ಪೆನ್‌ಡ್ರೈವ್‌ ಹಂಚಿದವರನ್ನು ಏಕೆ ತನಿಖೆಗೆ ಒಳಪಡಿಸಿಲ್ಲ..? : ಗೃಹಸಚಿವರಿಗೆ HDK ಪ್ರಶ್ನೆ

ಬೆಂಗಳೂರು,ಮೇ8- ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಶ್ಲೀಲ ವಿಡಿಯೋವಿದ್ದ ಪೆನ್‌ಡ್ರೈವ್‌ ಹಂಚಿಕೆ ಮಾಡಿರುವ ಆರೋಪಿಗಳನ್ನು ಏಕೆ ತನಿಖೆಗೆ ಒಳಪಡಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ವಿಡಿಯೋ ಸೋರಿಕೆ ಮಾಡಿದವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ. ಎಸ್‌ಐಟಿ ತನಿಖೆಯ ಗುರಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ಅವರ ಮೇಲೆ ಮಾತ್ರ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯ ಮಹಿಳಾ ಆಯೋಗ ಬರೆದಿದ್ದ ಪತ್ರದಲ್ಲಿ ವಿಡಿಯೋ ಬಹಿರಂಗಪಡಿಸಿದವರ … Continue reading ಪೆನ್‌ಡ್ರೈವ್‌ ಹಂಚಿದವರನ್ನು ಏಕೆ ತನಿಖೆಗೆ ಒಳಪಡಿಸಿಲ್ಲ..? : ಗೃಹಸಚಿವರಿಗೆ HDK ಪ್ರಶ್ನೆ