ಕಿಸ್ ಮಾಡುವಾಗ ಪತಿಯ ಅರ್ಧ ನಾಲಿಗೆಯನ್ನೇ ಕಚ್ಚಿದ ಪತ್ನಿ..!

Kiss

ನವದೆಹಲಿ, ಸೆ.24-ತನ್ನ ಪತಿ ನೋಡಲು ಚೆನ್ನಾಗಿಲ್ಲ ಎಂದು ಪತ್ನಿಯೊಬ್ಬಳು ಆತನಿಗೆ ಕಿಸ್ ಮಾಡುತ್ತಲೇ ಅರ್ಧ ನಾಲಿಗೆ ಕಚ್ಚಿದ ಪ್ರಕರಣವೊಂದು ರಾಷ್ಟ್ರ ರಾಜಧಾನಿ ನವದೆಹಲಿಯ ಲಾಹೋರ್‍ನಲ್ಲಿ ನಡೆದಿದೆ.

ಎಂಟು ತಿಂಗಳ ಗರ್ಭಿಣಿಯಾಗಿರುವ ಪತ್ನಿ, ತನ್ನ ಪತಿ ನೋಡಲು ಚೆನ್ನಾಗಿಲ್ಲ ಎಂದು ಆತನ ಜೊತೆ ಯಾವಾಗಲೂ ಜಗಳವಾಡುತ್ತಿದ್ದಳು. ಹಾಗಾಗಿ ಆಕೆ ಪತಿಗೆ ಕಿಸ್ ಮಾಡುತ್ತಲೇ ನಾಲಿಗೆ ಕಚ್ಚಿದ್ದಾಳೆ. ಪತಿ ಮಹಾಶಯ ತನ್ನ ಅರ್ಧ ನಾಲಿಗೆಯನ್ನೇ ಕಳೆದುಕೊಂಡಿದ್ದಾನೆ. ಈ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಪದೇ ಪದೇ ಜಗಳವಾಡುತ್ತಿದ್ದರು. ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬಂತೆ ಒಂದಾಗುತ್ತಿದ್ದರು.

ಆದರೆ ನಿನ್ನೆ ರಾತ್ರಿ ಈಕೆ ತನ್ನ ಪತಿಗೆ ಮುತ್ತು ಕೊಡಲು ಮುಂದಾಗಿ ಅರ್ಧ ನಾಲಿಗೆಯನ್ನು ಬಲಿ ಪಡೆದಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರು ಪತಿಯ ತಂದೆಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅರ್ಧ ನಾಲಿಗೆ ಕಳೆದುಕೊಂಡ ಪತಿ ಮಹಾಶಯ ಸಪ್ತರ್‍ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಸ್ತ್ರ ಚಿಕಿತ್ಸೆ ನಂತರ ಆತ ಮಾತನಾಡಲು ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. 2016ರ ನವೆಂಬರ್‍ನಲ್ಲಿ ಈ ಇಬ್ಬರೂ ವಿವಾಹವಾಗಿದ್ದರು.

Sri Raghav

Admin