ಪತ್ನಿ-ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಸ್ಥಿತಿ ಗಂಭೀರ

Social Share

ಬೆಂಗಳೂರು,ಮಾ.3- ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೆ ವಿಷ ಉಣಿಸಿ ಕೊಲೆ ಮಾಡಿ ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ನಾಗೇಂದ್ರನ ಸ್ಥಿತಿ ಇನ್ನೂ ಗಂಭೀರವಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ನಾಗೇಂದ್ರನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಪತಿಯ ಕ್ರೌರ್ಯಕ್ಕೆ ಬಲಿಯಾದ ಪತ್ನಿ ವಿಜಯ ಹಾಗೂ ಮಕ್ಕಳಾದ ದೀಕ್ಷಾ ಮತ್ತು ನಿಶಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ನಿನ್ನೆಯೇ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಕೋಣನಕುಂಟೆ ಪೆಪೊಲೀಸ್ ಠಾಣೆ ವ್ಯಾಪ್ತಿಯ ಜಂಬೂಸವಾರಿದಿಣ್ಣೆಯ ವಡ್ಡರಪಾಳ್ಯದ ನಿವಾಸಿ ನಾಗೇಂದ್ರ ಕುಡಿತದ ದಾಸನಾಗಿದ್ದು, ಕ್ಯಾನ್ಸರ್ ಖಾಯಿಲೆ ಇದೆ. ಪ್ರತಿನಿತ್ಯ ವಿನಾಃಕಾರಣ ಪತ್ನಿ ಜತೆ ಜಗಳವಾಡುತ್ತಿದ್ದನು.
ಪತಿಯ ವರ್ತನೆಯಿಂದ ವಿಜಯ ನೊಂದಿದ್ದಳು. ಈ ನಡುವೆಯೂ ತನ್ನ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಮೆಡಿಕಲ್ ಸ್ಟೋರ್‍ನಲ್ಲಿ ಕೆಲಸ ಮಾಡುತ್ತಿದ್ದರು.

40% ಸರ್ಕಾರಕ್ಕೆ ಮಾಡಾಳು ಪುತ್ರ ಮತ್ತೊಂದು ಸಾಕ್ಷಿ : ಹೆಚ್‌ಡಿಕೆ

ಊಟದ ವಿಚಾರಕ್ಕಾಗಿ ನಾಗೇಂದ್ರ ಪತ್ನಿ ಜತೆ ಜಗಳವಾಡಿ ಕಿರುಕುಳ ನೀಡುತ್ತಿದ್ದನು. ಇದೇ ವಿಚಾರವಾಗಿ ಬೇಸತ್ತು ಹಲವು ಬಾರಿ ವಿಜಯ ತನ್ನ ತಾಯಿ ಮನೆಗೆ ಹೋಗುತ್ತಿದ್ದಳು. ತಾಯಿ ಮಗಳಿಗೆ ಬುದ್ದಿ ಹೇಳಿ ತನ್ನ ಗಂಡನ ಮನೆಗೆ ಕಳುಹಿಸಿದ್ದರು.

ಪತಿಯ ಹಿಂಸೆ ಸಹಿಸಿಕೊಂಡು ಜೀವನ ನಡೆಸುತ್ತಿದ್ದರೂ ನಿನ್ನೆ ಬೆಳಗ್ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಆಹಾರದಲ್ಲಿ ಕ್ರಿಮಿನಾಶಕ ಬೆರೆಸಿಕೊಟ್ಟು ಸಾಯಿಸಿ ನಂತರ ಆತನೂ ವಿಷ ಸೇವಿಸಿ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದು, ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಣಕುಂಟೆ ಪೊಲೀಸರು ಆರೋಪಿ ನಾಗೇಂದ್ರ ಚೇತರಿಸಿಕೊಂಡ ನಂತರ ಹೆಚ್ಚಿನ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಪ್ರಶಾಂತ್ ಮಾಡಾಳ್ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

ಆರೋಪಿ ನಾಗೇಂದ್ರ ಪತ್ನಿ ಹಾಗೂ ಮಕ್ಕಳಿಗೆ ಯಾವ ಕ್ರಿಮಿನಾಶಕ ಬೆರೆಸಿದ ಆಹಾರ ತಿನ್ನಿಸಿದ್ದ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ಮಾಹಿತಿ ನಂತರವಷ್ಟೇ ತಿಳಿದು ಬರಲಿದೆ.

wife, children, killed, commit, suicide, husband,

Articles You Might Like

Share This Article