ವೈಟ್‍ಫೀಲ್ಡ್ ವಿಭಾಗ ಪೊಲೀಸರ ಭರ್ಜರಿ ಕಾರ್ಯಾಚರಣೆ; 1.65 ಕೋಟಿ ಮೌಲ್ಯದ ಮಾಲು ವಶ

Spread the love

ಬೆಂಗಳೂರು, ಜೂ.9- ವೈಟ್‍ಫೀಲ್ಡ್ ವಿಭಾಗ ವಿವಿಧ ಪೋಲೀಸ್‍ ಠಾಣೆ ವ್ಯಾಪ್ತಿಯಲ್ಲಿ ಸುಮಾರು 1.65ಕೋಟಿ ಬೆಲೆ ಬಾಳುವ 9 ಕಾರುಗಳು 45 ದ್ವಿಚಕ್ರ ವಾಹನಗಳು, 135 ಮೊಬೈಲ್‍ಗಳು, 1 ಲ್ಯಾಪ್‍ಟಾಪ್, 5 ಕ್ಯಾಮರಾ, 150 ಗ್ರಾಂ ಚಿನ್ನಾಭರಣ ಹಾಗೂ 1.5ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದು, 20 ಖದೀಮರನ್ನು ಬಂದಿಸಲಾಗಿದೆ.

ನಗರದ ಹೆಚ್‍ಎಎಲ್,ಕಾಡುಗೋಡಿ, ಕೆ.ಆರ್.ಪುರ, ಮಾರತ್ತಹಳ್ಳಿ, ಬೆಳ್ಳಂದೂರು , ವೈಟ್‍ಫೀಲ್ಡ್‍ನ ಹಲವೆಡೆ ನಡೆದಿರುವ ಕಾರು, ದ್ವಿಚಕ್ರ ವಾಹನ, ಸರಗಳ್ಳತನ ಪ್ರಕರಣಗಳನ್ನು ಭೇಸಿರುವ ಪೋಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಅವರಿಂದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಹೆಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಲಾಸಿ ಜೀವನ ನಡೆಸಲು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ಸುಳ್ಳು ನೆಪಹೇಳಿ ಕಾರ್‍ಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿ ಚರಣ್‍ರಾಜ್ ನನ್ನು ಬಂಧಿಸಿ, ಆತನಿಂದ ಸುಮಾರು 1 ಕೋಟಿ ಬೆಲೆ ಬಾಳುವ ವಿವಿಧ ಕಂಪನಿಗಳ 8 ಕಾರ್‍ಗಳು ಮತ್ತು ವಿವಿಧ ಕಂಪನಿಗಳ ಒಟ್ಟು 5 ಕ್ಯಾಮರಾಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಡುಗೋಡಿ ಪೊಲೀ ಸರು, ಸುಬಾನ್, ಅಬ್ಬಾಜ್, ಮತ್ತು ಸಲೀಮ್ ಎಂಬ ಆರೋಪಿಗಳನ್ನು ಬಂಸಿ, ಅವರಿಂದ ಸುಮಾರು 15.20 ಲಕ್ಷರೂ ಬೆಲೆ ಬಾಳುವ 23 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆ.ಆರ್.ಪುರ ಪೊಲೀಸರು, ಕಾರು, ಬೈಕ್ ಮv್ತು ಸರಗಳವು ಪ್ರಕರಣಗಳಲ್ಲಿ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಂತಾರಾಜ್ಯ ಜೇಬು ಗÀಳವು ಮಾಡುತ್ತಿದ್ದ ಲೋಕೇಶ್, ರವಿ ತೇಜ, ಜಗನ್, ಅವಲ ಕವಾಡಿ , ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಶಶಾಂಕ್, ಮೊಬೈಲ್ ಕಳವು ಮಾಡುತ್ತಿದ್ದ ಶಕ್ತಿ ವೇಲ್ , ವಿಜಯ್ ಬಂತ ಆರೋಪಿಗಳು. ಇವರಿಂದ 20 ಲಕ್ಷ ಬೆಲೆ ಬಾಳುವ ವಿವಿಧ ಕÀಂಪನಿಗಳ ಒಟ್ಟು 128 ಮೊಬೈಲ್ ಫೋನುಗಳು, ಆರೋಪಿಗಳು ಕೃತ್ಯಕ್ಕೆ ಬಳಸಿದ 5 ಲಕ್ಷ ರೂ ಬೆÉಲೆಬಾಳುವ ಹೊಂಡಾ ಅಮೇಜ್ ಕಾರ್, 60 ಗ್ರಾಂ
ತೂಕದ ಎರಡು ಚಿನ್ನದ ಸರಗಳು, 9 ಲಕ್ಷ ಬೆÉಲೆಯ ವಿವಿಧ ಕಂಪನಿಗಳ ಒಟ್ಟು 17 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ ಕಳವು ಮಾಡುತ್ತಿದ್ದ 6 ಆರೋಪಿಗಳಾದ ಶಾಂತಕುಮಾರ್, ನಾಸೀರ್, ಗಣೇಶ್, ಜ್ಞಾನ ಪ್ರಕಾಶ್, ಅರವಿಂದ್, ಜೋಸೆಫ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ ವಿವಿಧ ಕಂಪನಿಗಳ ಬೆಲೆ ಬಾಳುವ ಒಟ್ಟು 5 ದ್ವಿಚಕ್ರ ವಾಹನಗಳು, 2 ಲಕ್ಷ ಬೆಲೆಯ 7 ಮೋಬೈಲ್‍ಗಳು, 5 ಲಕ್ಷ ರೂ. ಬೆಲೆಯ ಒಟ್ಟು 80 ಗ್ರಾಂ ತೂಕದ ಚಿನ್ನದ ಹಾಗೂ 1.15 ಕೆಜಿ ತೂಕದ ಬೆಳ್ಳಿಯ ಆಭರಣಗಳು ಹಾಗೂ ಒಂದು ಲ್ಯಾಪ್‍ಟಾಪ್‍ನ್ನು ವಶಕ್ಕೆ ಪಡೆದಿದ್ದಾರೆ.

ಬೆಳ್ಳಂದೂರು ಠಾಣೆ ಪೊಲಿಸರು ಮೂವರು ಆರೋಪಿಗಳನ್ನು ಬಂಸಿ ಅವರಿಂದ 10 ಲಕ್ಷ ರೂ. ಬೆಲೆ ಬಾಳುವ 9 ದ್ವಿಚಕ್ರವಾಹನಗಳು ಮತ್ತು ಒಂದು ಆಟೋ ರಿಕ್ಷಾ ವಶ ಪಡಿಸಿಕೊಂಡು , ರಘುನಾಯಕ್, ಕೆಂಪೇಗೌಡ, ಅರ್ಜುನ್ ಎಂಬುವರನ್ನು ಬಂಸಲಾಗಿದೆ.

Facebook Comments