ಬೆಂಗಳೂರು, ಏ.2- ತನ್ನ ಕುಟುಂಬದವರ ಜೊತೆ ಜಗಳವಾಡಿ ಪೋಷಕರನ್ನು ದೂರ ಮಾಡಿದ್ದಲ್ಲದೆ, ವಿನಾಃಕಾರಣ ಜಗಳವಾಡುತ್ತಿದ್ದರಿಂದ ಟೆಕ್ಕಿ ರಾಕೇಶ್ ಮನನೊಂದು ಪತ್ನಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ಗೆ ತುಂಬಿದುದ್ದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಪುಣೆಯಲ್ಲಿ ಪೋಷಕರೊಂದಿಗೆ ವಾಸವಾಗಿದ್ದಾಗ ಪತ್ನಿ ಗೌರಿ ಜಗಳವಾಡಿಕೊಂಡು ಪೋಷಕರಿಂದ ದೂರ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದು ದೊಡ್ಡಕಮ್ಮನ ಹಳ್ಳಿಯಲ್ಲಿ ಟೆಕ್ಕಿ ದಂಪತಿ ಮನೆ ಮಾಡಿಕೊಂಡು ವಾಸವಾಗಿದ್ದರು.
ಇಲ್ಲಿಯೂ ಸಹ ನೆಮ್ಮದಿಯಿಂದ ಬದುಕಲು ಆಕೆ ಬಿಡಲಿಲ್ಲ. ಮತ್ತೆ ಪುಣೆಗೆ ಹೋಗಿ ಬೇರೆ ಮನೆ ಮಾಡಿಕೊಂಡು ವಾಸಿಸೋಣ ಎಂದು ಪೀಡಿಸುತ್ತಿದ್ದಳು, ವಿನಾಃಕಾರಣ ಜಗಳ ವಾಡುತ್ತಿದ್ದಳು.
ಪತ್ನಿಯ ಕಿರುಕುಳದಿಂದ ಬೇರೆ ದಾರಿ ಕಾಣದೆ ಮಾ.26 ರಂದು ಆಕೆಯನ್ನು ಕೊಲೆ ಮಾಡಿ ನಂತರ ಶವವನ್ನು ಸೂಟ್‌ಕೇಸ್‌ಗೆ ತುಂಬಿ ಮನೆ ಬಾಗಿಲು ಹಾಕಿಕೊಂಡು ಹೋಗಿದ್ದು, ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಫೆನಾಯಿಲ್ ಸೇವಿಸಿದ್ದು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆರೋಪಿ ರಾಕೇಶ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.