ಜಿನೇವಾ,ಡಿ.31- ಕೋವಿಡ್ ಸೋಂಕುಗಳು ಹಾಗೂ ಆರೋಗ್ಯ ಪರಿಸ್ಥಿತಿಯ ಕುರಿತು ವಾಸ್ತವ ಅಂಕಿ ಅಂಶಗಳನ್ನು ಹಂಚಿಕೊಳ್ಳುವಂತೆ ವಿಶ್ವಸಂಸ್ಥೆ ಚೀನಾಗೆ ಸೂಚನೆ ನೀಡಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾದ ಅಧಿಕಾರಿಗಳ ನಡುವೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಚೀನಾದಲ್ಲಿ ಕೋವಿಡ್ ಶೂನ್ಯ ಪಾಲಿಸಿ ಸಡಿಲಿಸಿದ ಮೇಲೆ ಸೋಂಕಿನ ಪ್ರಮಾಣ ಏರಿಕೆಯಾಗಿದೆ, ಸಾವಿನ ಪ್ರಕರಣಗಳಲ್ಲೂ ಹೆಚ್ಚಳವಾಗಿದೆ ಎಂಬ ವರದಿಗಳಿವೆ. ಚೀನಾ ಕೂಡ ಇದ್ದಕ್ಕಿದ್ದಂತೆ ಸೋಂಕಿನ ಪ್ರಕರಣಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ.
2019ರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಎಲ್ಲಾ ದೇಶಗಳು ವಿಶ್ವಸಂಸ್ಥೆಯೊಂದಿಗೆ ಅಸಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ. ಚೀನಾವೂ ಆರಂಭದಲ್ಲಿ ವಿಶ್ವಸಂಸ್ಥೆಗೆ ವರದಿ ನೀಡುತ್ತಿತ್ತು. ಆದರೆ ಇತ್ತೀಚೆಗೆ ದೈನಂದಿನ ವರದಿಯನ್ನು ಸ್ಥಗಿತಗೊಳಿಸಿದ್ದು, ಕಳೆದ ತಿಂಗಳು ವಾರದ ವರದಿ ನೀಡಿದ್ದನ್ನು ಹೊರತು ಪಡಿಸಿ ಉಳಿದೆಲ್ಲಾ ವಿವರಗಳನ್ನು ಮುಚ್ಚಿಟ್ಟಿತ್ತು.
ಚಾಲಕನಿಗೆ ಹೃದಯಘಾತವಾಗಿ ಕಾರಿಗೆ ಗುದ್ದಿದ ಬಸ್, ಒಂಬತ್ತು ಮಂದಿ ಸಾವು
ಚೀನಾದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯ ಸ್ಪಷ್ಟತೆ ಇಲ್ಲದೆ ಹಲವು ರೀತಿಯ ವದ್ಧಂತಿಗಳು ಹರಡಲಾರಂಭಿಸಿವೆ. ಕೆಲವೆಡೆ ಇದು ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಚೀನಾದ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾಹಿತಿ ಹಂಚಿಕೊಳ್ಳುವುದನ್ನು ಆಗ್ರಹ ಪಡಿಸಿದೆ.
ಸೋಂಕಿನ ಪ್ರಕರಣಗಳ ಸಂಖ್ಯೆ, ಜಿನೇಟಿಕ್ ಸ್ವೀಕ್ವೆನ್ಸಿಂಗ್ ದತ್ತಾಂಶ, ರೋಗದ ಪರಿಣಾಮ, ಆಸ್ಪತ್ರೆಗೆ ದಾಖಲಾದವರ ಪ್ರಮಾಣ, ಐಸಿಯುನಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ, ಸಾವುಗಳು, ಲಸೀಕಿಕರಣದ ಪ್ರಯೋಜನ ಪಡೆದವರು, ಲಸಿಕೆ ಹಾಕಿಸಿಕೊಳ್ಳಬೇಕಾದವರ ಪ್ರಮಾಣ ಕುರಿತು ಕರಾರುವಕ್ಕಾದ ಮತ್ತು ನೈಜ್ಯಅವಯ ದತ್ತಾಂಶಗಳನ್ನು ಹಂಚಿಕೊಳ್ಳುವಂತೆ ವಿಶ್ವಸಂಸ್ಥೆಯ ಅಧಿಕಾರಿಗಳು ಚೀನಾಗೆ ಸೂಚನೆ ನೀಡಿದ್ದಾರೆ.
ಮೀಸಲಾತಿ ವಿಷಯದಲ್ಲಿ ಮುಖ್ಯಮಂತ್ರಿ ಟೋಪಿ ಹಾಕಿದ್ದಾರೆ : ಡಿಕೆಶಿ
ಈವರೆಗೂ ನೀಡಲಾಗಿರುವ ಕೋವಿಡ್ ಲಸಿಕೆಗೆ ಓಮಿಕ್ರಾನ್ ಮತ್ತು ಅದರ ರೂಪಾಂತರ ತಳಿಗಳ ಸ್ಪಂದನೆ ಕುರಿತು ಅಧ್ಯಯನಾತ್ಮಕ ವರದಿಯನ್ನು ಸಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ.
WHO, urges, China, share, Covid data,