಿದ್ದ ಮೂವರ ಬಂಧನ
ಸದ್ಯದಲ್ಲೇ ನಾವು ವೀಸಾ ಸಂದರ್ಶನದ ಕಾಯುವ ಸಮಯವನ್ನು ಕಡಿಮೆ ಮಾಡುತ್ತಿದ್ದೇವೆ, ನಾವು ವಿದೇಶಾಂಗ ಸೇವೆಯ ಸಿಬ್ಬಂದಿಯ ನೇಮಕವನ್ನು ದ್ವಿಗುಣಗೊಳಿಸಿದ್ದೇವೆ. ವೀಸಾ ನೀಡಿಕೆ ಪ್ರಕ್ರಿಯೆಯು ಯೋಜಿತಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದರು.
ವಲಸೆರಹಿತ ವೀಸಾ, ಸಂದರ್ಶಕ ವೀಸಾ (ಬಿ1/ಬಿ2), ವಿದ್ಯಾರ್ಥಿ ವೀಸಾ (ಎಫ್1/ಎಫ್2), ಮತ್ತು ತಾತ್ಕಾಲಿಕ ಉದ್ಯೋಗಿ ವೀಸಾ (ಎಚ್, ಎಲ್, ಒ, ಪಿ , ಕಿ್ಯೂ) ನಿರ್ದಿಷ್ಟವಾಗಿ ಏಷ್ಯಾದ ದೇಶಗಳಲ್ಲಿ ಮತ್ತು ಭಾರತ ಸೇರಿದಂತೆ ಹೆಚ್ಚಾಗಿ ಬಾಕಿ ಉಳಿದಿದೆ.
ಮುಂದಿನ 5 ವರ್ಷದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ : ಆರ್.ಅಶೋಕ್
ಭಾರತದ ವಿಷಯದಲ್ಲಿ, ಇದು ಈಗ 1,000 ದಿನಗಳಿಗಿಂತ ಹೆಚ್ಚು ದಾಟಿದೆ, ಇದರ ಪರಿಣಾಮವಾಗಿ ಅಮೆರಿಕ ಮತ್ತು ವಿದೇಶದಲ್ಲಿರುವ ಏಷ್ಯನ್ ಅಮೇರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ಕುಟುಂಬಗಳಿಗೆ ತೊಂದರೆಯಾಗಿದೆ, ಜೊತೆಗೆ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಸಂದರ್ಶಕರಿಗೆ ಪ್ರಮುಖ ಅಡಚಣೆಗಳು ಉಂಟಾಗಿವೆ.
ಏಷ್ಯಾದ ಖಾಂಡದಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳಲ್ಲಿ ರಾಜ್ಯ ಇಲಾಖೆಯು ಪೂರ್ಣ ಸಮಯದ ಅಧಿಕಾರಿಗಳು, ತಾತ್ಕಾಲಿಕ ಸಿಬ್ಬಂದಿ, ಗುತ್ತಿಗೆದಾರರು ಅಥವಾ ನಿವೃತ್ತ ಕಾನ್ಸುಲರ್ ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು ಎಂದು ಬಿಡನ್ ಆಡಳಿತಕ್ಕೆ ಆಯೋಗ ಶಿಫಾರಸು ಮಾಡಿದೆ.
White House, Says, US Aware, Long, Delays, Visa,