ವೈಟ್‍ಫೀಲ್ಡ್ ವಿಭಾಗದ ಪೊಲೀಸರ ಕಾರ್ಯಾಚರಣೆ: 10.36 ಕೋಟಿ ಮೌಲ್ಯದ ಮಾಲು ವಶ..

Social Share

ಬೆಂಗಳೂರು, ಡಿ.21- ಒಂದು ವರ್ಷದ ಅವಧಿಯಲ್ಲಿ ವೈಟ್ ಫೀಲ್ಡ್ ವಿಭಾಗದ ಪೊಲೀಸರು ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ 10 ಕೋಟಿ 36 ಲಕ್ಷದ 49 ಸಾವಿರ ರೂ. ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ವಸತಿ ಗೃಹಗಳ ಮೈದಾನದಲ್ಲಿ ಇಂದು ಅಮಾನತು ಪಡಿಸಿಕೊಂಡಿರುವ ಕಳವು ಮಾಲುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ವೀಕ್ಷಿಸಿ ವಾರಸುದಾರರಿಗೆ ಹಸ್ತಾಂತರಿಸಿದರು.

ವಿವಿಧ ಪ್ರಕರಣಗಳಲ್ಲಿ 1 ಕೋಟಿ 88 ಲಕ್ಷ 70 ಸಾವಿರ ಬೆಲೆಬಾಳುವ 3 ಕೆಜಿ 787 ಗ್ರಾಂ ಚಿನ್ನಾಭರಣಗಳು, 4 ಲಕ್ಷ 44 ಸಾವಿರ ಬೆಲೆಬಾಳುವ 4 ಕೆಜಿ 428 ಗ್ರಾಂ ಬೆಳ್ಳಿ ಆಭರಣಗಳು, 24 ಲಕ್ಷ ಮೌಲ್ಯದ ವಜ್ರದ ಆಭರಣ, 1 ಕೋಟಿ 41 ಲಕ್ಷದ 41 ಸಾವಿರ ಬೆಲೆಯ 700 ವಿವಿಧ ಕಂಪೆನಿಯ ಮೊಬೈಲ್‍ಗಳು, 62 ಲಕ್ಷ 40 ಸಾವಿರ ಬೆಲೆಯ 96 ಲ್ಯಾಪ್‍ಟಾಪ್‍ಗಳು, ಸುಮಾರು 2 ಕೋಟಿ 37 ಲಕ್ಷ 55 ಸಾವಿರ ಬೆಲೆಬಾಳುವ ವಿವಿಧ ಕಂಪೆನಿಯ 313 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಸುಮಾರು 94 ಲಕ್ಷ ಬೆಲೆಬಾಳುವ 15 ಕಾರುಗಳು, ಒಂದು ಜೆಸಿಬಿ, 1 ಕೋಟಿ 91 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಶಾಸಕರಿಗೆ ಏಕವಚನದಲ್ಲಿ ನಿಂದನೆ: ಸದನ ಗದ್ದಲ- ಕೋಲಾಹಲ

ಮಾದಕ ವಸ್ತುಗಳ ಮಾರಾಟ ತಡೆಗಟ್ಟುವ ಸಂಬಂಧ 41 ಮಾದಕ ವಸ್ತು ಮಾರಾಟ ಪ್ರಕರಣಗಳನ್ನು ಭೇದಿಸಿ 159 ಕೆಜಿ ಮಾದಕ ವಸ್ತು ಗಾಂಜಾ, 722 ಗ್ರಾಂ ಎಂಡಿಎಂಎ ಹಾಗೂ 14 ಗ್ರಾಂ ಎಲ್.ಎಸ್.ಡಿ. ಸ್ಲಿಪ್ಸ್, 92.95 ಲಕ್ಷ ಬೆಲೆಬಾಳುವ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವೈಟ್‍ಫೀಲ್ಡ್, ಕಾಡುಗೋಡಿ, ಮಹದೇವಪುರ, ಕೆಆರ್ ಪುರಂ, ಮಾರತ್ತಹಳ್ಳಿ, ಎಚ್‍ಎಎಲ್, ಬೆಳ್ಳಂದೂರು, ವರ್ತೂರು ಹಾಗೂ ವೈಟ್‍ಫೀಲ್ಡ್ ಸೈಬರ್ ಸೆನ್ ಠಾಣೆ ಪೊಲೀಸರು ಕಳೆದ ಡಿ. 2021ರಿಂದ 2022ರ ಡಿ.20ರವರೆಗೆ ವಿವಿಧ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಚೀನಾ ಗಡಿ ಗಲಾಟೆ ಚರ್ಚೆಗೆ ಕಾಂಗ್ರೆಸ್ ಪಟ್ಟು : ಸಂಸತ್ ಭವನದೆದುರು ಪ್ರತಿಭಟನೆ

ವಿವಿಧ ಪ್ರಕರಣಗಳಲ್ಲಿ ಮಾಲುಗಳನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಶ್ಲಾಘಿಸುವುದರ ಜೊತೆಯಲ್ಲಿ ವೈಟ್‍ಫೀಲ್ಡ್ ವಿಭಾಗದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಅಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

Whitefield Police, operation, 10.36 crore, goods worth,

Articles You Might Like

Share This Article